ಸಿಗ್ನಲ್ ಇಲ್ಲ, ಪೊಲೀಸರು ಇಲ್ಲ, ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡುವ ರೋಡ್ ಡಿಸೈನ್ ಹಂಚಿಕೊಂಡ ಆನಂದ್ ಮಹೀಂದ್ರ

By Suvarna NewsFirst Published Mar 1, 2023, 9:22 PM IST
Highlights

ಭಾರತದಲ್ಲಿ ಟ್ರಾಫಿಕ್ ಸಮಸ್ಯೆ ಹೇಗಿದೆ ಅನ್ನೋದು ವಿವರಿಸಬೇಕಾದ ಅಗತ್ಯವಿಲ್ಲ. ಅದರಲ್ಲೂ ಬೆಂಗಳೂರು ಜನತೆಗೆ ಟ್ರಾಫಿಕ್ ಸಮಸ್ಯೆಯ ಸ್ಪಷ್ಟ ಅರಿವಿದೆ. ಸಿಗ್ನಲ್, ಪೊಲೀಸರು, ಸಿಸಿಟಿವಿ ಸೇರಿದಂತೆ ಎಲ್ಲವೂ ಇದ್ದರೂ ಟ್ರಾಫಿಕ್‌ಗೆ ಮುಕ್ತಿ ಇಲ್ಲ. ಆದರೆ ಉದ್ಯಮಿ ಆನಂದ್ ಮಹೀಂದ್ರ ಯಾವುದೇ ಸಿಗ್ನಲ್, ಟ್ರಾಫಿಕ್ ಪೊಲೀಸ್ ಇಲ್ಲದೆ ನಿರ್ವಹಣೆಯಾಗಬಲ್ಲ, ಸರಾಗವಾಗಿ ಸಾಗಬಲ್ಲ ರಸ್ತೆ ವಿನ್ಯಾಸ ಹಂಚಿಕೊಂಡಿದ್ದಾರೆ.

ಮುಂಬೈ(ಮಾ.01): ಉದ್ಯಮಿ ಆನಂದ್ ಮಹೀಂದ್ರ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯ. ಹೊಸತು, ಕುತೂಹಲಕ ಹಾಗೂ ಹಲವು ತಮಾಷೆಗಳನ್ನು ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಹಲವರ ಕಣ್ತೆರೆಸುವ ಕೆಲಸವನ್ನೂ ಮಾಡಿದ್ದಾರೆ. ಇದೀಗ ಆನಂದ್ ಮಹೀಂದ್ರ ವಿಡಿಯೋ ಹಂಚಿಕೊಂಡಿದ್ದಾರೆ. ಇದು ಭಾರತದ ಬಹುತೇಕ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡುವ ಸೂಚನೆ ನೀಡಿದೆ. ಯಾವುದೇ ಟ್ರಾಫಿಕ್ ಪೋಲಿಸರಿಲ್ಲದೆ, ಯಾವುದೇ ಸಿಗ್ನಲ್ ಇಲ್ಲದೆ ಸರಗಾವಾಗಿ ಸಾಗುತ್ತಿರುವ ರಸ್ತೆ ಡಿಸೈನ್ ಇದಾಗಿದೆ. ಆನಂದ್ ಮಹೀಂದ್ರ ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡು ಮಹತ್ವದ ಮಾಹಿತಿ ನೀಡಿದ್ದಾರೆ.

ನಾಲ್ಕು ರಸ್ತೆ ಸೇರುವ ಸ್ಥಳ. ಇಲ್ಲಿ ಸಿಗ್ನಲ್ ಇಲ್ಲದೆ, ಟ್ರಾಫಿಕ್ ಪೊಲೀಸರು ಇಲ್ಲದೆ ಸರಾಗವಾಗಿ ವಾಹನಗಳು ಚಲಿಸುತ್ತಿದೆ. ಇಲ್ಲಿ ನೇರವಾಗಿ ತೆರವಂತಿಲ್ಲ. ಪ್ರತಿ ರಸ್ತೆಯಲ್ಲಿ ಯೂ ಟರ್ನ್ ತೆಗೆದುಕೊಳ್ಳಬೇಕು. ಬಳಿಕ ಯಾವ ರಸ್ತೆಗೆ ಹೋಗಬೇಕು ಆರಸ್ತೆಯತ್ತ ಸಾಗಬೇಕು. ಈ ಮೂಲಕ ಟ್ರಾಫಿಕ್ ಸಮಸ್ಯೆಯನ್ನು ಸುಲಭವಾಗಿ ತಗ್ಗಿಸಬಹುದು. ಈ ವಿಡಿಯೋವನ್ನು ಆನಂದ್ ಮಹೀಂದ್ರ ಹಂಚಿಕೊಂಡಿದ್ದಾರೆ.

