ಗೂಂಡಾ, ಕ್ರಿಮಿನಲ್‌ಗಳಿಗೆ ರಾಮ್ ನಾಮ್ ಸತ್ಯ ಗತಿ, ಸಿಎಂ ಯೋಗಿ ಆದಿತ್ಯನಾಥ್ ವಾರ್ನಿಂಗ್

By Suvarna NewsFirst Published Apr 6, 2024, 4:38 PM IST
Highlights

ಈ ಸಮಾಜಕ್ಕೆ ಬೆದರಿಕೆಯಾಗುವ, ಆತಂಕ ತರುವ, ಯಾರೇ ಆಗಿರಲಿ, ಅಂತವರಿಗೆ ರಾಮ ನಾಮ್ ಸತ್ಯ ಎಂದು ಸಿಎಂ ಯೋಗಿ ಆದಿತ್ಯನಾಥ್ ವಾರ್ನಿಂಗ್ ನೀಡಿದ್ದಾರೆ. ಯೋಗಿ ಆದಿತ್ಯನಾಥ್ ಎಚ್ಚರಿಕೆಗೆ ಉತ್ತರ ಪ್ರದೇಶದ ರೌಡಿ ಶೀಟರ್‌ಗಳಿಗೆ ನಡುಕು ಶುರುವಾಗಿದೆ.
 

ಲಖನೌ(ಏ.06)  ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಆದ ಬಳಿಕ ಕಾನೂನು ಸುವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ತಂದಿದ್ದಾರೆ. ಗೂಂಡಾ ರಾಜ್ಯ ಅನ್ನೋ ಹಣೆಪಟ್ಟಿಯಿಂದ ಹೊರಬಂದಿದೆ. ಗಲಭೆ, ಹಿಂಸಾಚಾರ, ಗುಂಡಿನ ದಾಳಿ, ಹಾಡಹಗಲೇ ಹತ್ಯೆಗಳಿಂದಲೇ ದೇಶಾದ್ಯಂತ ಗುರುತಿಸಿಕೊಂಡಿದ್ದ ಉತ್ತರ ಪ್ರದೇಶ ಇದೀಗ ಅಭಿವೃದ್ಧಿ ಪತದತ್ತ ಸಾಗುತ್ತಿದೆ. ಇದರ ನಡುವೆ ಕೆಲ ದಾಳಿಗಳು, ಹತ್ಯೆಗಳು ನಡೆದಿದೆ. ಇದೀಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕ್ರಿಮಿನಲ್ಸ್, ಗೂಂಡಾ, ರೌಡಿಶೀಟರ್‌ಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸಮಾಜಕ್ಕೆ ಬೆದರಿಕೆಯಾಗುವ ಯಾರೇ ಆಗಿದ್ದರೂ ಅವರಿಗೆ ರಾಮ್ ನಾಮ್ ಸತ್ಯ ಗತಿ ಎಂದಿದ್ದಾರೆ.

 ಆಲಿಘಡದಲ್ಲಿ ಆಯೋಜಿಸಿದ ಲೋಕಸಭಾ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಇದೀಗ ಕ್ರಿಮಿನಲ್‌ಗಳು ಜೈಲಿಗೆ ಹೋಗಲು ಭಯಪಡುತ್ತಿದ್ದಾರೆ ಎಂದಿದ್ದಾರೆ. ಕಾಂಗ್ರೆಸ್, ಸಮಾಜವಾದಿ ಪಾರ್ಟಿ ಆಡಳಿತದಲ್ಲಿ ಹೇಗಿತ್ತು? ಗೂಂಡಾಗಳು , ಕ್ರಿಮಿನಲ್‌ಗಳು ರಾಜಾರೋಶವಾಗಿ ತಿರುಗಾಡುತ್ತಿದ್ದರು. ಗ್ಯಾಂಗ್‌ಸ್ಟರ್ ಹಾಡಹಗಲೇ ಜನನಾಯಕರನ್ನು ಹತ್ಯೆ ಮಾಡುತ್ತಿದ್ದರು. ಪ್ರಕರಣ ದಾಖಲಾದರೂ ಶಿಕ್ಷೆ ಆಗುತ್ತಿರಲಿಲ್ಲ, ಈ ಗೂಂಡಾಗಳನ್ನು ಜೈಲಿಗೆ ಹಾಕುತ್ತಿರಲಿಲ್ಲ. ಆದರೆ ಶೂನ್ಯ ಸಹಿಷ್ಣುತೆ. ಯಾರೇ ಆದರೂ ಆತನಿಗೆ ಶಿಕ್ಷೆ ಪಕ್ಕ ಎಂದಿದ್ದಾರೆ.

