
ಮುಂಬೈ (ನ.01) ಅಂಗಡಿ, ಶಾಪಿಂಗ್ ಮಾಲ್, ಟ್ಯಾಕ್ಸಿ, ಕ್ಯಾಬ್ ಸೇರಿದಂತೆ ಎಲ್ಲೇ ಹೋದರೂ ಪಾವತಿಗೆ ಕ್ಯೂಆರ್ ಕೋಡ್ ಇಟ್ಟಿರುತ್ತಾರೆ. ಡಿಜಿಟಲ್ ಕ್ರಾಂತಿಯಿಂದ ಪಾವತಿ ಸುಲಭ. ಇನ್ನು ಕ್ಯಾಬ್, ಆಟೋದಲ್ಲಿ ಪ್ರಯಾಣ ಮಾಡುವಾಗ ಪಾವತಿಗಾಗಿ ಎಲ್ಲೆಡೆ ಕ್ಯೂಆರ್ ಕೋಡ್ ಅಂಟಿಸುತ್ತಾರೆ. ಹೀಗೆ ಯುವತಿಯೊಬ್ಬಳು ಕ್ಯಾಬ್ ಮೂಲಕ ಪ್ರಯಾಣ ಮಾಡುವಾಗ ಕ್ಯೂಆರ್ ಕೋಡ್ ಗಮನಿಸಿದ್ದಾಳೆ, ಮುಂಭಾಗದ ಡ್ಯಾಶ್‌ಬೋರ್ಡ್, ಹಿಂಭಾಗದ ಸೀಟು ಸೇರಿದಂತೆ ಎಲ್ಲಾ ಕಡೆ ಈ ಕ್ಯೂಆರ್ ಕೋಡ್ ಅಂಟಿಸಿದ್ದಾರೆ. ತಾನು ಕ್ಯಾಬ್ ಇಳಿದಾಗ ಇದೇ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪಾವತಿ ಮಾಡಿದರೆ ಆಯ್ತು ಎಂದು ಸುಮ್ಮನಿದ್ದಳು. ಆದರೆ ಎಲ್ಲಾ ಕಡೆ ಈ ಕ್ಯೂರ್ ಕೋಡ್ ಅಂಟಿಸುವ ಅಗತ್ಯವೇನಿತ್ತು ಅನ್ನೋ ಅನುಮಾನ ಮೂಡಿ ಚಾಲಕನ ಕೇಳಿಯೇ ಬಿಟ್ಟಳು. ಇದು ಪಾವತಿ ಮಾಡಲು ಇಟ್ಟಿರುವ ಕ್ಯೂಆರ್ ಕೋಡ್? ಆದರೆ ಉತ್ತರ ಮಾತ್ರ ಯುವತಿಗೆ ಅಚ್ಚರಿ ನೀಡಿತ್ತು. ಜೊತೆಗೆ ಚಾಲಕನ ಒಂದೇ ಮಾತಿನಿಂದ ತಕ್ಷಣವೇ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ದಾಳೆ.
ದಿವ್ಯುಷಿ ಅನ್ನೋ ಎಕ್ಸ್ ಖಾತೆಯಲ್ಲಿ ಈ ರೋಚಕ ಕ್ಯಾಬ್ ಪ್ರಯಾಣದಲ್ಲಿ ಕ್ಯೂಆರ್ ಕೋಡ್ ಕತೆ ಹಂಚಿಕೊಂಡಿದ್ದಾಳೆ. ಮುಂಬೈನಲ್ಲಿ ದಿವ್ಯುಷಿ ಪ್ರಯಾಣಕ್ಕಾಗಿ ಕಪ್ಪು ಹಾಗೂ ಹಳದಿ ಬಣ್ಣದ ಸುದೀರ್ಘ ಇತಿಹಾಸದ ಕ್ಯಾಬ್ ಬುಕ್ ಮಾಡಿದ್ದಾಳೆ. ಕ್ಯಾಬ್ ಹತ್ತಿ ಪ್ರಯಾಣ ಆರಂಭಿಸಿದ್ದಾಳೆ. ಈ ವೇಳೆ ಈ ಕ್ಯೂಆರ್ ಕೋಡ್ ಕುರಿತು ಚಾಲಕನ ಪ್ರಶ್ನಿಸಿದ್ದಾಳೆ. ಇದು ಪಾವತಿಗೆ ಇಟ್ಟಿರುವ ಕ್ಯೂಆರ್ ಕೋಡ್ ಅಲ್ಲ, ಇದ ನನ್ನ ಮಗನ ಯೂಟ್ಯೂಬ್ ಚಾನೆಲ್. ಇಲ್ಲಿ ಮಗನ ರ್ಯಾಪ್ ಮ್ಯೂಸಿಕ್ ಇರಲಿ ಎಂದಿದ್ದಾರೆ.