Latest Videos

ಆನಂದ್ ಮಹೀಂದ್ರ ಭೇಟಿ ಮಾಡಿದ ಬಿಲ್ ಗೇಟ್ಸ್, ನನ್ನ ಕ್ಲಾಸ್‌ಮೇಟ್ಸ್‌‌ ಎಂದು ಬರೆದು ಪುಸ್ತುಕ ಉಡುಗೊರೆ!

ಯೆಮೆನ್ ಎಂಜಿನೀಯರ್ ಮೊಹಮ್ಮದ್ ಅವಾಸ್ 2016ರಲ್ಲಿ ಈ ರಸ್ತೆ ವಿನ್ಯಾಸ ಮಾಡಿದ್ದಾರೆ. ಈ ರಸ್ತೆ ಮೂಲಕ ಸಾಗಿದರೆ ಸಿಗ್ನಲ್ ಬೇಕಿಲ್ಲ, ಸರಗವಾಗಿ ಸಾಗಲು ಸಾಧ್ಯವಿದೆ. ಈ ರಸ್ತೆ ಮೂಲಕ ಅರ್ಧ ಸರ್ಕಲ್ ಸುತ್ತಿದರೆ ಸಾಕು ಟ್ರಾಫಿಕ್ ಇಲ್ಲದೆ ಸಂಚರಿಸಬಹುದು. ಆದರೆ ಈ ರಸ್ತೆ ಹೆಚ್ಚಿನ ಇಂಧನ ಬಳಕೆ ಮಾಡಲಿದೆಯಾ ಅನ್ನೋ ಪ್ರಶ್ನೆಯನ್ನೂ ಆನಂದ್ ಮಹೀಂದ್ರ ಕೇಳಿದ್ದಾರೆ.

 

Fascinating. A design by a Yemeni engineer Muhammad Awas (developed in 2016) which continuously regulates traffic without traffic lights using ‘half round-abouts'. But does it involve a higher use of fuel?

[source: https://t.co/iBIxKgbDzs] pic.twitter.com/83UV1vjmTb

— anand mahindra (@anandmahindra)

 

ಆನಂದ್ ಮಹೀಂದ್ರ ಈ ವಿಡಿಯೋ ಹಂಚಿಕೊಂಡ ಬೆನ್ನಲ್ಲೇ ಹಲವರು ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ. ಹೆದ್ದಾರಿಗಳಲ್ಲಿ ಈ ರೀತಿಯ ವಿನ್ಯಾಸದ ಅಗತ್ಯವಿಲ್ಲ. ಕಾರಣ ಈ ರೀತಿ ಸ್ಥಳಗಳಲ್ಲಿ ಫ್ಲೈ ಓವರ್, ಅಂಡರ್ ಪಾಸ್ ಸೇರಿದಂತೆ ಹಲವು ಸೂಕ್ತ ವಿನ್ಯಾಸಗಳಿವೆ. ಇದರಿಂದ ವಾಹನಗಳು ಸರಾಗವಾಗಿ ಸಾಗಬಹುದು. ಇಷ್ಟೇ ಅಲ್ಲ ಸರ್ಕಲ್ ರೀತಿ ಸುತ್ತಾಡಿ ಸಮಯ ಹಾಗೂ ಇಂಧನ ವ್ಯರ್ಥಮಾಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಇನ್ನು ನಗರ ಪ್ರದೇಶಗಳಲ್ಲಿ ಈ ರೀತಿಯ ವಿನ್ಯಾಸಕ್ಕೆ ಹೆಚ್ಚಿನ ಸ್ಥಳಾವಕಾಶ ಅಗತ್ಯವಿದೆ. ಬಸ್ ಇಲ್ಲಿ ಯೂ ಟರ್ನ್ ಪಡೆಯಲು ಬೇಕಾದ ಸ್ಥಳವಕಾಶ ಊಹಿಸಿ. ಹೀಗಾಗಿ ಇದು ಬೆಂಗಳೂರು ಅಥವಾ ಭಾರತದ ನಗರಕ್ಕೆ ಸೂಕ್ತವಲ್ಲ ಎಂಬ ಅಭಿಪ್ರಾಯ ಹೆಚ್ಚಾಗಿ ವ್ಯಕ್ತವಾಗಿದೆ.

