ಮೊದಲ ಸಲ ಇಷ್ಟವಾಗಲಿಲ್ಲ, ಆದರೀಗ ಅಭ್ಯಾಸವಾಗಿದೆ: ಪ್ರತಿದಿನ ನಾಯಿ ಮೂತ್ರ ಸೇವಿಸ್ತಾರೆ ಈ ಮಹಿಳೆ!

By Suvarna News  |  First Published May 24, 2022, 4:14 PM IST

* ಸೌಂದರ್ಯ ಹೆಚ್ಚಿಸಲು ಇದೆಂತಹಾ ಹುಚ್ಚು ಅಭ್ಯಾಸ

* ಸುಂದರವಾಗಿ ಕಾಣಲು ನಾಯಿ ಮೂತ್ರ ಕುಡಿಯುತ್ತಾರೆ ಈ ಮಹಿಳೆ

* ಮೂತ್ರಕ್ಕಾಗಿ ಉದ್ಯಾನವನದಲ್ಲಿ ಪಾತ್ರೆ


ನವದೆಹಲಿ(ಮೇ.24): ಸುಂದರವಾಗಿ ಕಾಣಲು ಯಾರು ಬಯಸುವುದಿಲ್ಲ? ಸೌಂದರ್ಯ ಹೆಚ್ಚಿಸಲು ಜನರು ಅನೇಕ ಬಗೆಯ ಪ್ರಯತ್ನಗಳನ್ನು ಮಾಡುತ್ತಾರೆ. ಕೆಲವರು ಸುಂದರವಾಗಿರುತ್ತಾರೆ, ಆದರೆ ಮನದಲ್ಲಿನ ದುರಾಸೆಯಿಂದ ಅದೆಷ್ಟೇ ಚೆನ್ನಾಗಿದ್ದರೂ, ಇನ್ನೂ ಸೌಂದರ್ಯವಾಗಿ ಕಾಣಿಸಿಕೊಳ್ಳಬೇಕೆಂಬ ಇಚ್ಛೆ ಕಾಡುತ್ತಿರುತ್ತದೆ. ಹೀಗಾಗೇ ಚಿತ್ರ- ವಿಚಿತ್ರ ಪ್ರಯೋಗ ಮಾಡುತ್ತಾರೆ. ಅದೇ ರೀತಿ ಕೆಲವರಿಗೆ ವಾಂತಿ ಬರಬಹುದು ಎಂದು ಗೊತ್ತಾದ ಮೇಲೂ ಹುಡುಗಿಯೊಬ್ಬಳು ಸೌಂದರ್ಯ ಕಾಪಾಡಿಕೊಳ್ಳಲು ದಿನವೂ ಅಸಹ್ಯಕರ ಕೆಲಸ ಮಾಡುತ್ತಾಳೆ. ವಾಸ್ತವ ವಿಚಾರ ತಿಳಿದ ಬಳಿಕ ಅಂತಹ ಸೌಂದರ್ಯವನ್ನು ಪಡೆಯುವುದಕ್ಕಿಂತ ಸಾಯುವುದೇ ಮೇಲು ಎಂದೂ ಹಲವರು ಹೇಳಿಕೊಂಡಿದ್ದಾರೆ.

ವಾಸ್ತವವಾಗಿ, ಸೌಂದರ್ಯದ ಅನ್ವೇಷಣೆಯಲ್ಲಿ ಈ ಹುಡುಗಿ ಏನು ಮಾಡುತ್ತಿದ್ದಾಳೆ ಎಂಬುದನ್ನು ಯಾರೂ ಊಹಿಸಲೂ ಸಾಧ್ಯವಿಲ್ಲ. ಈ ಹುಡುಗಿಯ ಹೆಸರು ಲೀನಾ ಮತ್ತು ಅವಳು ಹೊಳೆಯುವ ಚರ್ಮವನ್ನು ಪಡೆಯಲು ಈಕೆ ಮಾಡುತ್ತಿರುವ ಕೃತ್ಯವನ್ನು ಕೇಳಿದರೆ ಹೀಗೆಲ್ಲಾ ಮಾಡುತ್ತಾರಾ ಎಂದು ನಂಬಲು ಸಾಧ್ಯವಿಲ್ಲ. ಹೌದು, ಲೀನಾ ಪ್ರಕಾರ, ಹೊಳೆಯುವ ಚರ್ಮವನ್ನು ಪಡೆಯಲು ಅವರು ಪ್ರತಿದಿನ ನಾಯಿ ಮೂತ್ರವನ್ನು ಕುಡಿಯುತ್ತಾರೆ. ಈಕೆಯ ಈ ಗುಟ್ಟನ್ನು ತಿಳಿದ ನಂತರ, ಸುಂದರವಾಗಿ ಕಾಣಲು ಇಂದಿಗೂ ಈ ಮಟ್ಟಕ್ಕೆ ಹೋಗಬಹುದೇ ಎಂದು ಜನರು ಆಶ್ಚರ್ಯ ಪಡುತ್ತಾರೆ.

