4 ಬಾರಿ ನನ್ನ ಮೇಲೆ ಇನ್ಸ್‌ಪೆಕ್ಟರ್.. ಕೈಯಲ್ಲಿ ಡೆತ್ ನೋಟ್ ಬರೆದು ಬದುಕು ಅಂತ್ಯಗೊಳಿಸಿದ ವೈದ್ಯೆ

Published : Oct 24, 2025, 06:50 PM IST
Woman Doctor death Case

ಸಾರಾಂಶ

4 ಬಾರಿ ನನ್ನ ಮೇಲೆ ಇನ್ಸ್‌ಪೆಕ್ಟರ್.. ಕೈಯಲ್ಲಿ ಡೆತ್ ನೋಟ್ ಬರೆದು ಬದುಕು ಅಂತ್ಯಗೊಳಿಸಿದ ವೈದ್ಯೆ, ಈ ಪ್ರಕರಣ ಇದೀಗ ಭಾರಿ ಕೋಲಾಹಲ ಸೃಷ್ಟಿಸಿದೆ. ಕಳೆದ 5 ತಿಂಗಳಲ್ಲಿ ನಡೆದ ಘಟನೆ ಸೇರಿದಂತೆ ಕರಾಳ ಘಟನೆ ಕುರಿತು ನೋಟ್‌ನಲ್ಲಿ ಹೇಳಲಾಗಿದೆ.

ಸತಾರ (ಅ.24) ಮಹಿಳಾ ಡಾಕ್ಟರ್ ಸಾವು ಪ್ರಕರಣ ಇದೀಗ ಕೋಲಾಹಲ ಸೃಷ್ಟಿಸಿದೆ. ಕಳೆದ ಐದು ತಿಂಗಳಲ್ಲಿ ನಾಲ್ಕು ಬಾರಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನನ್ನ ಮೇಲೆ ಅತ್ಯಾ*ರ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳಾ ವೈದ್ಯ ಬದುಕು ಅಂತ್ಯಗೊಳಿಸಿದ ಘಟನೆ ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿ ನಡೆದಿದೆ. ಇಬ್ಬರು ಪೊಲೀಸ್ ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಿ ಮಹಿಳಾ ವೈದ್ಯೆ ದುರಂತ ಅಂತ್ಯಕಂಡಿದ್ದಾಳೆ. ಎಡಗೈನಲ್ಲಿ ಡೆತ್ ನೋಟ್ ಬರೆದಿಟ್ಟಿರುವ ಮಹಿಳಾ ವೈದ್ಯೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಪ್ರಕರಣ ಬೆನ್ನಲ್ಲೇ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಗೋಪಾಲ್ ಬಡ್ನೆ ಅಮಾನತು ಮಾಡಲಾಗಿದೆ.

ಎಡಗೈನಲ್ಲಿ ನೋಟ್ ಬರೆದ ವೈದ್ಯೆ

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಗೋಪಾಲ್ ಬಡ್ನೆ ಕಳೆದ ಐದು ತಿಂಗಳಲ್ಲಿ ತೀವ್ರವಾಗಿ ಮಾನಸಿಕ ಹಿಂಸೆ, ದೈಹಿಕ ಹಿಂಸೆ ನೀಡಿದ್ದಾನೆ. ಆತನ ಕಿರುಕುಳಕ್ಕೆ ಬೇಸತ್ತು ಈ ನಿರ್ಧಾರ ಕೈಗೊಂಡಿದ್ದಾನೆ. ಕಳೆದ ಐದು ತಿಂಗಳಲ್ಲಿ ನಾಲ್ಕು ಬಾರಿ ನನ್ನ ಮೇಲೆ ಅತ್ಯಾ*ರ ಎಸಗಿದ್ದಾನೆ. ಇದೇ ವೇಳೆ ಪೊಲೀಸ್ ಅಧಿಕಾರಿ ಪ್ರಶಾಂತ್ ಬಂಕರ್ ಕೂಡ ಕಿರುಕುಳ ನೀಡಿರುವುದಾಗಿ ಉಲ್ಲೇಖಿಸಿದ್ದಾರೆ. ವೈದ್ಯ ಸಾವು ಮಹಾರಾಷ್ಟ್ರದಲ್ಲಿ ಭಾರಿ ಕೋಲಾಹಲ ಸೃಷ್ಟಿಯಾಗಿದೆ. ಪೊಲೀಸ್ ಅಧಿಕಾರ ದುರುಪಯೋಗ ಪಡಿಸಿಕೊಂಡು ದಬ್ಬಾಳಿಕೆ ನಡೆಸಿದ್ದಾರೆ. ಅಮಾಯಕರನ್ನು ಟಾರ್ಗೆಟ್ ಮಾಡಿದ್ದಾರೆ ಎಂಬ ಆಕ್ರೋಶಗಳು ವ್ಯಕ್ತವಾಗಿದೆ.