ಲೋಕಸಭಾ ಚುನಾವಣೆ: ಉತ್ತರಪ್ರದೇಶದಲ್ಲಿ ಬಿಜೆಪಿಗೆ ಅಯೋಧ್ಯೆ ಶ್ರೀರಾಮನ ಬಲ

ಕ್ರಿಮಿನಲ್ಸ್ ಬಾಲ ಬಿಚ್ಚಿದ್ದರೆ ರಾಮ್ ನಾಮ್ ಸತ್ಯ ಗತಿ( ಅಂತಿಮ ಸಂಸ್ಕಾರದ ವೇಳೆ ಹೇಳುವ ಘೋಷಣಾ ಜಪ) ಈ ಹಿಂದೆ ಅಪರಾಧಿಗಳು ತಮ್ಮ ಜಾಮೀನು ರದ್ದು ಮಾಡಿ ಜೈಲಿನಲ್ಲೇ ಸುರಕ್ಷಿತವಾಗಿದ್ದರು. ಜೈಲಿನಿಂದಲೇ ತಮ್ಮ ಕೆಲಸ ಮಾಡುತ್ತಿದ್ದರು. ಇದೀಗ ಜೈಲಿನಲ್ಲೂ ಕ್ರಿಮಿನಲ್ಸ್ ಬೆವರುತ್ತಿದ್ದಾರೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಇತ್ತೀಚೆಗೆ ಜೈಲಿನಲ್ಲಿ ಅಸ್ವಸ್ಥಗೊಂಡು ಮೃತಪಟ್ಟ ಗ್ಯಾಂಗ್‌ಸ್ಟರ್ ಮುಕ್ತಾರ್ ಅನ್ಸಾರಿ ಕುರಿತು ಪರೋಕ್ಷವಾಗಿ ಯೋಗಿ ಆದಿತ್ಯನಾಥ್ ಈ ಮಾತು ಹೇಳಿದ್ದಾರೆ.

ಮುಕ್ತಾರ್ ಅನ್ಸಾರ್ ಜೈಲಿನಲ್ಲಿ ಅಸ್ವಸ್ಥಗೊಂಡು ನಿಧನರಾಗಿದ್ದರು. ಜೈಲಿನಲ್ಲಿ ಮುಕ್ತಾರ್ ಅನ್ಸಾರಿಗೆ ವಿಷಪ್ರಾಶ ಮಾಡಲಾಗಿದೆ. ಉದ್ದೇಶಪೂರ್ವಕವಾಗಿ ಕೊಲ್ಲಲಾಗಿದೆ ಎಂದು ಮುಕ್ತಾರ್ ಅನ್ಸಾರಿ ಕುಟುಂಬಸ್ಥರು ಆರೋಪಿಸಿದ್ದರು. ಇದೀಗ ಯೋಗಿ ಹೇಳಿಗೆ ಭಾರಿ ಸಂಚಲನ ಸೃಷ್ಟಿಸಿದೆ. ಇಷ್ಟೇ ಅಲ್ಲ ಕ್ರಿಮಿನಲ್ಸ್ ಗಂಭೀರ ತಪ್ಪು ಮಾಡಿದರೆ ಅಲ್ಲೆ ಪ್ರತಿಫಲ ಅನುಭವಿಸಬೇಕು ಅನ್ನೋದನ್ನು ಪರೋಕ್ಷವಾಗಿ ಹೇಳಿದ್ದಾರೆ.

ಈ ಹಿಂದಿನ ಸರ್ಕಾರಗಳಲ್ಲಿ ಉತ್ತರ ಪ್ರದೇಶದ ಪೊಲೀಸ್ ಠಾಣೆ ಕತ್ತಲಾದ ಮೇಲೆ ಕಾರ್ಯನಿರ್ವಹಿಸುತ್ತಿರಲಿಲ್ಲ. ಇತ್ತ ಗ್ಯಾಂಗ್‌ಸ್ಟರ್, ಕ್ರಿಮಿನಲ್ಸ್‌ಗಳೇ ನಾಯಕರಾಗಿದ್ದರು. ಇದೀಗ ಉತ್ತರ ಪ್ರದೇಶ ಬದಲಾಗಿದೆ. ಕಾನೂನು ಸುವ್ಯವಸ್ಥೆಗೆ ಮಹತ್ವ ನೀಡಲಾಗಿದ್ದು, ಶಾಂತಿ ಕಾಪಾಡಲಾಗುತ್ತದೆ ಎಂದಿದ್ದಾರೆ.

ಆಯೋಧ್ಯೆ ರಾಮ ಮಂದಿರ ದಿನದ 24 ಗಂಟೆ ತೆರಯಲು ಸಿಎಂ ಯೋಗಿ ಸೂಚನೆ, ಈ ಮೂರು ದಿನ ಮಾತ್ರ!

click me!