Tap to resize

Latest Videos

ನಾಯಿಯ ಮೂತ್ರವು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಸಹಾಯಕವಾಗಿದೆ

ನಾಯಿಮೂತ್ರದಲ್ಲಿ ವಿಟಮಿನ್-ಎ, ವಿಟಮಿನ್-ಇ ಮುಂತಾದ ಹಲವು ಪೋಷಕಾಂಶಗಳಿವೆ ಎಂದು ಲೀನಾ ಹೇಳಿಕೊಂಡಿದ್ದಾರೆ. ಇದರ ದೈನಂದಿನ ಸೇವನೆಯು ನಿಮಗೆ ಹೊಳೆಯುವ ಚರ್ಮವನ್ನು ನೀಡುವುದು ಮಾತ್ರವಲ್ಲದೆ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ. ನಾಯಿ ಮೂತ್ರ ಕುಡಿದರೆ ಕ್ಯಾನ್ಸರ್ ಸೇರಿದಂತೆ ಇನ್ನೂ ಹಲವು ಗಂಭೀರ ಕಾಯಿಲೆಗಳಿಂದ ಮುಕ್ತಿ ಸಿಗುತ್ತದೆ. ಅಲ್ಲದೆ, ನೀವು ಹೊಳೆಯುವ ಚರ್ಮವನ್ನು ಪಡೆಯುತ್ತೀರಿ ಎಂದು ಹೇಳಿದ್ದಾರೆ.

ಮೊದಲ ಸಲ ಇಷ್ಟವಾಗಲಿಲ್ಲ ಆದರೆ ಈಗ ಅಭ್ಯಾಸ

ಲೀನಾ ಪ್ರಕಾರ, ಕೆಲವು ತಿಂಗಳ ಹಿಂದೆ ಆಕೆಯ ಮುಖದಲ್ಲಿ ಮೊಡವೆಗಳಿದ್ದವು. ನಾಯಿ ಮೂತ್ರ ಪ್ರಯೋಗಿಸಲು ಯಾರೋ ಹೇಳಿದರು. ನನಗೆ ಮೊದಲ ಬಾರಿಗೆ ನಂಬಲಾಗಲಿಲ್ಲ. ಅದನ್ನು ಕುಡಿದ ನಂತರ ಅದು ವಿಚಿತ್ರವೆನಿಸಿತು, ಆದರೆ ಫಲಿತಾಂಶವು ತುಂಬಾ ಒಳ್ಳೆಯದಿತ್ತು. ಹೀಗಾಗಿ ನಿರಂತರವಾಗಿ ಸೇವಿಸುತ್ತಿದ್ದು ಈಗ ಅಭ್ಯಾಸವಾಗಿ ಹೋಗಿದೆ. ನಾಯಿಯ ಮೂತ್ರವನ್ನು ಕುಡಿಯುವುದರಿಂದ ನನ್ನ ಮೊಡವೆಗಳನ್ನು ಗುಣಪಡಿಸುವುದು ಮಾತ್ರವಲ್ಲದೆ ನನ್ನ ಮುಖವು ಸಾರ್ವಕಾಲಿಕವಾಗಿ ಹೊಳೆಯುತ್ತಿರುತ್ತದೆ. ಲೀನಾ ಪ್ರಕಾರ, ಪ್ರಪಂಚದಾದ್ಯಂತ ನನ್ನ ಸೌಂದರ್ಯದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ನಾಯಿಯ ಮೂತ್ರವನ್ನು ಯಾವಾಗ ಮತ್ತು ಹೇಗೆ ಸಂಗ್ರಹಿಸುತ್ತಾರೆ ಎಂಬ ಪ್ರಶ್ನೆಗಳೂ ಎದ್ದಿವೆ. ನಾನು ಅದನ್ನು ಉದ್ಯಾನವನಕ್ಕೆ ಕೊಂಡೊಯ್ಯುವಾಗ, ಪಾತ್ರೆಯನ್ನು ಇಡುತ್ತೇನೆ ಎಂಬುದು ಅವಳ ಉತ್ತರವಾಗಿತ್ತು.

click me!