
ಚಂಡೀಗಢ: ಗಂಡನನ್ನು ಹಿಜಡಾ ಎನ್ನುವುದು ಮಾನಸಿಕ ಕ್ರೌರ್ಯ ಎಂದಿರುವ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಸ್ಥಳೀಯ ಕೌಟುಂಬಿಕ ನ್ಯಾಯಾಲಯ ಪತಿಯ ಪರವಾಗಿ ನೀಡಿದ್ದ ಡೈವೋರ್ಸ್ ತೀರ್ಪನ್ನು ಎತ್ತಿಹಿಡಿದಿದೆ. ಪತಿ ಮತ್ತು ಪತ್ನಿ ನಡುವಿನ ಜಗಳದ ವೇಳೆ ಪತ್ನಿ ಪತಿಗೆ ಹಿಜಡಾ ಎಂದು ಬೈದಿದ್ದರು. ಜೊತೆಗೆ ಆಕೆಯ ತಾಯಿಗೆ ನಪುಂಸಕನಿಗೆ ಜನ್ಮ ನೀಡಿದ್ದಾಳೆ ಎಂದಿದ್ದರು.
ಇದನ್ನು ಮುಂದಿದಿಟ್ಟುಕೊಂಡು ಪತಿ ಡೈವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಪತ್ನಿಯ ಟೀಕೆ ಮಾನಸಿಕ ಕ್ರೌರ್ಯ ಎಂದಿದ್ದ ಕೌಟುಂಬಿಕ ನ್ಯಾಯಾಲಯ ಡೈವೋರ್ಸ್ ನೀಡಿತ್ತು. ಅದನ್ನು ಇದೀಗ ಹೈಕೋರ್ಟ್ ಕೂಡಾ ಎತ್ತಿಹಿಡಿದಿದೆ.
ಹಿನ್ನೆಲೆ
2017 ರಲ್ಲಿ ಮದುವೆಯಾಗಿದ್ದ ದಂಪತಿ. ಬಳಿಕ ಇಬ್ಬರ ನಡುವೆ ಮನಸ್ತಾಪ ಆಗಿ ಪತ್ನಿ ತನ್ನ ಅತ್ತೆಯ ಕುಟುಂಬದೊಂದಿಗೆ ಸ್ವಲ್ಪ ಸಮಯ ಇದ್ದರು. ಈ ವಿಚಾರವಾಗಿ ಬೇಸತ್ತ ಗಂಡ ವಿಚ್ಛೇದನಕ್ಕೆ ಮುಂದಾದರು
ಹಿಜ್ಬುಲ್ಲಾ ಉಗ್ರ ಸಂಘಟನೆಯ ಮುಂದಿನ ಮುಖ್ಯಸ್ಥ ಆಗಬೇಕಿದ್ದ ಧರ್ಮಗುರು ಸಫೈದ್ದೀನ್ ಹತ್ಯೆ ಮಾಡಿದ ಇಸ್ರೇಲ್!
ಗಂಡನ ಆರೋಪ ಏನು?
ವಿಚ್ಛೇದನ ಅರ್ಜಿಯಲ್ಲಿ, ಮಹಿಳೆ ಪೋರ್ನ್ ಮತ್ತು ಮೊಬೈಲ್ ಗೇಮ್‌ಗಳಿಗೆ ವ್ಯಸನಿಯಾಗಿದ್ದಳು ಎಂದು ಆರೋಪಿಸಿರುವ ಪತಿ. ಲೈಂಗಿಕ ಸಂಭೋಗದ ಅವಧಿಯನ್ನು ಸೆರೆಹಿಡಿಯಲು ಅವಳು ಕೇಳುತ್ತಿದ್ದಳು. ಜೊತೆಗೆ ಸಂಭೋಗವು ಕನಿಷ್ಠ 15 ನಿಮಿಷಗಳು ಮತ್ತು ರಾತ್ರಿಯಲ್ಲಿ ಮೂರು ಬಾರಿ ಇರಬೇಕು ಎಂದು ಪತ್ನಿ ಒತ್ತಾಯಿಸುತ್ತಿದ್ದಳು. ಆದರೆ ಅವಳೊಂದಿಗೆ ಸ್ಪರ್ಧಿಸಲು ದೈಹಿಕವಾಗಿ ನಾನು ಸದೃಢವಾಗಿಲ್ಲ ಎಂಬ ಕಾರಣಕ್ಕೆ ಅವಳು ನನ್ನನ್ನು ಹಿಜಡಾ ಎಂದು ನಿಂದಿಸುತ್ತಿದ್ದಳು ಅಲ್ಲದೆ ತಾನು ಬೇರೊಬ್ಬರನ್ನು ಮದುವೆಯಾಗಲು ಬಯಸುವುದಾಗಿ ಬಹಿರಂಗವಾಗಿ ಹೇಳುತ್ತಿದ್ದಳು ಎಂದು ಮನವಿಯಲ್ಲಿ ಉಲ್ಲೇಖಿಸಿರುವ ಪತಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