
Rapido Pink Bike ಇದು ಮಹಿಳೆಯರಿಗಾಗಿ ಇರುವ ಬೈಕ್ ಸರ್ವೀಸ್ ಆಗಿದೆ. ಈ ಪಿಂಕ್ ಬೈಕ್ ಸರ್ವೀಸ್ ಮಹಿಳೆಯರಿಗೆ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಶುರುವಾಗಿದೆ. ಯಾಕೆಂದರೆ ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಮಹಿಳೆಯೊಬ್ಬರು ಪಿಂಕ್ ರಾಪಿಡೋ ಬೈಕ್ ಬುಕ್ ಮಾಡಿದ್ದರು. ಈ ವೇಳೆ ಅವರಿಗೆ ತುಂಬಾನೇ ಆಘಾತಕಾರಿ ಅನುಭವ ಆಗಿತ್ತು. ಇದು ದೇಶದಲ್ಲಿ ಭಾರೀ ಚರ್ಚೆಯನ್ನ ಹುಟ್ಟುಹಾಕಿತ್ತು. ಇದೀಗ ಕಂಪನಿ ಆ ಮಹಿಳೆಗೆ ಕ್ಷಮೆ ಯಾಚಿಸಿದೆ. ಜೊತೆಗೆ ಆ ಡ್ರೈವರ್ ಐಡಿಯನ್ನು ರದ್ದು ಮಾಡಿದೆ. ಆದರೆ ಮತ್ತೊಂದು ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ.
ಶಾಲಿನಿ ಚತುರ್ವೇದಿ ಎಂಬ ಮಹಿಳೆ ಮಹಿಳೆಯರಿಗೇ ಮೀಸಲಾಗಿರುವ ಪಿಂಕ್ ರಾಪಿಡೋ ಬೈಕ್ ಸರ್ವೀಸ್ ಬುಕ್ ಮಾಡಿದ್ದರು. ಬುಕ್ ಮಾಡಿದಾಗ ಆ ಕಡೆಯಿಂದ ಮಹಿಳೆಯ ಫೋಟೋ ಐಡಿ ಒಂದು ಕಾಣಿಸಿದೆ. ಬುಕ್ ಆದ ಬೆನ್ನಲ್ಲೇ ಶಾಲಿನಿ ಅವರು.. ಡ್ರೈವರ್‍ಗೆ ಕರೆ ಮಾಡಿದ್ದಾರೆ. ಆಗ ಮಾತನಾಡಿದ್ದು ಓರ್ವ ಪುರುಷ ಬೈಕ್ ಚಾಲಕ. ಆಗ ಶಾಲಿನ ಶಾಕ್‌ಗೆ ಒಳಗಾಗಿದ್ದಾರೆ. ಮಹಿಳೆಯರಿಗೆ ಸೀಮಿತವಾಗಿರುವ ಈ ಸರ್ವೀಸ್‌ನಲ್ಲಿ ನೀವು ಏಕೆ ಕರೆ ಸ್ವೀಕಾರ ಮಾಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಆಗ ಆತ ಶಾಂತನಾಗಿದ್ದಾನೆ. ಕ್ಷಮಿಸಿ ಮೇಡಂ ನಾನು ಸಲಿಂಗ ಕಾಮಿ ಎಂದು ಶಾಲಿನಿ ಅವರಿಗೆ ಏಕಾಏಕಿ ತಿಳಿಸಿದ್ದಾನೆ. ಇದರಿಂದ ಶಾಲಿನಿ ಅವರು ಮತ್ತಷ್ಟು ಗಾಬರಿ ಆಗಿದ್ದಾರೆ. ಪ್ರೊಫೈಲ್‌ನಲ್ಲಿ ಮಹಿಳೆಯ ಫೋಟೋವನ್ನು ಅಪ್‌ಡೇಟ್ ಮಾಡಿ.. ಯಾರೋ ಮೋಸ ಮಾಡಲು ಹೀಗೆ ಮಾಡಿದ್ದಾರೆ ಅನ್ಕೊಂಡು ಬುಕ್ಕಿಂಗ್ ಕ್ಯಾನ್ಸಲ್ ಮಾಡಿ ಆಘಾತವನ್ನು ತೋಡಿಕೊಂಡಿದ್ದಾರೆ.ಇನ್ನು ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಕಂಪನಿ 15 ರೂಪಾಯಿ ಹಣವನ್ನು ಫೈನ್ ವಿಧಿಸಿದೆ.
ಬೆನ್ನಲ್ಲೇ ಇದು ಹಲವು ಪ್ರಶ್ನೆಗಳನ್ನು ಹುಟ್ಟಿ ಹಾಕಿತ್ತು. ಶಾಲಿನಿ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶ ಹೊರ ಹಾಕಿದ್ದರು. ಇತ್ತೀಚೆಗೆ ಮಹಿಳೆಯರಿಗೆ ಎಲ್ಲೂ ಸುರಕ್ಷಿತ ಅಲ್ಲ. ಎಲ್ಲಿಯೂ ಕಂಫರ್ಟ್ ಅಂತಾ ಕಾಣಿಸ್ತಿಲ್ಲ ಎಂದು ತಮಗೆ ಆಗಿರುವ ನೋವುಗಳನ್ನ ಎಳೆಎಳೆಯಾಗಿ ಬಿಚ್ಚಿಡುತ್ತ ಹೋಗಿದ್ದರು. ಬೆನ್ನಲ್ಲೇ ಅವರ ನೋವಿನ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು.
ಇದು ಭಾರೀ ಚರ್ಚೆ ಆಗ್ತಿದ್ದಂತೆ ಕಂಪನಿಗೆ ತನ್ನಿಂದ ಆಗಿರುವ ಮಿಸ್ಟೇಕ್ಸ್‌ಗೆ ಕ್ಷಮೆ ಕೇಳಿದೆ. ನಂತರ ಆ ಚಾಲಕನ ಐಡಿಯನ್ನ ಶಾಶ್ವತವಾಗಿ ರದ್ದು ಮಾಡಿದೆ. ಅಷ್ಟೇ ಅಲ್ಲ, ಸರ್ವೀಸ್‌ಗಾಗಿ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದಕ್ಕೆ ವಿಧಿಸಿದ್ದ ಶುಲ್ಕವನ್ನು ಮರುಪಾವತಿ ಮಾಡೋದಾಗಿ ಭರವಸೆ ನೀಡಿದೆ. ಸದ್ಯ ಎದ್ದಿರುವ ಪ್ರಶ್ನೆ ಏನೆಂದರೆ.. ಮಹಿಳೆಯ ಕರೆ ಸ್ವೀಕರಿಸಿದ ವ್ಯಕ್ತಿ ಯಾರು? ಆತ ಮೋಸ ಮಾಡಲೆಂದೇ ಹೀಗೆ ಮಾಡಿದ್ದನಾ? ಆತನ ಬಂಧನವನ್ನು ಪೊಲೀಸರು ಮಾಡಿದ್ದಾರಾ? ಕಂಪನಿ ಏನೋ ಆತನ ಐಡಿ ರದ್ದು ಮಾಡಿ ಬಿಟ್ಟರೇ ಸಾಕೆ? ಆತನ ಪತ್ತೆ ಹಚ್ಚಿ ಶಿಕ್ಷೆ ಕೊಡಿಸುವ ಕೆಲಸ ಆಗಿದೆಯೇ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