ಕೋರ್ಟ್​ನಲ್ಲಿ ಕೋಲಾಹಲ: ಜಡ್ಜ್​ ಸೀಟಲ್ಲಿ ಕುಳಿತು ಆರ್ಡರ್​ ಆರ್ಡರ್, ನಾನೇ ಜಡ್ಜ್​​ ಎಂದ ಮಹಿಳೆ- ಮುಂದೇನಾಯ್ತು

Published : Jun 13, 2026, 08:21 PM IST
Woman in court

ಸಾರಾಂಶ

 ಮಹಿಳೆಯೊಬ್ಬಳು ನ್ಯಾಯಾಧೀಶರ ಕುರ್ಚಿಯ ಮೇಲೆ ಕುಳಿತು ತಾನೇ ಜಡ್ಜ್ ಎಂದು ಘೋಷಿಸಿಕೊಂಡು 'ಆರ್ಡರ್ ಆರ್ಡರ್' ಎಂದು ಕೂಗಿದಳು. ಸುಮಾರು ಒಂದು ಗಂಟೆ ಕಾಲ ನಡೆದ ಈ ನಾಟಕದ ನಂತರ, ಆಕೆ ಮಾನಸಿಕವಾಗಿ ಅಸ್ವಸ್ಥಳೆಂದು ತಿಳಿದುಬಂದಿದ್ದು, ಭದ್ರತಾ ಸಿಬ್ಬಂದಿ ಆಕೆಯನ್ನು ಕುಟುಂಬಕ್ಕೆ ಒಪ್ಪಿಸಿದ್ದಾರೆ.

ಉತ್ತರ ಪ್ರದೇಶದ ವಾರಣಾಗಿ ಕೋರ್ಟ್​ನಲ್ಲಿ ಕುತೂಹಲ ಹಾಗೂ ಶಾಕಿಂಗ್​ ಎನ್ನುವಂಥ ಘಟನೆಯೊಂದು ನಡೆದಿದೆ. ವಾರಣಾಸಿ ಜಿಲ್ಲಾ ನ್ಯಾಯಾಲಯದಲ್ಲಿ ಮಹಿಳೆಯೊಬ್ಬಳು ನ್ಯಾಯಾಲಯದ ಕೋಣೆಯೊಳಕ್ಕೆ ನುಗ್ಗಿ ಜಿಲ್ಲಾ ನ್ಯಾಯಾಧೀಶರ ಕುರ್ಚಿ ಮೇಲೆ ಕುಳಿತು ಇವತ್ತು ತಾನು ಜಡ್ಜ್​, ಎಲ್ಲರೂ ಸುಮ್ಮನಿರಿ ಎಂದು ಆರ್ಡರ್​ ಆರ್ಡರ್​ ಎಂದು ಹೇಳಿದಾಗ ಕೋರ್ಟ್​ನಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಇದರ ವಿಡಿಯೋ ವೈರಲ್​ ಆಗಿದೆ.

ಘಟನೆ ನಡೆದಾಗ ಅಲ್ಲಿಯ ಜಿಲ್ಲಾ ನ್ಯಾಯಾಧೀಶರು ರಜೆಯಲ್ಲಿದ್ದರು ಎಂದು ವಾರಣಾಸಿ ಕೇಂದ್ರ ಬಾರ್‌ ಅಸೋಸಿಯೇಷನ್‌ ಪ್ರಧಾನ ಕಾರ್ಯದರ್ಶಿ ಆಶಿಶ್‌ ಸಿಂಗ್‌ ಹೇಳಿದ್ದಾರೆ. ಮಹಿಳೆ ನ್ಯಾಯಾಲಯದ ಕೋಣೆಯೊಳಗೆ ಹೋಗಿ, ಜಿಲ್ಲಾ ನ್ಯಾಯಾಧೀಶರ ಕುರ್ಚಿಯ ಮೇಲೆ ಕುಳಿತು, ಅಲ್ಲಿದ್ದವರಿಗೆ ತಾನು ಜಿಲ್ಲಾ ನ್ಯಾಯಾಧೀಶೆ ಎಂದು ಹೇಳಿಕೊಂಡು ಸೂಚನೆಗಳನ್ನು ನೀಡಲು ಪ್ರಾರಂಭಿಸಿದರು ಎಂದಿದ್ದಾರೆ. ನ್ಯಾಯಾಧೀಶ ಸೀಟಿನ ಮೇಲೆ ಕುಳಿತು ಎಲ್ಲರಿಗೂ ಸುಮ್ಮನಿರುವಂತೆ ಹೇಳಿ ಆರ್ಡರ್​ ಆರ್ಡರ್​ ಎಂದಿದ್ದಾಳೆ. ಇಂದು ನಾನು ಜಿಲ್ಲಾ ನ್ಯಾಯಾಧೀಶೆ. ಸಾಕ್ಷಿಗಳು ಮತ್ತು ಸಾಕ್ಷ್ಯಗಳನ್ನು ನನ್ನ ಮುಂದೆ ಹಾಜರುಪಡಿಸಿ ಎಂದು ಕೂಗಿರುವುದಾಗಿ ತಿಳಿದುಬಂದಿದೆ.

ಕೋರ್ಟ್​ನಲ್ಲಿ ಕೇಸ್​ ಪೆಂಡಿಂಗ್​?

