'ಇದು ದೇಶದ ಸಂಪೂರ್ಣ ಬಜೆಟ್‌ಗೆ ಸಮ..' ರೈತರ ಬೇಡಿಕೆಯಾದ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಏಕೆ ಸಾಧ್ಯವಿಲ್ಲ?

By Santosh NaikFirst Published Feb 13, 2024, 6:01 PM IST
Highlights

FARMER PROTEST ಹಾಗೇನಾದರೂ ಭಾರತದಲ್ಲಿ ರೈತರು ಬೆಳೆಯುವ ಎಲ್ಲಾ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಅಡಿಯಲ್ಲಿ ತಂದಲ್ಲಿ ಕೇಂದ್ರ ಸರ್ಕಾರಕ್ಕೆ ಇವುಗಳನ್ನು ಖರೀದಿ ಮಾಡುವ ಸಲುವಾಗಿಯೇ 40 ಲಕ್ಷ ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಆದರೆ, ಮುಂದಿನ ಹಣಕಾಸು ವರ್ಷಕ್ಕೆ ಇಡೀ ದೇಶದ ಬಜೆಟ್‌ ಇರುವುದು 45 ಲಕ್ಷ ಕೋಟಿ ರೂಪಾಯಿ!

ನವದೆಹಲಿ (ಫೆ.13): ಪ್ರತಿಭಟನಾನಿರತ ರೈತರ ಬೇಡಿಕೆಯಂತೆ ದೇಶದಲ್ಲಿ ಉತ್ಪಾದನೆಯಾಗುವ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಖಾತರಿಪಡಿಸುವ ಕಾನೂನು ತಂದಲ್ಲಿ ದೇಶದ ಬೊಕ್ಕಸಕ್ಕೆ 40 ಲಕ್ಷ ಕೋಟಿ ರೂಪಾಯಿಗಳ ಹೊರೆ ಬೀಳುತ್ತದೆ ಎಂದು ಸರ್ಕಾರದ ಲೆಕ್ಕಾಚಾರಗಳು ತೋರಿಸಿವೆ. ಇದು ಮುಂದಿನ ಹಣಕಾಸು ವರ್ಷದ ಬಜೆಟ್‌ ಆಗಿರುವ 45 ಲಕ್ಷ ಕೋಟಿ ರೂಪಾಯಿಗಿಂತ ಸ್ವಲ್ಪವೇ ಕಡಿಮೆ ಎಂದು ಲೆಕ್ಕಾಚಾರ ತಿಳಿಸಿದೆ. ಪ್ರಸ್ತುತ ಇರುವ ಎಂಎಸ್‌ಪಿ ಆದೇಶದ ಬೆಳೆಗಳ ಮೇಲೆ ಅಂತಹ ಖಾತರಿಯು ಸುಮಾರು 10 ಲಕ್ಷ ಕೋಟಿ ರೂಪಾಯಿಗಳ ಪಾವತಿಯನ್ನು ಸರ್ಕಾರ ನೀಡಬೇಕಾಗುತ್ತದೆ ಇದು ಮುಂಬರುವ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರದ ಸಂಪೂರ್ಣ ಬಂಡವಾಳ ವೆಚ್ಚದ ಬಜೆಟ್‌ಗೆ ಸಮನಾಗಿರುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಈ ಅಂಕಿಅಂಶಗಳು ಕೇಂದ್ರವು "ಗ್ಯಾರಂಟಿ ಎಂಎಸ್‌ಪಿ" ಕಾನೂನಿಗೆ ಏಕೆ ಪರವಾಗಿಲ್ಲ ಎನ್ನುವುಸನ್ನು ಸೂಚಿಸಿದೆ. ಹಾಗೇನಾದರೂ ಮಾಡಿದಲ್ಲಿ ಅದು ದೇಶದ ಸಂಪೂರ್ಣ ಹಣಕಾಸಿನ ಸಮತೋಲನಕ್ಕೆ ಕಾರಣವಾಗಲಿದೆ.

