ನವದೆಹಲಿ(ಜ. 30) : ಇಂದು ಹುತಾತ್ಮರ ದಿನ ದೇಶಕ್ಕಾಗಿ ಹೋರಾಡಿ ಮಡಿದ ಸ್ವಾತಂತ್ರ ಹೋರಾಟಗಾರು ಹಾಗೂ ಯೋಧರ ಸ್ಮರಣೆ ಮಾಡುವ ದಿನ. 'ಶಹೀದ್ ದಿವಸ್' ಎಂದೂ ಕರೆಯಲ್ಪಡುವ ಹುತಾತ್ಮರ ದಿನವನ್ನು ಪ್ರತಿ ವರ್ಷ ಜನವರಿ 30 ರಂದು ಮಹಾತ್ಮ ಗಾಂಧಿಯವರ ಪುಣ್ಯತಿಥಿಯಂದು ಆಚರಿಸಲಾಗುತ್ತದೆ. ಮಾತೃಭೂಮಿಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಲು ಭಾರತದಲ್ಲಿ ಜನವರಿ 30 ಮತ್ತು ಮಾರ್ಚ್ 23 ರಂದು 'ಶಹೀದ್ ದಿವಸ್' ಅನ್ನು ಆಚರಿಸಲಾಗುತ್ತಿದೆ.
ಜನವರಿ 30 ರಂದು, ಬಿರ್ಲಾ ಹೌಸ್‌ನಲ್ಲಿರುವ (Birla house) ಗಾಂಧಿ ಸ್ಮೃತಿಯಲ್ಲಿ( Gandhi Smriti) ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಲಾಯಿತು. ಹುತಾತ್ಮರ ದಿನದ ಈ ಸಂದರ್ಭದಲ್ಲಿ, ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಕ್ಷಣಾ ಸಚಿವರು, ಭಾರತೀಯ ಸಶಸ್ತ್ರ ಪಡೆಗಳ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಮತ್ತು ಮೂವರು ಸೇನಾ ಮುಖ್ಯಸ್ಥರು ರಾಜ್ ಘಾಟ್ ಸ್ಮಾರಕದ (Raj Ghat memorial) ಸಮಾಧಿಯಲ್ಲಿ ಸೇರುತ್ತಾರೆ.
Parliament Winter Session: 3 ವರ್ಷದಲ್ಲಿ 1,034 ಉಗ್ರ ದಾಳಿ, 177 ಸೈನಿಕರು ಹುತಾತ್ಮ!
ಇನ್ನು ಮಾರ್ಚ್ 23 ರಂದು, ಕ್ರಾಂತಿಕಾರಿ ಸ್ವಾತಂತ್ರ ಹೋರಾಟಗಾರರಾಗಿರುವ ಭಗತ್ ಸಿಂಗ್, ಶಿವರಾಮ ರಾಜಗುರು ಮತ್ತು ಸುಖದೇವ್ ಥಾಪರ್ ಅವರನ್ನು ಬ್ರಿಟಿಷರು ಗಲ್ಲಿಗೇರಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ವಾತಂತ್ರಕ್ಕಾಗಿ ಪ್ರಾಣತೆತ್ತ ವೀರ ಪುತ್ರಿಗೆ ಜನರು ಗೌರವ ಸಲ್ಲಿಸಲು ಮಾರ್ಚ್ 23 ರಂದು ಕೂಡ ಹುತಾತ್ಮ ದಿನ ಅಥವಾ ಶಹೀದ್ ದಿವಸವನ್ನು ಆಚರಿಸಲಾಗುತ್ತಿದೆ.
ರಾಷ್ಟ್ರಪಿತ ಎಂದು ಕರೆಯಲ್ಪಡುವ ಮಹಾತ್ಮಾ ಗಾಂಧಿಯವರು (Mahatma Gandhi) ಜನವರಿ 30, 1948 ರಂದು ನಾಥುರಾಮ್ ಗೋಡ್ಸೆ (Nathuram Godse) ಯಿಂದ ಹತ್ಯೆಗೀಡಾದರು. ಗಾಂಧಿ ವಸಾಹತುಶಾಹಿಯನ್ನು ವಿರೋಧಿಸುತ್ತಿದ್ದ ರಾಷ್ಟ್ರೀಯತಾವಾದಿಯಾಗಿದ್ದು, ಅವರು ಬ್ರಿಟಿಷ್ ಆಳ್ವಿಕೆಯಿಂದ ಭಾರತವನ್ನು ಮುಕ್ತಗೊಳಿಸಲು ಅಹಿಂಸಾತ್ಮಕ ಮಾರ್ಗಗಳನ್ನು ಅನುಸರಿಸಿದರು. ಅಲ್ಲದೇ ಪ್ರಪಂಚದಾದ್ಯಂತ ನಾಗರಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕಾಗಿ ವಿವಿಧ ಚಳುವಳಿಗಳಗೆ ಪ್ರೇರಕ ಶಕ್ತಿಯಾಗಿದ್ದರು.
