ಮಹಿಳೆಯ ಸೀರೆ ಕಳಚಲು ಯತ್ನ: 6 ಪೊಲೀಸರು ಸಸ್ಪೆಂಡ್, ಓರ್ವ ಅರೆಸ್ಟ್!

By Suvarna News  |  First Published Jul 9, 2021, 5:17 PM IST

* ಉತ್ತರ ಪ್ರದೇಶದ ಲಖೀಂಪುರ್‌ ಖೀರೀಯಲ್ಲಿ ಮಹಿಳೆಯ ಸೀರೆ ಕಳಚುವ ಯತ್ನ

* 6 ಪೊಲೀಸರು ಸಸ್ಪೆಂಡ್, ಓರ್ವ ಅರೆಸ್ಟ್

* ಪಂಚಾಯತ್ ಚುನಾವಣಾ ಹೊಸ್ತಿಲಲ್ಲಿ ಭಾರೀ ಹಿಂಸಾಚಾರ


ಲಕ್ನೋ(ಜು.09): ಉತ್ತರ ಪ್ರದೇಶದ ಲಖೀಂಪುರ್‌ ಖೀರೀಯಲ್ಲಿ ಮಹಿಳೆಯೊಬ್ಬಳ ಸೀರೆ ಕಳಚಲು ಯತ್ನಿಸಿದ ಪ್ರಕರಣ ಸಂಬಂಧ ಆರು ಮಂದಿ ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದೆ. ಸಸ್ಪೆಂಡ್‌ ಆದವರು ಸಿಒ, ಇಬ್ಬರು ಇನ್ಸ್‌ಪೆಕ್ಟರ್ ಹಾಗೂ ಮೂವರು ಸಬ್‌ ಇನ್ಸ್‌ಪೆಕ್ಟರ್‌ ಆಗಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗದ್ದು, ಮತ್ತೊಬ್ಬ ಆರೋಪಿಯ ಹುಡುಕಾಟಕ್ಕಾಗಿ ನಾಲ್ಕು ಪೊಲೀಸರ ತಂಡವನ್ನು ನೇಮಕಗೊಳಿಸಲಾಗಿದೆ. ಬಿಜೆಪಿ ಸಂಸದ ಮತ್ತು ರಾಷ್ಟ್ರೀಯ ಉಪಾಧ್ಯಕ್ಷೆ ರೇಖಾ ವರ್ಮಾ ಅವರ ಪ್ರತಿನಿಧಿಯೂ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. 

ಪರ ಪುರುಷನ ಸಂಗಕ್ಕೆ ಅಡ್ಡಿಯಾದ ಗಂಡನನ್ನೇ ಕೊಂದ ಹೆಂಡ್ತಿ..!

Tap to resize

Latest Videos

ಪಾಸ್‌ಗಾಂವ್ ಬ್ಲಾಕ್‌ನಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ಮಹಿಳೆ ಅಭ್ಯರ್ಥಿ ಮೇಲಿನ ಅಮಾನವೀಯ ಕೃತ್ಯಕ್ಕೆ ಸಂಬಂಧಿಸಿದಂತೆ ಪಾಸ್‌ಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದರೋಡೆ, ಕಿರುಕುಳ, ಗಲಭೆ ಮೊದಲಾದ ಗಂಭೀರ ಪ್ರಕರಣಗಳಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಗುರುತಿಸಲಾಗಿದ್ದು, ಅನೇಕ ಅಪರಿಚಿತರ ವಿರುದ್ಧವೂ ಪ್ರಕರಣಗಳು ದಾಖಲಾಗಿವೆ.

ಉತ್ತರಪ್ರದೇಶ ರಾಜ್ಯದಲ್ಲಿ ಪಂಚಾಯತ್ ಚುನಾವಣೆ ನಡೆಯಲಿದೆ. ಈ ನಡುವೆ ಗುರುವಾರ ಭಾರೀ ಹಿಂಸಾಚಾರ, ಹಲ್ಲೆ ಪ್ರಕರಣಗಳು ವರದಿಯಾಗಿದ್ದವು. ಅನೇಕ ಕಡೆ ಗುಂಡುಗಳು ಮತ್ತು ಗ್ರೆನೇಡ್‌ ದಾಳಿಯೂ ನಡೆದಿದೆ. ಅನೇಕ ಕಡೆ ಬಿಜೆಪಿಗರು ತಮ್ಮ ಬ್ಲಾಕ್‌ನ ಮುಖ್ಯ ಅಭ್ಯರ್ಥಿಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಿಲ್ಲ, ಅವರ ನಾಮಪತ್ರವನ್ನು ಹರಿದು ಹಾಕಿದ್ದಾರೆ ಎಂದು ಸಮಾಜವಾದಿ ಪಕ್ಷ ಆರೋಪಿಸಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಬಿಗ್ ರಿಲೀಫ್

ಹೀಗಿರುವಾಗ ರಾಜಧಾನಿ ಲಖನೌದಿಂದ 65 ಕಿ.ಮೀ ದೂರದಲ್ಲಿರುವ ಸೀತಾಪುರದ ಕಾಸ್ಮಂಡದಲ್ಲಿ ಬ್ಲಾಕ್ ಮುಖ್ಯ ಅಭ್ಯರ್ಥಿ ಮುನ್ನೀ ದೇವಿ ನಾಮಪತ್ರ ಸಲ್ಲಿಸಲು ಹೊರಟಿದ್ದರು. ಹೀಗಿರುವಾಗ ಅಲ್ಲಿ ಬಿಜೆಪಿ ಶಾಸಕರು ಮತ್ತು ಅವರ ಕಾರ್ಯಕರ್ತರು ನಿಂತಿದ್ದರು. ಆದರೆ ಈ ನಡುವೆ ಅಲ್ಲಿ ನಡೆದ ಗುಂಡು ಮತ್ತು ಗ್ರೆನೇಡ್‌ ದಾಳಿ ನಡುವೆ ಪೊಲೀಸರೇ ಖುದ್ದು ತಮ್ಮ ಪ್ರಾಣ ಉಳಿಸಿಕೊಳ್ಳಲು ಓಡಿದ್ದಾರೆ. ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

click me!