ಪ್ರತಿಭಟನಾನಿರತ ರೈತರು ತಾವು ಬೆಳೆದ ಪ್ರತಿಯೊಂದು ಬೆಳೆಯನ್ನು ಕೇಂದ್ರ ಸರ್ಕಾರವು ಎಂಎಸ್‌ಪಿ ದರದಲ್ಲಿ ಖರೀದಿಗೆ ಮುಕ್ತಗೊಳಿಸಬೇಕು  ಅದಕ್ಕಾಗಿ ಕಾನೂನನ್ನು ತರಬೇಕು ಎಂದು ಒತ್ತಾಯ ಮಾಡಿದ್ದಾರೆ.  2020-21ರ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ ಕೃಷಿ ಉತ್ಪನ್ನಗಳ ಒಟ್ಟು ಮೌಲ್ಯವು 40 ಲಕ್ಷ ಕೋಟಿ ರೂಪಾಯಿಗಳಷ್ಟಿರುವುದರಿಂದ ಇದು ದೇಶಕ್ಕೆ ದೊಡ್ಡ ಹೊರೆಯಾಗಿ ಪರಿಣಮಿಸಲಿದೆ. ಇದು ಹೈನುಗಾರಿಕೆ, ಕೃಷಿ, ತೋಟಗಾರಿಕೆ, ಜಾನುವಾರು ಮತ್ತು ಎಂಎಸ್‌ಪಿ ಬೆಳೆಗಳ ಉತ್ಪನ್ನಗಳನ್ನು ಒಳಗೊಂಡಿದೆ. ಒಬ್ಬರು ಕೇವಲ ಎರಡು ಡಜನ್ ಎಂಎಸ್‌ಪಿ ಬೆಳೆಗಳನ್ನು ತೆಗೆದುಕೊಂಡರೆ, ಆ ಕೃಷಿ ಉತ್ಪನ್ನದ ಒಟ್ಟು ಮಾರುಕಟ್ಟೆ ಮೌಲ್ಯವು 2020-21 ರಲ್ಲಿ 10 ಲಕ್ಷ ಕೋಟಿ ರೂಪಾಯಿ ಆಗಿರಲಿದೆ.

ಭಾರತದಲ್ಲಿ ಉತ್ಪಾದನೆಯಾಗುವ ಸಂಪೂರ್ಣ ಎಂಎಸ್‌ಪಿ ಬೆಳೆಯನ್ನು ಸರ್ಕಾರವು ಕನಿಷ್ಟ ಬೆಂಬಲ ಬೆಲೆಯಲ್ಲಿ ಖರೀದಿಸುವುದಿಲ್ಲ, ಏಕೆಂದರೆ ರೈತರು ಅದನ್ನು ಬೇರೆಡೆಯೂ ಮಾರಾಟ ಮಾಡುತ್ತಾರೆ. ನರೇಂದ್ರ ಮೋದಿ ಸರ್ಕಾರವು 2022-23 ರಲ್ಲಿ ಸುಮಾರು 2.28 ಲಕ್ಷ ಕೋಟಿ ರೂಪಾಯಿಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಆಹಾರ ಧಾನ್ಯಗಳನ್ನು ಸಂಗ್ರಹಿಸಲು ಖರ್ಚು ಮಾಡಿದೆ, ಇದು ದೇಶದಲ್ಲಿ ಉತ್ಪಾದನೆಯಾಗುವ ಒಟ್ಟು ಎಂಎಸ್‌ಪಿ ಬೆಳೆಗಳ ಶೇಕಡಾ 25 ರಷ್ಟಿದೆ. ಇದು 2014-15 ರಲ್ಲಿ ಸುಮಾರು 115 ಪ್ರತಿಶತದಷ್ಟು ಹೆಚ್ಚಾಗಿದೆ, ಆಗ ಸರ್ಕಾರವು ಎಂಎಸ್‌ಪಿಯಲ್ಲಿ ಬೆಳೆಗಳನ್ನು ಖರೀದಿಸಲು 1.06 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಿತ್ತು.  ಆಹಾರ ಧಾನ್ಯಗಳ ಎಂಎಸ್‌ಪಿ ಆಧಾರಿತ ಸಂಗ್ರಹಣೆಯು 2014-15 ರಲ್ಲಿ 761.40 ಲಕ್ಷ ಮೆಟ್ರಿಕ್ ಟನ್‌ಗಳಿಂದ 2022-23 ರಲ್ಲಿ 1,062.69 ಲಕ್ಷ ಮೆಟ್ರಿಕ್ ಟನ್‌ಗಳಿಗೆ, ಸುಮಾರು 38 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಡೇಟಾ ತೋರಿಸುತ್ತದೆ. ಹಾಗಿದ್ದರೂ ರೈತರು ಇನ್ನೂ ಹೆಚ್ಚಿನ ಬೆಳೆಗಳಿಗೆ ಎಂಎಸ್‌ಪಿ ಕೇಳುತ್ತಿದ್ದಾರೆ.

