
'ಚಹಾ ಮಾರೋರಿಗೆ ರೋಲ್ಸ್ ರಾಯ್ಸ್ ಕೊಳ್ಳೋಕಾಗಲ್ಲ ಅಂತ ಯಾರು ಹೇಳಿದ್ದು?' ಹೀಗೆ ಕೇಳುತ್ತಾ ತನ್ನದೇ ವಿಶಿಷ್ಠ ಶೈಲಿಯಲ್ಲಿ ರೋಲ್ಸ್ ರಾಯ್ಸ್ ಕಾರಿನಲ್ಲಿ ಕುಳಿತುಕೊಳ್ಳುವ ಡಾಲಿ ಚಾಯ್‌ವಾಲಾ ವಿಡಿಯೋ ವೈರಲ್ ಆಗಿದೆ. ಆದರೆ, ಈ ವಿಡಿಯೋ ಕೇವಲ ವೈರಲ್ ಆಗದೆ ನೆಟ್ಟಿಗರ ನಡುವೆ ಜಗಳ ತಂದಿಟ್ಟಿದೆ.
ಡಾಲಿ ಚಾಯ್‌ವಾಲಾ ನೆನೆಪಿದ್ಯಲ್ಲ? ಬಿಲ್ ಗೇಟ್ಸ್ ಇವರ ಚಹಾ ಅಂಗಡಿಯಲ್ಲೇ ಚಾಯ್ ಕುಡಿದಿದ್ದು. ತನ್ನ ವಿಶಿಷ್ಠ ಮ್ಯಾನರಿಸಂ, ವೇಷಭೂಷಣ ಮತ್ತು ಟೀ ಮಾಡುವ ವೈಖರಿಗೆ ಫೇಮಸ್ ಆಗಿರೋ ಡಾಲಿ ಚಾಯ್‌ವಾಲಾ ಇನ್ಸ್ಟಾಗ್ರಾಂ ಇನ್ಫ್ಲುಯೆನ್ಸರ್ ಕೂಡಾ ಹೌದು. ಸಾಮಾಜಿಕ ಜಾಲತಾಣಗಳಲ್ಲಿ ಡಾಲಿಗೆ ಉತ್ತಮ ಅಭಿಮಾನಿಗಳಿದ್ದಾರೆ. ಡಾಲಿ ಆಗಾಗ್ಗೆ ತಮ್ಮ ಹ್ಯಾಂಡಲ್‌ನಿಂದ ಚಿತ್ರಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ, ಇದನ್ನು ನೆಟ್ಟಿಗರು ಇಷ್ಟಪಡುತ್ತಾರೆ.
ರೋಲ್ಸ್ ರಾಯ್ಸ್
ಇತ್ತೀಚೆಗೆ ಡಾಲಿ ಅವರು ರೋಲ್ಸ್ ರಾಯ್ಸ್ ಜೊತೆ ಕಾಣಿಸಿಕೊಂಡಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ಹಿಂದೆಯೂ ಡಾಲಿ ಚಾಯ್‌ವಾಲಾ ಅವರು ಲಂಬೋರ್ಗಿನಿ ನಂತಹ ಐಷಾರಾಮಿ ಕಾರಿನೊಂದಿಗೆ ಚಿತ್ರಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಆದರೆ ರೋಲ್ಸ್ ರಾಯ್ಸ್ ಜೊತೆಗಿನ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದೆ. ವೀಡಿಯೊದಲ್ಲಿ ಡಾಲಿ ಚಾಯ್‌ವಾಲಾ ಕಾರಿನೊಳಗೆ ಕುಳಿತಿರುವುದನ್ನು ನೀವು ನೋಡುತ್ತೀರಿ.
