ತಾಯಿ ಸಾವು: ಊಟ ಇಲ್ಲದೇ, ಶವದೊಂದಿಗೆ 2 ದಿನ ಕಳೆದ ಮಗು!

Published : May 01, 2021, 08:29 AM ISTUpdated : May 01, 2021, 09:19 AM IST
ತಾಯಿ ಸಾವು: ಊಟ ಇಲ್ಲದೇ, ಶವದೊಂದಿಗೆ 2 ದಿನ ಕಳೆದ ಮಗು!

ಸಾರಾಂಶ

ತಾಯಿ ಸಾವು: ಊಟ ಇಲ್ಲದೇ 2 ದಿನ ಕಳೆದ ಮಗು!| ಕೊರೋನಾ ಕಾರಣ ಯಾರೂ ಅಲ್ಲಿ ಸುಳಿಯಲಿಲ್ಲ| ಪುಣೆಯಲ್ಲಿ ಹೃದಯವಿದ್ರಾವಕ ಘಟನೆ

ಮುಂಬೈ(ಮೇ.01): ತಾಯಿ ತೀರಿಹೋಗಿ ಹೋಗಿ 2 ದಿನ ಆದರೂ, ಆಕೆಯ ಪುಟ್ಟಮಗು ಶವದೊಂದಿಗೇ ಇತ್ತು! ಕೊರೋನಾ ಸೋಂಕು ಹೆಚ್ಚಿರುವ ಪುಣೆಯಲ್ಲಿನ ಮನಕಲಕುವ ಘಟನೆ ಇದು.

ಹೌದು. ಪಿಂಪ್ರಿ ಚಿಂಚ್ವಾಡದ ಬಾಡಿಗೆ ಮನೆಯಲ್ಲಿ ಮಹಿಳೆಯೊಬ್ಬರು ಅಸುನೀಗಿದ್ದರು. ಇದು ಬಂಧುಗಳಿಗೆ ಗೊತ್ತಾದರೂ ಅವರಿಗೆ ಕೊರೋನಾ ಭಯ ಕಾಡಿತ್ತು. ಹೀಗಾಗಿ ಅವರು ಹತ್ತಿರ ಸುಳಿಯಲೇ ಇಲ್ಲ. ಕೊನೆಗೆ ಆ ಮನೆಯ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ. ಪೊಲೀಸರು ಆಗಮಿಸಿ ಮನೆಯ ಬಾಗಿಲು ಒಡೆದು ಪ್ರವೇಶಿಸಿದರು. ಆಗ ತಾಯಿಯ ಮೃತದೇಹದ ಬಳಿ ಇತ್ತು.

"

ಆಗಲೂ ಮಗುವಿನ ಕಷ್ಟನಿಲ್ಲಲಿಲ್ಲ. ಕೊರೋನಾಗೆ ಬೆಚ್ಚಿ ಮಗುವನ್ನು ಎತ್ತಿಕೊಳ್ಳಲೂ ಜನ ಹಿಂಜರಿದರು. ಕೊನೆಗೆ ಮಹಿಳಾ ಪೇದೆ ಸುಶೀಲಾ ಹಾಗೂ ರೇಖಾ ಮಗುವನ್ನು ಎತ್ತಿಕೊಂಡು ಹಾಲು ನೀಡಿದರು. ಮಗು ಈಗ ಆರೋಗ್ಯದಿಂದ ಇದೆ. ಕೋವಿಡ್‌ ವರದಿ ನೆಗೆಟಿವ್‌ ಬಂದಿದೆ. ತಾಯಿಯ ಸಾವಿನ ಕಾರಣ ತಿಳಿದುಬಂದಿಲ್ಲ.

ಘಟನೆ ನಡೆದಾಗ ಪತಿ ಉತ್ತರ ಪ್ರದೇಶಕ್ಕೆ ಹೋಗಿದ್ದರು ಎನ್ನಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
200ಕ್ಕೂ ಹೆಚ್ಚು ಜನರಿಗೆ ಹೆರಿಗೆ ಮಾಡಿಸಿದ ನರ್ಸ್‌ ತನ್ನ ಮೊದಲ ಮಗುವಿನ ಜನನದ ವೇಳೆ ಸಾವು