
ಶಿಮ್ಲಾ: ದುಬೈ ವೈಮಾನಿಕ ಪ್ರದರ್ಶನದ ವೇಳೆ ತೇಜಸ್ ಯುದ್ಧವಿಮಾನ ಪತನವಾಗಿ ದುರಂತ ಸಾವಿಗೀಡಾದ ಪೈಲಟ್ ವಿಂಗ್ ಕಮಾಂಡರ್ ನಮಾಂಶ್ ಸ್ಯಾಲ್ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರು ಕಾಂಗ್ರಾದಲ್ಲಿ ನಡೆದಿದೆ. ಈ ವೇಳೆ ವಾಯುಪಡೆಯಲ್ಲಿ ಉದ್ಯೋಗದಲ್ಲಿರುವ ಸ್ಯಾಲ್ ಪತ್ನಿ ಸಮವಸ್ತ್ರದಲ್ಲೇ ಅಂತಿಮಕ್ರಿಯೆಯಲ್ಲಿ ಭಾಗಿಯಾದರು.
ನ.21ರಂದು ದುರ್ಮರಣ ಹೊಂದಿದ ನಮಾಂಶ್ ಪಾರ್ಥಿವ ಶರೀರವನ್ನು ಭಾನುವಾರ ಹುಟ್ಟೂರಿಗೆ ತರಲಾಯಿತು. ಈ ವೇಳೆ ದಾರಿಯುದ್ದಕ್ಕೂ ನೂರಾರು ಜನರು ಸಾಲುಗಟ್ಟಿ ನಿಂತು ದೇಶಭಕ್ತಿಯ ಘೋಷಣೆಗಳನ್ನು ಕೂಗಿ ಅಂತಿಮ ದರ್ಶನ ಪಡೆದರು.
ಈ ವೇಳೆ ಐಎಎಫ್ ಅಧಿಕಾರಿ ನಮಾಂಶ್ ಮಡದಿ ಸೇನಾ ಸಮವಸ್ತ್ರದಲ್ಲೇ ಭಾಗಿಯಾಗಿ 6 ವರ್ಷದ ಮಗಳ ಜತೆಗೆ ಪತಿಗೆ ಭಾವುಕ ವಿದಾಯ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