ಮತಪಟ್ಟಿ ಪರಿಷ್ಕರಣೆಗೆ ಬೆದರಿ ಅಕ್ರಮ ವಲಸಿಗರು ಬಾಂಗ್ಲಾಗೆ!

Kannadaprabha News   | Kannada Prabha
Published : Nov 24, 2025, 05:13 AM IST
  voter list

ಸಾರಾಂಶ

ಪಶ್ಚಿಮ ಬಂಗಾಳದಲ್ಲಿ ಆರಂಭವಾಗಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ರಾಜ್ಯದಲ್ಲಿ ಅಕ್ರಮವಾಗಿ ಬೀಡುಬಿಟ್ಟಿದ್ದ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ತಲ್ಲಣಗೊಳಿಸಿದೆ. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಅಕ್ರಮ ವಲಸಿಗರು ತಮ್ಮ ತವರಿನತ್ತ ದೌಡಾಯಿಸತೊಡಗಿದ್ದಾರೆ.

ಹಕೀಂಪುರ (ಪ.ಬಂಗಾಳ) : ಪಶ್ಚಿಮ ಬಂಗಾಳದಲ್ಲಿ ಆರಂಭವಾಗಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ರಾಜ್ಯದಲ್ಲಿ ಅಕ್ರಮವಾಗಿ ಬೀಡುಬಿಟ್ಟಿದ್ದ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ತಲ್ಲಣಗೊಳಿಸಿದೆ. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಅಕ್ರಮ ವಲಸಿಗರು ತಮ್ಮ ತವರಿನತ್ತ ದೌಡಾಯಿಸತೊಡಗಿದ್ದಾರೆ. ಕಳೆದ 6 ದಿನಗಳಲ್ಲಿ 1,200 ವಲಸಿಗರು ಬಾಂಗ್ಲಾಕ್ಕೆ ಮರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಗಡಿಯಲ್ಲಿ ರಾತ್ರಿ ವೇಳೆ ಸಾವಿರಾರು ಅಕ್ರಮ ವಲಸಿಗರು ಬಾಂಗ್ಲಾಕ್ಕೆ ಹಿಂದಿರುಗುತ್ತಿರುವ ದೃಶ್ಯಗಳು ಕಂಡುಬಂದಿವೆ. ಇವರಲ್ಲಿ ಹೆಚ್ಚಿನವರು ನ್ಯೂ ಟೌನ್, ಬಿರಾಟಿ, ಧುಲಗೋರಿ, ಬಮಾಂಗಚಿ, ಘುಸುರಿ ಮತ್ತು ಹೌರಾದ ಕೈಗಾರಿಕಾ ವಲಯದವರು. ಅನೇಕರು ದಶಕಗಳ ಹಿಂದೆಯೇ ಭಾರತಕ್ಕೆ ಬಂದು, ಸೂಕ್ತ ದಾಖಲೆಗಳಿಲ್ಲದೆ ನೆಲೆ ನಿಂತವರು. ಇನ್ನು ಕೆಲವರು ಹಣ ಕೊಟ್ಟು ಅಕ್ರಮವಾಗಿ ದಾಖಲೆಗಳನ್ನು ರೂಪಿಸಿಕೊಂಡವರು. ಇದೀಗ ಮತಪಟ್ಟಿ ಪರಿಷ್ಕರಣೆ ಇಂಥವರ ನಿದ್ದೆಗೆಡಿಸಿದೆ. ಅಧಿಕಾರಿಗಳು ದಾಖಲೆ ಕೇಳಿ, ವಿಚಾರಣೆ ನಡೆಸುವುದಕ್ಕೆ ಮುಂಚೆಯೇ ಬಾಂಗ್ಲಾಕ್ಕೆ ಹಿಂದಿರುಗುವುದು ಒಳಿತು ಎಂದು ಹಲವರು ಹೇಳಿಕೊಂಡಿದ್ದಾರೆ.

