ಕೊರೋನಾ ವೈರಸ್ ಸಂಕಷ್ಟದಿಂದ ಈ ಬಾರಿ ಪ್ರಧಾನಿಯನ್ನು ಬೇಟಿಯಾಗಲು ಸಾಧ್ಯವಿರದ ಕಾರಣ ವೃಂದಾವನದ ಸಹೋದರಿಯೊಬ್ಬರು ಮೋದಿಗೆ 501 ರಾಖಿ ಮತ್ತು ಮಾಸ್ಕ್ ಕಳುಹಿಸಿ ಕೊಟ್ಟಿದ್ದಾರೆ.
ಮಥುರಾ(ಜು.31): ಕೊರೋನಾ ವೈರಸ್ ಸಂಕಷ್ಟದಿಂದ ಈ ಬಾರಿ ಪ್ರಧಾನಿಯನ್ನು ಬೇಟಿಯಾಗಲು ಸಾಧ್ಯವಿರದ ಕಾರಣ ವೃಂದಾವನದ ಸಹೋದರಿಯೊಬ್ಬರು ಮೋದಿಗೆ 501 ರಾಖಿ ಮತ್ತು ಮಾಸ್ಕ್ ಕಳುಹಿಸಿ ಕೊಟ್ಟಿದ್ದಾರೆ.
ರಾಖಿಗಳ ತುಂಬ ಪ್ರಧಾನಿ ಮೋದಿ ಫೋಟೋ ಲಗತ್ತಿಸಲಾಗಿದ್ದು, ಮಾಸ್ಕ್ ಮೇಲೆ ವೃಂದಾವನದ ಥೀಮ್ ಆಧಾರಿತ ಚಿತ್ರಗಳನ್ನು ಪ್ರಿಂಟ್ ಮಾಡಲಾಗಿದೆ. ಈ ಮೂಲಕ ಸ್ಟೇ ಸೇಫ್ ಹಾಗೂ ಆತ್ಮನಿರ್ಭರ್ ಸಂದೇಶವನ್ನೂ ನೀಡಲಾಗಿದೆ.
undefined
ರಕ್ಷಾ ಬಂಧನಕ್ಕೆ ತಯಾರಿ, ಚೀನಾ ರಾಖಿಗಿಲ್ಲ ಬೇಡಿಕೆ!
ಕಳೆದ ವರ್ಷದ ತನಕ ಬಹಳಷ್ಟು ಜನ ವಿಧವೆಯರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ರಾಖಿ ಕಟ್ಟುತ್ತಿದ್ದರು. ಆದರೆ ಈ ಬಾರಿ ಕೊರೋನಾದಿಂದಾಗಿ ಮೋದಿಯವರನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ಎನ್‌ಜಿಒ ಸುಲಭ್ ಹೋಪ್ ಫೌಂಟೇಷನ್ ತಿಳಿಸಿದೆ.
ರಾಖಿ ಹಬ್ಬದ ಎರಡು ದಿನ ಮುಂಚಿತವಾಗಿ ಶುಕ್ರವಾರ ರಾಖಿ ಪ್ರಧಾನಿ ಕಚೇರಿ ತಲುಪಲಿದೆ. ಸಹೋದರತ್ವದ ಸಂದೇಶ ಸಾರುವ ಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತದೆ.
ಪತಿ ಜೊತೆಗೆ ಬಂದು ಮೋದಿಗೆ ಪಾಕ್ ಸೋದರಿ ರಾಖಿ
ಕಳೆದ ವರ್ಷ ಪ್ರಧಾನಿಗೆ ರಾಖಿ ಕಟ್ಟಿದ ಛಬ್ಬಿ ದಾಸಿ ಮಾತನಾಡಿ, ಕಳೆದ ಕೆಲವು ತಿಂಗಳಿಂದ ಮನೆಯಲ್ಲಿದ್ದು ಬೇಜಾರಾಗಿದೆ. ಆದರೆ ರಾಖಿ ಹಾಗೂ ಮಾಸ್ಕ್ ತಯಾರಿಸುವುದು ನನಗೆ ಖುಷಿ ನೀಡುತ್ತದೆ ಎಂದಿದ್ದಾರೆ.