ಬ್ರಿಟನ್ನಿಂದ ಬಂದ ಸೋಂಕಿತ ಮಹಿಳೆ ದಿಲ್ಲಿಯಿಂದ ಎಸ್ಕೇಪ್‌!

Kannadaprabha News   | Asianet News
Published : Dec 25, 2020, 09:58 AM IST
ಬ್ರಿಟನ್ನಿಂದ ಬಂದ ಸೋಂಕಿತ ಮಹಿಳೆ ದಿಲ್ಲಿಯಿಂದ ಎಸ್ಕೇಪ್‌!

ಸಾರಾಂಶ

ಬ್ರಿಟನ್ನಿಂದ ಬಂದ ಸೋಂಕಿತ ಮಹಿಳೆ ದಿಲ್ಲಿಯಿಂದ ಎಸ್ಕೇಪ್‌ | ರೈಲಿನಲ್ಲಿ ಆಂಧ್ರಕ್ಕೆ ತೆರಳುವ ವೇಳೆ ಮಹಿಳೆ ಪತ್ತೆ

ನವದೆಹಲಿ(ಡಿ.25): ಬ್ರಿಟನ್‌ನಿಂದ ದೆಹಲಿಗೆ ಆಗಮಿಸಿದ ಮಹಿಳೆಯೊಬ್ಬರಿಗೆ ಕೊರೋನಾ ಪಾಸಿಟಿವ್‌ ಬಂದಿದ್ದು, ಆಕೆ ದೆಹಲಿಯ ಕ್ವಾರಂಟೈನ್‌ ಕೇಂದ್ರದಿಂದ ಪರಾರಿಯಾಗಿ ಆಂಧ್ರಪ್ರದೇಶದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಬುಧವಾರ ರಾತ್ರಿ ನಡೆದಿದೆ.

ಡಿ.21ರಂದು ಬ್ರಿಟನ್‌ನಿಂದ ಶಿಕ್ಷಕಿಯೊಬ್ಬರು ದೆಹಲಿಗೆ ಆಗಮಿಸಿದ್ದರು. ಕೊರೋನಾ ಟೆಸ್ಟ್‌ನಲ್ಲಿ ಆಕೆಗೆ ಪಾಸಿಟಿವ್‌ ಬಂದಿದ್ದರಿಂದ ಕ್ವಾರಂಟೈನ್‌ ಕೇಂದ್ರದಲ್ಲಿರಿಸಲಾಗಿತ್ತು. ಆದರೆ, ತನ್ನನ್ನು ಕರೆದುಕೊಂಡು ಹೋಗಲು ಆಂಧ್ರಪ್ರದೇಶದಿಂದ ಬಂದಿದ್ದ ಮಗನ ಜೊತೆಗೆ ಆಕೆ ಅಲ್ಲಿಂದ ಪರಾರಿಯಾಗಿದ್ದರು.

ಏಪ್ರಿಲ್‌ನಲ್ಲಿ ಮಡಿಕಲ್ ಸ್ಟೋರ್‌ನಲ್ಲೂ ಕೊರೋನಾ ಲಸಿಕೆ ಲಭ್ಯ..?

ನಂತರ ಅವರು ಎಪಿ ಎಕ್ಸ್‌ಪ್ರೆಸ್‌ ರೈಲಿನ ಫಸ್ಟ್‌ ಕ್ಲಾಸ್‌ ಬೋಗಿಯಲ್ಲಿ ಆಂಧ್ರಕ್ಕೆ ಪ್ರಯಾಣಿಸಿದ ವಿಷಯವನ್ನು ದೆಹಲಿ ಪೊಲೀಸರು ಆಂಧ್ರಪ್ರದೇಶದ ಪೊಲೀಸರಿಗೆ ತಿಳಿಸಿದ್ದರು. ಬುಧವಾರ ರಾತ್ರಿ ಆಕೆ ಮತ್ತು ಮಗ ರಾಜಮಹೇಂದ್ರವರಮ್‌ಗೆ ಬಂದಿಳಿಯುತ್ತಿದ್ದಂತೆ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಶಿಕ್ಷಕಿಗೆ ಕೊರೋನಾದ ಲಕ್ಷಣಗಳೇನೂ ಇಲ್ಲ. ಹೀಗಾಗಿ ಆಕೆಗೆ ಹೋಮ್‌ ಕ್ವಾರಂಟೈನ್‌ ಮಾತ್ರ ಸಾಕು. ಆಕೆಗೆ ಬ್ರಿಟನ್ನಿನಲ್ಲಿ ಪತ್ತೆಯಾದ ಹೊಸ ಸೋಂಕೇನಾದರೂ ತಗಲಿದೆಯೇ ಎಂಬುದನ್ನು ಪರೀಕ್ಷಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂಡಿಗೋ ಅವಾಂತರದ ಬಳಿಕ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕನ ಫೋಟೋ ಭಾರಿ ವೈರಲ್
ಬಾಲಕಿಯ ಮುಗ್ದ ನಗುವಿಗೆ ಫಿದಾ, ಸರ್ಕಾರಿ ಶಾಲಾ ಟೀಚರ್ ಹಂಚಿಕೊಂಡ ವಿಡಿಯೋ ವೈರಲ್