'ಅಪ್ಪುಗೆ ನಮ್ಮ ಸಂಸ್ಕೃತಿಯ ಭಾಗ' ವಿದೇಶಿ ಮಾಧ್ಯಮಗಳಿಗೆ ವಿದೇಶಾಂಗ ಸಚಿವ ಎಸ್‌ ಜೈಶಂಕರ್ ತಿರುಗೇಟು

By Kannadaprabha News  |  First Published Aug 24, 2024, 10:06 AM IST

ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿಅವರನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹಲವು ಬಾರಿ ಆತ್ಮೀಯವಾಗಿ ಅಪ್ಪಿಕೊಂಡಿದ್ದನ್ನು ಪ್ರಶ್ನಿಸಿದ ವಿದೇಶಿ ಮಾಧ್ಯಮಗಳಿಗೆ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ತಿರುಗೇಟು ನೀಡಿದ್ದಾರೆ. 


ಕೀವ್‌ (ಆ.24): ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿಅವರನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹಲವು ಬಾರಿ ಆತ್ಮೀಯವಾಗಿ ಅಪ್ಪಿಕೊಂಡಿದ್ದನ್ನು ಪ್ರಶ್ನಿಸಿದ ವಿದೇಶಿ ಮಾಧ್ಯಮಗಳಿಗೆ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ತಿರುಗೇಟು ನೀಡಿದ್ದಾರೆ. 

ಇಂಥದ್ದೊಂದು ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಜೈಶಂಕರ್‌, ‘ಇಬ್ಬರು ವ್ಯಕ್ತಿಗಳು ಪರಸ್ಪರ ಭೇಟಿಯಾದಾಗ ಅಪ್ಪಿಕೊಳ್ಳುವುದು ನಮ್ಮ ಸಂಸ್ಕೃತಿ. ಪ್ರಧಾನಿ ಮೋದಿ ಬೇರೆ ಬೇರೆ ಸಂದರ್ಭಗಳಲ್ಲಿ ವಿವಿಧ ನಾಯಕರನ್ನು ಭೇಟಿಯಾದಾಗಲೂ ಅಪ್ಪಿಕೊಂಡಿದ್ದನ್ನು ನಾನು ನೋಡಿದ್ದೇನೆ. ಇಂದು ಅಂತೆಯೇ ಜೆಲೆನ್ಸ್ಕಿ ಅವರನ್ನು ಅಪ್ಪಿದ್ದಾರೆ. ನಿಮ್ಮ ಈ ಪ್ರಶ್ನೆ ನಮ್ಮ ನಡುವೆ ಇರುವ ಸಾಂಸ್ಕೃತಿಕ ಭಿನ್ನತೆಯನ್ನು ತೋರಿಸುತ್ತದೆ’ ಎಂದು ಪ್ರಧಾನಿ ಮೋದಿ ಅವರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ

Tap to resize

Latest Videos

undefined

ಪ್ರಧಾನಿ ಮೋದಿ ಮತ್ತು ಯೋಗಿ ಆದಿತ್ಯನಾಥ್‌ ಹೊಗಳಿದ್ದಕ್ಕೆ ಪತ್ನಿಗೆ ತಲಾಖ್ ನೀಡಿದ ಪತಿ!

ಮೋದಿಯ ಶಾಂತಿ ಮಾರ್ಗ ಸ್ವಾಗತಾರ್ಹ

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪುಟಿನ್‌ಗಿಂತ ಹೆಚ್ಚು ಶಾಂತಿಯನ್ನು ಬಯಸುತ್ತಾರೆ. ಶಾಂತಿ ಸ್ಥಾಪನೆಗೆ ಅವರ ಬಳಿ ಯಾವುದಾದರೂ ಆಲೋಚನೆಗಳಿದ್ದರೆ ಅದನ್ನು ನಾವು ಸ್ವಾಗತಿಸುತ್ತೇವೆ. ಆ ಯೋಚನೆಗಳನ್ನು ಅಳವಡಿಸಿಕೊಳ್ಳುವಲ್ಲಿ ಹಾಗೂ ಅದರ ಬಗ್ಗೆ ಮಾತನಾಡಲು ನಾವು ಸಂತೋಷಪಡುತ್ತೇವೆ. ಭಾರತ ದೊಡ್ಡ ದೇಶ. ಈ ದೊಡ್ಡ ದೇಶದ ಪ್ರಭಾವದಿಂದ ಪುಟಿನ್‌ರನ್ನು ಹಾಗೂ ಅವರ ಆರ್ಥಿಕತೆಯನ್ನು ನಿಲ್ಲಿಸಬಹುದು. ತನ್ನ ಸ್ಥಾನ ಏನು ಎಂಬುದನ್ನು ತಿಳಿಸಬಹುದು.ವೊಲೊದಿಮಿರ್ ಜೆಲೆನ್‌ಸ್ಕಿ, ಉಕ್ರೇನ್‌ ಅಧ್ಯಕ್ಷ

click me!