ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದು, ಬೇರೆಯಾದ್ರೆ ಮಹಿಳೆ ಜೀವನಾಂಶಕ್ಕೆ ಅರ್ಹಳು: ಹೈ ಕೋರ್ಟ್

Published : Apr 06, 2024, 05:53 PM ISTUpdated : Apr 07, 2024, 03:49 PM IST
ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದು, ಬೇರೆಯಾದ್ರೆ ಮಹಿಳೆ ಜೀವನಾಂಶಕ್ಕೆ ಅರ್ಹಳು: ಹೈ ಕೋರ್ಟ್

ಸಾರಾಂಶ

ಕಾಲ ಬದಲಾಗಿದೆ. ಒಂದು ಗಂಡು ಮತ್ತೊಂದು ಒಂದೇ ಸೂರಿನಡಿ ಇರಬೇಕು ಅಂದ್ರೆ ಮದುವೆ ಎಂಬ ಬಾಂಧವ್ಯಕ್ಕೆ ಒಳಗಾಗಲೇಬೇಕೆಂಬ ನಿರ್ಬಂಧ ಈಗಿಲ್ಲ. ಹಾಗಂಥ ಹೆಣ್ಣಿನ ಸಿಕ್ಯೂರಿಟಿ ಏನೆಂಬ ಪ್ರಶ್ನೆಗೆ ಇದೀಗ ಮಧ್ಯಪ್ರದೇಶ ಹೈ ಕೋರ್ಟ್ ಉತ್ತರಿಸಿದೆ.

ಮದುವೆಯಾಗದೇ ಪುರುಷ, ಮಹಿಳೆ ಇಬ್ಬರು ಸಾಕಷ್ಟು ಎನ್ನಬಹುದಾದ ಅವಧಿಗೆ ಲಿವ್‌ಇನ್‌ ಸಂಗಾತಿಗಳಾಗಿದ್ದು, ಬೇರ್ಪಟ್ಟಾಗ ಮಹಿಳೆ ಜೀವನಾಂಶಕ್ಕೆ ಅರ್ಹಳು ಎಂದು ಮಧ್ಯಪ್ರದೇಶದ ಹೈಕೋರ್ಟ್‌ ತೀರ್ಪು ನೀಡಿದೆ. ಈ ಮೂಲಕ ಲಿವ್ಇನ್‌ ರಿಲೇಷನ್‌ಶಿಪ್‌ಗಳಲ್ಲಿ ಮಹಿಳೆಯರ ಹಕ್ಕನ್ನು ಎತ್ತಿ ಹಿಡಿಯುವ ಮೂಲಕ ಮಹತ್ತರ ಆದೇಶ ಹೊರಡಿಸಿದೆ.

ಅವಿವಾಹಿತ ಪುರುಷ ಮತ್ತು ಮಹಿಳೆ ಇಬ್ಬರೂ ಸಾಕಷ್ಟು ಸಮಯ ಒಂದಾಗಿ ಜೀವನ ಸಾಗಿಸಿದ್ದಾರೆ. ಈ ಸಂಬಂಧದಲ್ಲಿ ಅವರಿಗೆ ಮಗು ಕೂಡಾ ಜನಿಸಿದೆ. ನಂತರ ಕಾರಣಾಂತರದಿಂದ ಜೋಡಿ ಬೇರಾಗಿದೆ. ಆದರೆ ಇದರ ಹೊರತಾಗಿಯೂ ಮಹಿಳೆ ಜೀವನಾಂಶ ಪಡೆಯಲು ಅರ್ಹಳಾಗಿರುತ್ತಾಳೆ ಎಂದು ಕೋರ್ಟ್‌ ಹೇಳಿದೆ. ವಿವಾಹಿತ ಸಂಬಂಧಗಳಲ್ಲಿ ಮಾತ್ರವೇ ಜೀವನಾಂಶಕ್ಕೆ ಆದೇಶ ನೀಡಲಾಗುವ ಕಾರಣ ಈ ತೀರ್ಪು ಸಾಕಷ್ಟು ಮಹತ್ವ ಪಡೆದುಕೊಂಡಿದೆ.ಜೊತೆಗೆ ಈ ಪ್ರಕರಣದಲ್ಲಿ ಪ್ರತ್ಯೇಕವಾಗಿರುವ ಪುರುಷ ತನ್ನ ಮಾಜಿ ಜೀವನ ಸಂಗಾತಿಗೆ ಮಾಸಿಕ 1500 ಜೀವನಾಂಶ ನೀಡಬೇಕು ಎಂದು ಅಧೀನ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ಲಿವ್‌ ಇನ್‌ ರಿಲೇಷನ್‌ಷಿಪ್‌ ಅನ್ನೋದು ಮದುವೆಯಲ್ಲ: ಕೇರಳ ಹೈಕೋರ್ಟ್‌!