ಎಂಎಸ್‌ಪಿ ಗ್ಯಾರಂಟಿ ಕಾನೂನನ್ನು ತಂದರೆ, ಕೇಂದ್ರವು ವಾರ್ಷಿಕವಾಗಿ ಕನಿಷ್ಠ 10 ಲಕ್ಷ ಕೋಟಿ ರೂಪಾಯಿ ವೆಚ್ಚವನ್ನು ನೋಡಲಿದೆ. ಇದು ಈ ಸರ್ಕಾರವು ಮಧ್ಯಂತರ ಬಜೆಟ್‌ನಲ್ಲಿ ಮೂಲಸೌಕರ್ಯಕ್ಕಾಗಿ ಮೀಸಲಿಟ್ಟ 11.11 ಲಕ್ಷ ಕೋಟಿ ರೂಪಾಯಿಗಳ ವೆಚ್ಚಕ್ಕೆ ಸಮನಾಗಿರುತ್ತದೆ. ಎಂಎಸ್‌ಪಿ ಅಡಿಯಲ್ಲಿ ದೇಶದಲ್ಲಿ ಉತ್ಪಾದಿಸುವ ಪ್ರತಿಯೊಂದು ಬೆಳೆಯನ್ನು ಸರಿದೂಗಿಸಲು ರೈತರ ದೊಡ್ಡ ಬೇಡಿಕೆಯನ್ನು ಒಪ್ಪಿಕೊಳ್ಳುವುದು ಇಡೀ ಒಕ್ಕೂಟದ ಬಜೆಟ್ ಅನ್ನು ವಿನಿಯೋಗಿಸುವುದು ಎಂದೇ ಅರ್ಥವಾಗುತ್ತದೆ. ಇದು ಮುಂದಿನ ಐದು ವರ್ಷಗಳಲ್ಲಿ ಭಾರತದ "ಮೂರನೇ ಅತಿದೊಡ್ಡ ಆರ್ಥಿಕತೆ" ಗುರಿಯನ್ನು ಗಂಭೀರ ಅಪಾಯಕ್ಕೆ ಸಿಲುಕಿಸುತ್ತದೆ ಮತ್ತು ನೇರ ಮತ್ತು ಪರೋಕ್ಷ ತೆರಿಗೆಗಳ ಮೂಲಕ ಜನರನ್ನು ಹೆಚ್ಚು ತೆರಿಗೆಗೆ ಒಡ್ಡುತ್ತದೆ ಎಂದು ಸರ್ಕಾರಿ ಮೂಲಗಳು ಹೇಳುತ್ತವೆ.