ಈ ನಾಟಕ ಸುಮಾರು ಒಂದು ಗಂಟೆ ಕಾಲ ನಾಟಕ ನಡೆಯಿತು. ನಂತರ ಭದ್ರತಾ ಸಿಬ್ಬಂದಿ ಆಕೆಯನ್ನು ಕುರ್ಚಿಯಿಂದ ಇಳಿಸಿ ಕರೆದುಕೊಂಡು ಹೋಗಿದ್ದಾರೆ. ಆಕೆಯ ನಡವಳಿಕೆಯು ಆಕೆ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳು ನಂತರ ತಿಳಿಸಿದ್ದಾರೆ. ಆದ್ದರಿಂದ, ಆಕೆಯನ್ನು ನಂತರ ಕುಟುಂಬ ಸದಸ್ಯರ ಬಳಿ ಕಳುಹಿಸಲಾಯಿತು. ಅಷ್ಟಕ್ಕೂ ಈ ಮಹಿಳೆಯ ಕೇಸ್​ ಇನ್ನೂ ಇದೇ ಕೋರ್ಟ್​ನಲ್ಲಿ ಪೆಂಡಿಂಗ್​ನಲ್ಲಿ ಇದೆ. ಆಗಾಗ್ಗೆ ಈಕೆ ಕೋರ್ಟ್​ಗೆ ಬರುತ್ತಿದ್ದಾಳೆ. ಕೋರ್ಟ್​ ಅಲೆದು ಅಲೆದೋ ಏನೋ ಮಾನಸಿಕ ಸ್ಥಿಮಿತ ಕಳೆದುಕೊಂಡಿರಬೇಕು ಎನ್ನಲಾಗಿದೆ. ಮೊದಲಿಗೆ ಈಕೆಯನ್ನು ಕಂಟೋನ್ಮೆಂಟ್‌ ಪೊಲೀಸ್‌‍ ಠಾಣೆಗೆ ಕರೆದೊಯ್ಯಲಾಯಿತು. ಬಳಿಕ ಆಕೆ ಮಾನಸಿಕವಾಗಿ ಅಸ್ವಸ್ಥಳು ಎನ್ನುವುದು ತಿಳಿದುಬಂದಿದೆ.

ಮಾನಸಿಕ ಅಸ್ವಸ್ಥೆ

ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಯಜುವೇಂದ್ರ ವಿಕ್ರಮ್ ಸಿಂಗ್ ರಜೆಯಲ್ಲಿದ್ದಾಗ ಬೆಳಿಗ್ಗೆ 9:00 ಗಂಟೆಗೆ ಈ ಘಟನೆ ಸಂಭವಿಸಿದೆ. ನ್ಯಾಯಾಲಯದ ಕೋಣೆಯನ್ನು ಪ್ರವೇಶಿಸಿದ ಮಹಿಳೆ, ನ್ಯಾಯಾಧೀಶರು ಸಾಮಾನ್ಯವಾಗಿ ಎಷ್ಟು ಗಂಟೆಗೆ ಬರುತ್ತಾರೆ ಎಂದು ಕೇಳಿದ್ದಾಳೆ. ಅವರು ರಜೆಯ ಮೇಲೆ ಇದ್ದಾರೆ ಎಂದು ತಿಳಿಯುತ್ತಲೇ ಆಕೆಯ ಮನಸ್ಸಿಗೆ ಘಾಸಿಯಾದಂತಿದೆ. ಕೊನೆಗೆ ಮಾನಸಿಕ ಸ್ಥಿಮಿತ ಕಳೆದುಕೊಂಡು ಜಡ್ಜ್​ ಸೀಟಿನ ಮೇಲೆ ಕುಳಿತು ಈ ರೀತಿ ವರ್ತಿಸಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸಿಬ್ಬಂದಿ ಮತ್ತು ವಕೀಲರು ಅವಳನ್ನು ಕೆಳಗಿಳಿಯುವಂತೆ ಮನವೊಲಿಸಲು ಹಲವಾರು ಪ್ರಯತ್ನಗಳನ್ನು ಮಾಡಿದರೂ ಅದು ಸಾಧ್ಯವಾಗಿರಲಿಲ್ಲ. ಸುಮಾರು ಒಂದು ಗಂಟೆ ಇದೇ ರೀತಿ ಆಗಿರುವುದಾಗಿ ತಿಳಿದುಬಂದಿದೆ.

ಮಹಿಳೆ ಭದ್ರತೆಯನ್ನು ತಪ್ಪಿಸಿಕೊಂಡು ನ್ಯಾಯಾಲಯದ ಆವರಣವನ್ನು ಹೇಗೆ ಪ್ರವೇಶಿಸಿದರು ಎಂಬುದರ ಕುರಿತು ಕರ್ತವ್ಯದಲ್ಲಿದ್ದ ಅಧಿಕಾರಿಗಳಿಂದ ವಿವರಣೆಯನ್ನು ಕೇಳಲಾಗಿದೆ. ಮಹಿಳೆ ಈ ಹಿಂದೆ ಇದೇ ರೀತಿಯಲ್ಲಿ ನ್ಯಾಯಾಧೀಶರ ಕುರ್ಚಿಯನ್ನು ಆಕ್ರಮಿಸಿಕೊಂಡಿದ್ದಳು ಎಂದು ಸ್ಥಳೀಯ ವಕೀಲರು ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜೂನ್‌ 15ಕ್ಕೆ ದಳಪತಿ ವಿಜಯ್ ಬಾಳಲ್ಲಿ ದೊಡ್ಡ ತಿರುವು: ಚೆನ್ನೈ ನ್ಯಾಯಾಲಯದ ಹಾಲ್‌ ಭವಿಷ್ಯ ಬರೆಯಲಿದೆ!
ಅಸ್ಸಾಂನಲ್ಲಿ IAF ವಿಮಾನ ಪತನ; ರನ್‌ವೇ ಮೇಲೆಯೇ ಹೊತ್ತಿ ಉರಿದ ಎಎನ್-32, ಐವರ ಸಾವು, ಕೋ-ಪೈಲಟ್ ಪವಾಡಸದೃಶ ಪಾರು