ಬದಲಾದ ಕಾಲ ಘಟ್ಟದಲ್ಲಿ ಒಂದು ಹೆಣ್ಣು ಹಾಗೂ ಗಂಡು ಒಟ್ಟಿಗೇ ಬದುಕಲು ಮದುವೆ ಎಂಬ ಕಟ್ಟುಪಾಡಿನ ಬಂಧನ ಬೇಕಾಗಿಲ್ಲ. ತಮ್ಮಿಚ್ಛೆಯಂತೆ ಓದಿ, ತಮ್ಮ ಕಾಲ ಮೇಲೆ ನಿಲ್ಲಲು ಬಹುಬೇಗ ಸಮರ್ಥರಾಗುವ ಇಂದಿನ ಯುವ ಜನಾಂಗ ತಮ್ಮ ಮದುವೆ ಬಗ್ಗೆಯೂ ತಮ್ಮಿಷ್ಟದಂತೆಯೇ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಮದುವೆ ಎಂಬ ಬಂಧನ ಬೇಡ, ಮಕ್ಕಳೆಂಬ ಜವಾಬ್ದಾರಿ ಬೇಡ ಎಂದು ನುಣುಚಿಕೊಳ್ಳುತ್ತಿರುವ  ಇಂದಿನ ಯುವ ಪಡೆ ಲಿನ್ ಇನ್ ರಿಲೇಷನ್‌ಶಿಪ್ ಅಥವಾ ಸಹ ಜೀವನ ನಡೆಸಲು ಹೆಚ್ಚು ಒತ್ತು ನೀಡುತ್ತಿದ್ದಾರೆ. ಆದರೆ, ಒಂದಿಷ್ಟು ದಿನ ಅಥವಾ ವರ್ಷಗಳ ಒಟ್ಟಿಗಿದ್ದು ಮತ್ತೆ ಬೇರೆಯಾದರೆ ಹೆಣ್ಣಿನ ಗತಿ ಏನು? ಅಕಸ್ಮಾತ್ ತುಸು ಸುದೀರ್ಘ ಸಂಬಂಧದಲ್ಲಿರೋ ಜೋಡಿಗೆ ಮದುವಾದರೆ ಆ ಸಂಬಂಧ ಕೇವಲ ಸಹ ಜೀವನವಾಗುವುದಿಲ್ಲ. ಸಮಾಜದ ಕಟ್ಟುಪಾಡಿನಲ್ಲಿ ಮದ್ವೆಯಾಗುವ, ಕಾನೂನು ವ್ಯಾಪ್ತಿಯಲ್ಲಿ ಬರೋ ವೈವಾಹಿಕ ಜೀವನದಂತೆಯೇ ಆಗಲಿದ್ದು, ಅಕಸ್ಮಾತ್ ಜೋಡಿ ಬೇರೆಯಾದರೆ ಜೀವನಾಂಶ ಪಡೆಯಲೂ ಹೆೆಣ್ಣು ಅರ್ಹಳು ಎಂಬ ಈ ತೀರ್ಪು ಮಹಿಳೆಯರಿಗೆ ಬಲ ನೀಡಿದೆ. 