ರಾಷ್ಟ್ರ ರಾಜಧಾನಿಯಲ್ಲಿ ಮೊಳಗಿದ ರೈತ ಕಹಳೆ: ಅನ್ನದಾತನ ತಡೆಯಲು ಬ್ಯಾರಿಕೇಡ್‌, ತಂತಿಬೇಲಿ ನಿರ್ಮಾಣ

ಪ್ರಸ್ತುತ ರೈತರ ಪ್ರತಿಭಟನೆಯು ರಾಜಕೀಯ ಮತ್ತು ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ಬೆಂಬಲದಿಂದ ನಡೆಸಲ್ಪಟ್ಟಿದೆ ಎಂದು ಆಡಳಿತಾರೂಢ ಭಾರತೀಯ ಜನತಾ ಪಕ್ಷದ ನಾಯಕರು ದೂರಿದ್ದಾರೆ. ಪಂಜಾಬ್‌ನ ಎಎಪಿ ಸರ್ಕಾರವು ಹರಿಯಾಣದ ಗಡಿಯನ್ನು ತಲುಪಲು ರೈತರಿಗೆ ಉಚಿತ ಪಾಸ್ ನೀಡಿದೆ ಮತ್ತು ದೆಹಲಿಯ ಕ್ರೀಡಾಂಗಣವನ್ನು ತಾತ್ಕಾಲಿಕ ಜೈಲಾಗಿ ಪರಿವರ್ತಿಸುವ ಕೇಂದ್ರದ ಮನವಿಯನ್ನು ನಿರಾಕರಿಸಿದೆ. ಇನ್ನೊಂದೆಡೆ ಕಾಂಗ್ರೆಸ್‌ ಪಕ್ಷ ದೇಶದ ಆರ್ಥಿಕತೆಗೆ ಆಗುವ ಗಂಭೀರತೆಯನ್ನು ಲೆಕ್ಕಿಸದೇ ರೈತರ ಬೇಡಿಕೆಗೆ ಬೆಂಬಲವನ್ನು ನೀಡಿದೆ.

6 ತಿಂಗಳ ಗುರುದ್ವಾರದ ಆಹಾರ ಶೇಖರಣೆ, ರೈತ ಪ್ರತಿಭಟನೆ ಅಪಾಯ ಎಚ್ಚರಿಸಿದ ಗುಪ್ತಚರ ಇಲಾಖೆ!

ದೇಶದ ಪ್ರಮುಖ ಬೆಳೆಗಳಿಗೆ ಎಂಎಸ್‌ಪಿ ಸ್ಥಿರವಾಗಿ ಏರುತ್ತದೆ ಎಂದು ಕೇಂದ್ರ ಸರ್ಕಾರ ಅಂಕಿ-ಅಂಶಗಳ ಮೂಲಕ ತಿಳಿಸಿದೆ. 2023-24ರಲ್ಲಿ ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ 2,183 ರೂಪಾಯಿ ಸಿಗುತ್ತಿದೆ 2021-22ಕ್ಕೆ 243 ರೂಪಾಯಿ ಸಿಗುತ್ತಿತ್ತು.  ಈ ಹಣಕಾಸು ವರ್ಷದಲ್ಲಿ ಗೋಧಿಯ ಎಂಎಸ್‌ಪಿ 2,275 ರೂ ಆಗಿದ್ದು, ಎರಡು ವರ್ಷಗಳ ಹಿಂದೆ 250 ರೂಪಾಯಿ ಆಗಿತ್ತು. ಕಳೆದ ಎರಡು ವರ್ಷಗಳಲ್ಲಿ ಜೋಳದ ಎಂಎಸ್‌ಪಿ 442 ರೂ., ರಾಗಿಗೆ 469 ರೂ., ಮತ್ತು ಹತ್ತಿಗೆ 894 ರೂ. ಏರಿಕೆಯಾಗಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರತಿ ಕ್ವಿಂಟಲ್‌ಗೆ 6,620 ರೂ.ಗೆ ತಲುಪಿದೆ ಎಂದಿದೆ.
 

click me!