ಸತತ ದೂರು ನೀಡಿದರೂ ಗಂಭೀರವಾಗಿ ಪರಿಗಣಿಸದ ಪೊಲೀಸ್

ಫಲ್ಟಾನ್ ಉಪ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದ ವೈದ್ಯೆ ಜೂನ್ ತಿಂಗಳಿನಿಂದ ಸತತವಾಗಿ ಮಾನಸಿಕ ಹಾಗೂ ದೈಹಿಕ ಕಿರುಕಳ ಕುರಿತು ದೂರು ನೀಡಿದ್ದಾಳೆ. ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾಳೆ. ಆದರೆ ಈಕೆಯ ದೂರು, ಮನವಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಅನ್ನೋ ಆರೋಪವೂ ಕೇಳಿಬಂದಿದೆ. ಜೂನ್ 19 ರಂದು ಫಲ್ಟಾನ್ ಡೆಪ್ಯೂಟಿ ಸೂಪರಿಡೆಂಟ್ ಆಫ್ ಪೊಲೀಸ್‌ಗೆ ಇದೇ ಆರೋಪವನ್ನು ಮೊದಲ ಬಾರಿ ಮಾಡಿದ್ದರು. ಆದರೆ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ.

ಸೆಪ್ಟೆಂಬರ್‌ನಲ್ಲಿ ಡಿಎಸ್‌ಪಿಗೆ ಪತ್ರ ಬರೆದಿದ್ದ ವೈದ್ಯೆ

ಫಲ್ಟಾನ್ ಗ್ರಾಮೀಣ ಪೊಲೀಸ್ ಠಾಣೆಯ ಇಬ್ಬರು ಪೊಲೀಸರು ತನ್ನ ಮೇಲೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಇಬ್ಬರು ಪ್ರಮುಖ ಪೊಲೀಸ್ ಅಧಿಕಾರಿಗಳು ಆಗಿರುವ ಕಾರಣ ತನಗೆ ನ್ಯಾಯ ಸಿಗುತ್ತಿಲ್ಲ. ನನಗೆ ಜೀವನ ನಡೆಸಲು ಕಷ್ಟವಾಗುತ್ತಿದೆ. ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿ, ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು.

ಸಬ್ ಇನ್ಸ್‌ಪೆಕ್ಟರ್‌ ಅಮಾನತಿಗೆ ಸೂಚಿಸಿದ ಸಿಎಂ ಫಡ್ನವಿಸ್

ವೈದ್ಯ ಸಾವು ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಪೊಲೀಸ್ ಇಲಾಖೆ ವಿರುದ್ದ ತೀವ್ರ ಆಕ್ರೋಶಗಳು ವ್ಯಕ್ತವಾಗಿತ್ತು. ತಕ್ಷಣವೇ ಸಭೆ ಸೇರಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡುವಂತೆ ಸೂಚಿಸಿದ್ದಾರೆ. ಈ ಆದೇಶ ಬೆನ್ನಲ್ಲೇ ಗೋಪಾಲ್ ಬಿಡ್ನೆ ಅಮಾನತಾಗಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