ಆದರೆ, ಯಾವುದೇ ಕಾನೂನು ಚೌಕಟ್ಟಿಲ್ಲದೇ ಸಂಬಂಧವನ್ನು ಸೃಷ್ಟಿಸಿಕೊಳ್ಳುವ ಜೋಡಿಯೊಂದು ಈ ರೀತಿಯ ಹಕ್ಕು ಪಡೆಯಲು ಏನು ಮಾಡಬೇಕು ಎಂಬುವುದು ಮತ್ತೊಂದು ಪ್ರಶ್ನೆ. ಸೂಕ್ತ ಸಾಕ್ಷಿ, ದಾಖಲೆ ಮದುವೆಯಂತೆ ಲೀವ್ ಇನ್ ರಿಲೇಶನ್ ಶಿಪ್‌ಗೂ ಇಟ್ಟುಕೊಳ್ಳುವುದು ಅನಿವಾರ್ಯವಾಗುತ್ತೆ. ಯಾವಾಗ ಬೇಕೋ ಆಗ ದೈಹಿಕ ಸಂಬಂಧ ಬೆಳೆಸುವ ಜೋಡಿ ಅಷ್ಟು ಸುಲಭವಾಗಿ ಬೇರೆಯಾಗುವುದೂ ಇಂಥ ಕಾನೂನು ಜಾರಿಯಾದರೆ ಸುಲಭವಲ್ಲ. 

Live-In Relationships: ಲೀವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದೀರಾ? ಹಾಗಿದ್ರೆ ಈ ವಿಷ್ಯಗಳು ತಿಳಿದಿರಲಿ

ಇಬ್ಬರು ವ್ಯಕ್ತಿಗಳು ಯಾವುದೇ ವೈಯಕ್ತಿಕ ಕಾನೂನು ಅಥವಾ ವಿಶೇಷ ವಿವಾಹ ಕಾಯಿದೆಗೆ ಅನುಸಾರವಾಗಿರದೆ ಕೇವಲ ಒಪ್ಪಂದದ ಮೂಲಕ ಒಟ್ಟಿಗೆ ವಾಸಿಸಲು ನಿರ್ಧರಿಸಿದಾಗ, ಅವರು ಅದನ್ನು ಮದುವೆ ಎಂದು ಹೇಳಲು ಅಥವಾ ವಿಚ್ಛೇದನ ಪಡೆಯಲು ಸಾಧ್ಯವಿಲ್ಲವೆಂದು ಇತ್ತೀಚೆಗೆ ಕೇರಳ ಹೈ ಕೋರ್ಟ್ ನೀಡಿರುವ ತೀರ್ಪನ್ನು ಇಲ್ಲಿ ಸ್ಮರಿಸಬಹುದು. 
 
ಇಂಥ ಸಹ ಜೀವನದಿಂದ ಹುಟ್ಟುವ ಮಗುವಿನ ಭವಿಷ್ಯದ ಬಗ್ಗೆ ಸುಪ್ರೀಂ ಕೋರ್ಟ್ ಸಹ ಎರಡು ವರ್ಷಗಳ ಹಿಂದೆ ಐತಿಹಾಸಿಕ ತೀರ್ಪು ನೀಡಿತ್ತು. ಲಿವ್ ಇನ್ ರಿಲೇಶನ್ ಶಿಪ್‌ನಿಂದ ಹುಟ್ಟುವ ಮಕ್ಕಳಿಗೂ ತಂದೆಯ ಆಸ್ತಿಯಲ್ಲಿ ಹಕ್ಕಿರುತ್ತದೆ ಎಂದು ಭಾರತದ ಸರ್ವೋಚ್ಛ ನ್ಯಾಯಾಲಯ ಹೇಳಿತ್ತು. ಜೋಡಿಯೊಂದು ದೀರ್ಘಕಾಲ ಒಟ್ಟಿಗಿದ್ದರೆ, ಈ ಸಂಬಂಧದಿಂದ ಜನಿಸಿದ ಮಗುವಿಗೆ ಅವರ ಆಸ್ತಿಯನ್ನು ಪಡೆಯಲು ಸಂಪೂರ್ಣ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ಹೇಳಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್