Rajasthan: ಹುತಾತ್ಮನಿಗೆ 5 ವರ್ಷದ ಮಗನಿಂದ ಅಗ್ನಿ ಸ್ಪರ್ಶ, ಮೊಮ್ಮಗನನ್ನೂ ಸೇನೆಗೆ ಕಳಿಸ್ತೀನಿ ಎಂದ ಅಜ್ಜ!
ಇಂತಹ ಮಹಾತ್ಮನನ್ನು ನೆನೆಯುವ ಸಲುವಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ಅವರು ನೀಡಿದ ಕೊಡುಗೆಯನ್ನು ಗುರುತಿಸಲು ಭಾರತವು ಜನವರಿ 30 ರಂದು ಹುತಾತ್ಮ ದಿನವನ್ನು ಆಚರಿಸುತ್ತದೆ. ಕೇಂದ್ರ ಸರ್ಕಾರದ ನಿರ್ದೇಶನದ ಪ್ರಕಾರ, ಜನವರಿ 30 ರಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎರಡು ನಿಮಿಷಗಳ ಮೌನವನ್ನು ಆಚರಿಸಲಾಗುತ್ತದೆ.
ಇವೆರಡು ದಿನಗಳಲ್ಲದೇ ಹುತಾತ್ಮರ ದಿನವನ್ನು ದೇಶದಾದ್ಯಂತ ಏಳು ವಿವಿಧ ದಿನಗಳಲ್ಲಿ ಆಚರಿಸಲಾಗುತ್ತದೆ. ಅವುಗಳೆಂದರೆ ಜನವರಿ 30, ಮಾರ್ಚ್ 23, ಮೇ 19, ಅಕ್ಟೋಬರ್ 21, ನವೆಂಬರ್ 17, ನವೆಂಬರ್ 19 ಮತ್ತು ನವೆಂಬರ್ 24 ರಂದು ಕೂಡ ಆಯಾ ಪ್ರದೇಶದಲ್ಲಿ ಹುತಾತ್ಮರಾದ ಸ್ವಾತಂತ್ರ ಹೋರಾಟಗಾರರನ್ನು ನೆನೆದು ಅವರನ್ನು ಸ್ಮರಿಸಲು ಹುತಾತ್ಮ ದಿನವನ್ನು ಅಚರಿಸಲಾಗುತ್ತಿದೆ.
ಕಳೆದ ಮೂರು ವರ್ಷಗಳಲ್ಲಿ ದೇಶಾದ್ಯಂತ ಒಟ್ಟು 1,034 ಭಯೋತ್ಪಾದಕ ದಾಳಿಗಳು (Terror Attacks) ನಡೆದಿವೆ. ಈ ದಾಳಿಯಲ್ಲಿ ಒಟ್ಟು 177 ಯೋಧರು ಹುತಾತ್ಮರಾಗಿದ್ದಾರೆ. ಈ ಪೈಕಿ 1,033 ದಾಳಿಗಳು ಜಮ್ಮು ಮತ್ತು ಕಾಶ್ಮೀರದಲ್ಲಿ (jammu Kashmir) ನಡೆದಿದ್ದರೆ, ಒಂದು ದಾಳಿ ದೆಹಲಿಯಲ್ಲಿ ನಡೆದಿದೆ ಎಂದು ರಾಜ್ಯಸಭೆಯಲ್ಲಿ ಕಳೆದ ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಉಪನಾಯಕ ಆನಂದ್ ಶರ್ಮಾ (Congress MP Anand Sharma) ಕೇಳಿದ ಪ್ರಶ್ನೆಗೆ ಉತ್ತರವಾಗಿ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ (Union Minister Ajay Bhatt) ಈ ಮಾಹಿತಿ ನೀಡಿದ್ದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