ಹಣ ಕೊಟ್ಟು ಅಕ್ರಮ ಪ್ರವೇಶ:

ಭಾರತಕ್ಕೆ ಪ್ರವೇಶ ಪಡೆಯಲು 5,000-7,000 ರು. ನೀಡಿದ್ದಾಗಿ ಕೆಲವರು ತಿಳಿಸಿದ್ದಾರೆ. ಇತ್ತೀಚೆಗೆ ದಾಖಲೆಗಳನ್ನು ಪಡೆಯಲು 20,000 ರು.ಗಳನ್ನು ಕೊಟ್ಟಿದ್ದಾಗಿ ಧುಲಗೋರಿಯಲ್ಲಿ ನೆಲೆಸಿದ ಮನಿರುಲ್‌ ಶೇಖ್‌ ಹೇಳಿಕೊಂಡಿದ್ದಾರೆ. ‘ನನ್ನ ಬಳಿ ಯಾವುದೇ ದಾಖಲೆಗಳಿಲ್ಲ. ಆದರೂ 2016, 2019, 2021 ಮತ್ತು 2024ರ ಚುನಾವಣೆಯಲ್ಲಿ ಮತ ಚಲಾಯಿಸಿದ್ದೇನೆ’ ಎಂದು ಇಮ್ರಾನ್‌ ಗಾಝಿ ಎಂಬಾತ ತಿಳಿಸಿದ್ದಾನೆ.

ರಾಜಕೀಯ ಜಟಾಪಟಿ: ‘ ಚುನಾವಣಾ ಗೆಲುವಿಗಾಗಿ ಟಿಎಂಸಿ ಅಕ್ರಮ ವಲಸೆಗೆ ಅವಕಾಶ ಮಾಡಿಕೊಟ್ಟಿದೆ’ ಎಂದು ಬಿಜೆಪಿಯು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ. ಇದಕ್ಕೆ ತಿರುಗೇಟು ನೀಡಿರುವ ಟಿಎಂಸಿ, ‘ಹಿಂದುಳಿದ ಸಮುದಾಯದವರಿಗೆ ತೊಂದರೆ ಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಪರಿಷ್ಕರಣೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ’ ಎಂದು ಆರೋಪಿಸಿದೆ.

ಬಾಂಗ್ಲಾಗೆ ಪಾರಾರಿ ಏಕೆ?

- ಪ.ಬಂಗಾಳದಲ್ಲಿ ಕೇಂದ್ರ ಚುನಾವಣಾ ಆಯೋಗದಿಂದ ಇತ್ತೀಚೆಗೆ ಮತದಾರ ಪಟ್ಟಿ ಪರಿಷ್ಕರಣೆ ಶುರು

- ಮತದಾರರು ಸ್ಥಳೀಯರೇ ಹೌದೆ ಅಥವಾ ಅಕ್ರಮ ವಲಸಿಗರೇ ಎಂದು ಪರಿಷ್ಕರಣೆ ವೇಳೆ ಪರಿಶೀಲನೆ

- ಆದರೆ ಬಂಗಾಳದಲ್ಲಿ ವಾಸವಾಗಲು ಹಣ ಕೊಟ್ಟು ಅಕ್ರಮವಾಗಿ ದಾಖಲೆ ಪಡೆದಿದ್ದ ಬಾಂಗ್ಲಾ ವಂಚಕರು

- ಈಗ ಇಂಥ ನಕಲಿ ದಾಖಲೆಗಳನ್ನು ಪತ್ತೆ ಮಾಡುತ್ತಿರುವ ಚುನಾವಣಾ ಸಿಬ್ಬಂದಿ. ಪತ್ತೆಯಾದರೆ ಸೆರೆ

- ಹೀಗಾಗಿ ಬಂಧನದ ಭೀತಿಯಿಂದ ಸ್ವದೇಶಕ್ಕೆ ಮರಳಲು ಆರಂಭಿಸಿರುವ ಅಕ್ರಮ ಬಾಂಗ್ಲಾ ವಲಸಿಗರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವೆ ನೀಲಿ ಮಾರ್ಗದ ಸುರಂಗದಲ್ಲಿ ಹಠಾತ್ ನಿಂತ ಮೆಟ್ರೋ ರೈಲು
ರಸಗುಲ್ಲಾ ಖಾಲಿ ಆಯ್ತು ಎಂದು ಮುರಿದು ಬಿತ್ತು ಮದ್ವೆ: ಮದುವೆ ಮನೆಯಾಯ್ತು ರಣಾಂಗಣ