‘ಕೊರೋನಾ ಇನ್ನಿಲ್ಲ, ಮಾಸ್ಕ್‌ ಏಕೆ ಹಾಕಬೇಕು?’ ಎಂದಿದ್ದ ಶಾಸಕ ಕೋವಿಡ್‌ಗೆ ಬಲಿ!

By Kannadaprabha NewsFirst Published May 1, 2021, 8:19 AM IST
Highlights

ಇದು ಕೊರೋನಾ ನಿಯಮ ಪಾಲಿಸದೇ ಇದ್ದವರಿಗೆ ಪಾಠ| ಮಾಸ್ಕ್‌ ಸೇರಿ ಮಾರ್ಗಸೂಚಿಗಳ ಬಗ್ಗೆ ಉಡಾಫೆಯೇ ಬೇಡ| ಸ್ವಲ್ಪ ಎಚ್ಚರ ತಪ್ಪಿದರೂ ಭಾರೀ ಬೆಲೆ ತೆರಬೇಕಾಗುತ್ತೆ: ತಜ್ಞರು

ಲಖನೌ(ಮೇ.01): ಉತ್ತರ ಪ್ರದೇಶದ ಆಡಳಿತಾರೂಢ ಬಿಜೆಪಿಯ ಹಾಲಿ ಶಾಸಕರೊಬ್ಬರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಬರೇಲಿಯ ನವಾಬ್‌ಗಂಜ್‌ ಕ್ಷೇತ್ರದ ಶಾಸಕರಾದ 64 ವರ್ಷದ ಕೇಸರ್‌ ಸಿಂಗ್‌ ಗಂಗ್ವಾರ್‌ ಅವರು ಏ.18ರಂದು ಸೋಂಕಿಗೆ ತುತ್ತಾಗಿದ್ದರು. ಬರೇಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಅವರು ಅಸುನೀಗಿದ್ದಾರೆ.

ಇತ್ತೀಚೆಗಷ್ಟೇ ಗಂಗ್ವಾರ್‌ ಅವರು ಮಾಸ್ಕ್‌ ಇಲ್ಲದೆ ವಿಧಾನಸಭೆ ಅಧಿವೇಶನಕ್ಕೆ ಬಂದಿದ್ದರು. ಈ ಬಗ್ಗೆ ಪ್ರಶ್ನಿಸಿದ ಮಾಧ್ಯಮ ಪ್ರತಿನಿಧಿಯೊಬ್ಬರಿಗೆ, ‘ಕೊರೋನಾ ವೈರಸ್‌ ಅವಸಾನವಾಗಿದೆ. ಮಾಸ್ಕ್‌ ಏಕೆ ಹಾಕಬೇಕು? ನಾನು ಮಾಸ್ಕ್‌ ಎಲ್ಲಿಟ್ಟಿದ್ದೇನೆ ಎಂದೇ ಗೊತ್ತಿಲ್ಲ’ ಎಂದು ಉಡಾಫೆಯಾಗಿ ಮಾತನಾಡಿದ್ದರು ಎಂಬ ವಿಡಿಯೋ ಈಗ ವೈರಲ್‌ ಆಗಿದೆ. ಆದರೆ ದುರಾದೃಷ್ಟಾವಶಾತ್‌ ಗಂಗ್ವಾರ್‌ ಅವರು ವೈರಸ್‌ಗೆ ಬಲಿಯಾಗಿದ್ದಾರೆ.

Latest Videos

"

ದೇಶಾದ್ಯಂತ ಹಬ್ಬಿರುವ 2ನೇ ಅಲೆಯ ಸೋಂಕು ಭೀಕರವಾಗಿದ್ದು, ಜನ ಸಾಮಾನ್ಯರು ಮಾಸ್ಕ್‌, ಸಾಮಾಜಿಕ ಅಂತರ ಸೇರಿದಂತೆ ಇನ್ನಿತರ ಕೊರೋನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮಹಾಮಾರಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಬೇಕು. ಇಲ್ಲದಿದ್ದರೆ ಸಂಕಷ್ಟಕಟ್ಟಿಟ್ಟಬುತ್ತಿ ಎಂದು ತಜ್ಞರು ಎಚ್ಚರಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!