ಮಂಗಳೂರಿಗೆ ಬರ್ತಿದ್ದ ಹಡಗು ದಾಳಿಕೋರರು ಸಮುದ್ರದ ಆಳದಲ್ಲಿದ್ರೂ ಪತ್ತೆ ಮಾಡ್ತೇವೆ: ರಾಜನಾಥ್‌ ಸಿಂಗ್ ಎಚ್ಚರಿಕೆ

By BK Ashwin  |  First Published Dec 26, 2023, 6:15 PM IST

ಭಾರತೀಯ ನೌಕಾಪಡೆ ಸಮುದ್ರದಲ್ಲಿ ಕಣ್ಗಾವಲು ಹೆಚ್ಚಿಸಿದೆ. ಸಮುದ್ರದ ಆಳದಿಂದಲೂ ಈ ದಾಳಿ ನಡೆಸಿದವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. 


ನವದೆಹಲಿ (ಡಿಸೆಂಬರ್ 26, 2023): ನವಮಂಗಳೂರು ಬಂದರಿಗೆ ತೆರಳುತ್ತಿದ್ದಾಗ ಅರಬ್ಬಿ ಸಮುದ್ರದಲ್ಲಿ ವಾಣಿಜ್ಯ ನೌಕೆ ಎಂವಿ ಕೆಮ್ ಪ್ಲೂಟೋ ಮೇಲೆ ದಾಳಿ ನಡೆಸಿದವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭರವಸೆ ನೀಡಿದ್ದಾರೆ. ವ್ಯಾಪಾರಿ ಹಡಗಿನ ಮೇಲೆ ದಾಳಿ ಮಾಡಿದವರನ್ನು ಸಮುದ್ರದ ಆಳದಿಂದಲೂ ಪತ್ತೆ ಮಾಡುವುದಾಗಿಯೂ ಹೇಳಿದ್ದಾರೆ.

ಭಾರತೀಯ ನೌಕಾಪಡೆ ಸಮುದ್ರದಲ್ಲಿ ಕಣ್ಗಾವಲು ಹೆಚ್ಚಿಸಿದೆ ಎಂದೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭರವಸೆ ನೀಡಿದ್ದಾರೆ. ಸರ್ಕಾರವು ಸಮುದ್ರದಲ್ಲಿ ನಡೆದ ದಾಳಿಯನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ಕಣ್ಗಾವಲು ಹೆಚ್ಚಿಸಿದೆ. ಸಮುದ್ರದ ಆಳದಿಂದಲೂ ಈ ದಾಳಿ ನಡೆಸಿದವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದೂ ರಕ್ಷಣಾ ಸಚಿವರು ಹೇಳಿದ್ದಾರೆ.

Tap to resize

Latest Videos

ಇದನ್ನು ಓದಿ: ಮಂಗಳೂರು ಹಡಗು ಮೇಲೆ ನಾವು ದಾಳಿ ಮಾಡಿಲ್ಲ, ಅಮೆರಿಕ ಆರೋಪ ಸುಳ್ಳು: ಇರಾನ್‌ ಸ್ಪಷ್ಟನೆ

ಕೆಲವು ರಾಷ್ಟ್ರಗಳು ಭಾರತದ ಅಭಿವೃದ್ಧಿಯಿಂದ ಕಂಗೆಟ್ಟಿವೆ ಎಂದೂ ರಕ್ಷಣಾ ಸಚಿವ ಆಕ್ರೋಶ ವ್ಯಕ್ತಪಡಿಸಿದರು. ಸೌದಿ ಅರೇಬಿಯಾದಿಂದ ಕಚ್ಚಾ ತೈಲವನ್ನು ಸಾಗಿಸುತ್ತಿದ್ದ MV Chem Pluto ಎಂಬ ಸರಕು ಸಾಗಣೆ ನೌಕೆಯು ನವ ಮಂಗಳೂರು ಬಂದರಿಗೆ ತೆರಳುತ್ತಿದ್ದಾಗ ಅರಬ್ಬೀ ಸಮುದ್ರದ ಭಾರತದ ಪಶ್ಚಿಮ ಕರಾವಳಿಯಲ್ಲಿ ಡ್ರೋನ್‌ನಿಂದ ಹೂತಿ ಉಗ್ರಗಾಮಿಗಳು ನಡೆಸಿದ ಡ್ರೋನ್ ದಾಳಿಗೆ ಗುರಿಯಾಗಿದೆ ಎಂದು ವರದಿಯಾಗಿತ್ತು.

ಜಪಾನ್ ಒಡೆತನದ ಮತ್ತು ನೆದರ್ಲ್ಯಾಂಡ್ಸ್ ನಿರ್ವಹಿಸುತ್ತಿರುವ ಲೈಬೀರಿಯನ್ ಧ್ವಜದ ಅಡಿಯಲ್ಲಿದ್ದ ರಾಸಾಯನಿಕ ಟ್ಯಾಂಕರ್ ಡಿಸೆಂಬರ್ 23 ರಂದು ಭಾರತೀಯ ಕರಾವಳಿಯಿಂದ ಸುಮಾರು 200 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಡ್ರೋನ್‌ ದಾಳಿಗೊಳಗಾಗಿತ್ತು. ಇದು ಸೌದಿ ಅರೇಬಿಯಾದ ಅಲ್ ಜುಬೈಲ್ ಬಂದರಿನಿಂದ ನವಮಂಗಳೂರು ಬಂದರಿಗೆ ಕಚ್ಚಾ ತೈಲವನ್ನು ಸಾಗಿಸುತ್ತಿತ್ತು.

 

25 ಭಾರತೀಯ ಸಿಬ್ಬಂದಿ ಇದ್ದ ಕಚ್ಚಾ ತೈಲ ಹಡಗಿನ ಮೇಲೆ ಕೆಂಪು ಸಮುದ್ರದಲ್ಲಿ ಡ್ರೋನ್‌ ದಾಳಿ

ಭಾರತೀಯ ನೌಕಾಪಡೆಯ ಪ್ರಕಾರ, 20 ಭಾರತೀಯ ಮತ್ತು ವಿಯೆಟ್ನಾಂ ಸಿಬ್ಬಂದಿ ವ್ಯಾಪಾರಿ ಹಡಗಿನಲ್ಲಿದ್ದರು. ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಭಾರತೀಯ ಕೋಸ್ಟ್ ಗಾರ್ಡ್ ಹಡಗು ಐಸಿಜಿಎಸ್ ವಿಕ್ರಮ್ ರಕ್ಷಣೆಯಲ್ಲಿ ಸರಕು ಹಡಗು ಸೋಮವಾರ ಮುಂಬೈ ಬಂದರನ್ನು ತಲುಪಿದೆ.

 

ಯುಎಸ್‌ ಯುದ್ಧನೌಕೆ ಸೇರಿ ಹಲವಾರು ಹಡಗುಗಳ ಮೇಲೆ ಕೆಂಪು ಸಮುದ್ರದಲ್ಲಿ ಮಾರಣಾಂತಿಕ ದಾಳಿ

click me!