ಭಾರತದಲ್ಲಿ ಈಗಿರುವ ಟ್ರಾಫಿಕ್ ಸಿಗ್ನಲ್‌ಗಳನ್ನು ಎಷ್ಟು ಪರಿಣಾಮಕಾರಿಯಾಗಿ ಬಳಕೆ ಮಾಡಲು ಸಾಧ್ಯವಿದೆ ಅನ್ನೋ ಕುರಿತು ಯೋಚನೆ ಮಾಡಬೇಕಿದೆ. ನಗರ ಪ್ರದೇಶದಲ್ಲಿ ಫ್ಲೈ ಓವರ್, ಅಂಡರ್ ಪಾಸ್ ಸೇರಿದಂತೆ ತಂತ್ರಜ್ಞಾನಗಳ ಬಳಕೆ ಮೂಲಕ ರಸ್ತೆ ನೆಟ್ಟಗೆ ಮಾಡಬೇಕಿದೆ. ಭಾರತದ ಬಹುತೇಕ ನಗರ ರಸ್ತೆಗಳು ಕಿರಿದಾಗಿದೆ. ದೂರದೃಷ್ಟಿ ಮೂಲಕ ಮಾಡಿದ ಕಾಮಗಾರಿಯಲ್ಲ. ಹೀಗಾಗಿ ಹೊಸತನದ ಬದಲು ತಂತ್ರಜ್ಞಾನ ಬಳಕೆ ಅಗತ್ಯವಿದೆ ಅನ್ನೋ ಅಭಿಪ್ರಾಯವೂ ವ್ಯಕ್ತವಾಗಿದೆ.

ಮಂಗಳ ಗ್ರಹದಲ್ಲಿ ಥಾರ್ ಲ್ಯಾಂಡಿಂಗ್ ಯಾವಾಗ? ನೆಟ್ಟಿಗನ ಪ್ರಶ್ನೆಗೆ ಆನಂದ್ ಮಹೀಂದ್ರ ಪ್ರಾಸ ಉತ್ತರ!

ಆನಂದ್ ಮಹೀಂದ್ರ ಮಾಡಿದ ಒಂದು ಟ್ವೀಟ್ ಇದೀಗ ಭಾರಿ ಚರ್ಚೆ ಹುಟ್ಟುಹಾಕಿದೆ. ಭಾರತದಲ್ಲಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲು ಯಾವ ಮಾದರಿ ಅನುಸರಿಸಬೇಕು ಅನ್ನೋ ಚರ್ಚೆ ಶುರುವಾಗಿದೆ. ಸದ್ಯ ಭಾರತದ ರಸ್ತೆಗಳು ಮೇಲ್ದರ್ಜೆಗೆ ಏರಿಕೆಯಾಗುತ್ತಿದೆ. ಸಮಸ್ಯೆಗಳಿಗೆ ಮುಕ್ತಿ ನೀಡುವ ಕೆಲಸ ನಡೆಯುತ್ತಿದೆ.ಮುಂದಿನ 100 ವರ್ಷದ ಯೋಚನೆ ಇಟ್ಟು ರಸ್ತೆ ಅಭಿವೃದ್ಧಿಯಾಗಬೇಕು ಅನ್ನೋ ಸಲಹೆಗಳು ವ್ಯಕ್ತವಾಗಿದೆ.

click me!