ಚಾಲಕನ ಮಾತು ಕೇಳಿ ಯುವತಿ ಅಚ್ಚರಿಗೊಂಡಿದ್ದಾಳೆ. ಮುಂಬೈನಲ್ಲಿ ಈ ಸಂಸ್ಕೃತಿ ನನಗೆ ಹೆಮ್ಮೆ ಎನಿಸುತ್ತಿದೆ. ತಂದೆ ತನ್ನ ಮಗನ ಯೂಟ್ಯೂಬ್ ಚಾನೆಲ್ ಪ್ರಚಾರ ಮಾಡುತ್ತಿದ್ದಾನೆ. ತಂದೆಯ ಮೂಲಕ ಮಗನ ಚಾನೆಲ್‌ಗೆ ವೀಕ್ಷಣೆ, ಚಂದಾರರು ಹೆಚ್ಚುತ್ತಿದ್ದಾರೆ. ಸರಳ ಎನಿಸಿದರೂ ಅತ್ಯಂತ ಪರಿಣಾಮಕಾರಿಯಾಗಿದೆ. ಇದು ನನಗೆ ತುಂಬಾ ಇಷ್ಟವಾಯಿತು ಎಂದು ಯುವತಿ ಹೇಳಿಕೊಂಡಿದ್ದಾಳೆ. ತಕ್ಷಣವೇ ಈ ಕ್ಯೂಆರ್ ಕೋಡ್ ಫೋಟೋ ತೆಗೆದು ದಿವ್ಯುಷಿ ಸಿನ್ಹ ತಮ್ಮ ಎಕ್ಸ್ ಮೂಲಕ ಪೋಸ್ಟ್ ಮಾಡಿದ್ದಾರೆ.
ಈ ಕ್ಯೂರ್ ಕೋಡ್ ಸ್ಕ್ಯಾನ್ ಮಾಡಿದಾಗ ನೇರವಾಗಿ ಯೂಟ್ಯೂಬ್ ಚಾನೆಲ್ ತೆರೆದಕೊಳ್ಳಲಿದೆ. ಇಲ್ಲಿ ನಿಮ್ಮನ್ನು ಕ್ಯಾಬ್ ಚಾಲಕನ ಮಗ ಸ್ವಾಗತ ನೀಡುತ್ತಾನೆ. ಹೆಲೋ, ನಾನು ರಾಜ್, ನಾನು ಟ್ಯಾಕ್ಸಿ ಚಾಲಕನ ಪುತ್ರ. ಸ್ಕ್ಯಾನ್ ಮಾಡಿ, ಇದು ನನ್ನ ಯೂಟ್ಯೂಬ್ ಚಾನೆಲ್. ಇಲ್ಲಿ ನಾನು ರ್ಯಾಪ್ ಮ್ಯೂಸಿಕ್ ಹಂಚಿಕೊಳ್ಳುತ್ತೇನೆ. ಶೇರ್ ಮಾಡಿ, ಸಬ್‌ಸ್ಕ್ರೈಬ್ ಮಾಡಿ, ಲೈಕ್ ಮಾಡಿ, ಧನ್ಯವಾದಗಳು ಎಂದು ಯೂಟ್ಯೂಬ್ ಚಾನೆಲ್ ಸಂಕ್ಷಿಪ್ತ ವಿವರಣೆ ನೀಡುತ್ತಿದೆ.
ಇದೀಗ ದಿವ್ಯುಷಿ ಸಿನ್ಹ ಈ ಕ್ಯೂಆರ್ ಕೋಡ್ ಫೋಟೋ ಹಾಗೂ ಮಾಹಿತಿ ನೀಡಿದ ಬೆನ್ನಲ್ಲೇ ಹಲವರು ಸ್ಕ್ಯಾನರ್ ಮೂಲಕ ಕ್ಯಾಬ್ ಚಾಲಕನ ಮಗನ ಯ್ಯೂಟ್ಯೂಬ್ ಚಾನೆಲ್ ಭೇಟಿ ನೀಡಿದ್ದಾರೆ. ಹಲವರು ಸಬ್‌ಸ್ಕ್ರೈಬ್ ಮಾಡಿದ್ದಾರೆ. ಮ್ಯೂಸಿಕ್ ವೀಕ್ಷಿಸಿದ್ದಾರೆ. ಒಂದೇ ಬಾರಿ ಮಗನ ಯ್ಯೂಟ್ಯೂಬ್ ಚಾನೆಲ್‌ಗೆ ಹೆಚ್ಚಿನ ಸಬ್‌ಸ್ಕ್ರೈಬರ್ ಆಗಮಿಸಿದ್ದಾರೆ. ಇತ್ತ ಕ್ಯಾಬ್ ಚಾಲಕ ಕೂಡ ಸಂಭ್ರಮದಲ್ಲಿದ್ದರೆ, ಇತ್ತ ದಿವ್ಯುಷಿ ಸಿನ್ಹ ಕೂಡ ಹೆಚ್ಚು ಸಂಭ್ರಮಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