ವೀಡಿಯೊದಲ್ಲಿ ಅವರು - 'ಚಹಾ ಮಾರುವವನು ರೋಲ್ಸ್ ರಾಯ್ಸ್ ಖರೀದಿಸಲು ಸಾಧ್ಯವಿಲ್ಲ ಎಂದು ಯಾರು ಹೇಳಿದ್ದು? ಸಮಯವನ್ನು ಬದಲಾಗಲು ಸಮಯ ತೆಗೆದುಕೊಳ್ಳುವುದಿಲ್ಲ ಸ್ನೇಹಿತರೇ.. ನೀವು ಕಷ್ಟಪಟ್ಟು ಕೆಲಸ ಮಾಡಿ' ಎಂದಿದ್ದಾರೆ.
ಈ ವಿಡಿಯೋ ಇದುವರೆಗೆ 27 ಮಿಲಿಯನ್ ವೀಕ್ಷಣೆ ಪಡೆದಿದ್ದು, 19 ಲಕ್ಷ ಮಂದಿ ಲೈಕ್ ಮಾಡಿದ್ದಾರೆ. ಅನೇಕ ಬಳಕೆದಾರರು ಈ ವೀಡಿಯೊಗೆ ಕಾಮೆಂಟ್ ಮಾಡಿದ್ದಾರೆ. ಸಾಕಷ್ಟು ಮಂದಿ ಡಾಲಿಯನ್ನು ಟ್ರೋಲ್ ಮಾಡಿದ್ದಾರೆ.
ಕಾಮೆಂಟ್ಗಳ ಪ್ರವಾಹ
ಒಬ್ಬ ಬಳಕೆದಾರರು 'ಮೋದಿಗಿಂತ ಎತ್ತರಕ್ಕೆ ಹೋಗಿದ್ದೀರಾ' ಎಂದಿದ್ದರೆ, ಇನ್ನೊಬ್ಬ ಬಳಕೆದಾರರು 'ಸಹೋದರ, ನಾನು ಎಂಜಿನಿಯರಿಂಗ್ ಮಾಡಬೇಕೇ ಅಥವಾ ಬೇಡವೇ?' ಎಂದು ಕೇಳಿದ್ದಾರೆ. ಮೂರನೇ ಬಳಕೆದಾರರು ಶಿಕ್ಷಣ ಪಡೆಯದೆ ಮೆರೆಯುತ್ತಿರುವ ಡಾಲಿ ಬಗ್ಗೆ, 'ಅವರು ಇಡೀ ಶಿಕ್ಷಣ ವ್ಯವಸ್ಥೆಯನ್ನು ಅಣಕಿಸುತ್ತಿದ್ದಾರೆ' ಎಂದರೆ, ನಾಲ್ಕನೇ ಬಳಕೆದಾರರು 'ಇದಕ್ಕಿಂತ ಕೆಟ್ಟ ಸಹಯೋಗ(ಕೊಲಾಬರೇಶನ್) ಇರುವಂತಿಲ್ಲ' ಎಂದಿದ್ದಾರೆ.
ಈ ಕಾಮೆಂಟ್‌ಗಳಲ್ಲಿ ಹಲವರು ಡಾಲಿಯನ್ನು ಅಣಕಿಸಿದ್ದಾರೆ, ಟ್ರೋಲ್ ಮಾಡಿದ್ದಾರೆ. ಓದಿದವರೇ ಕೆಸವಿಲ್ಲದೆ ಕೂತಿರುವಾಗ ಡಾಲಿಯಂತವರು ರೋಲ್ಸ್ ರಾಯ್ಸ್ ಜೊತೆ ಮೆರೆಯುತ್ತಿದ್ದಾರೆ ಎಂದು ವ್ಯಂಗ್ಯವಾಡುತ್ತಿದ್ದಾರೆ. ಇನ್ನೂ ಕೆಲವರು ಡಾಲಿಯ ಸ್ಟೈಲನ್ನು, ಮಾತನ್ನು ವ್ಯಂಗ್ಯವಾಡಿದ್ದಾರೆ. ಆದರೆ, ಡಾಲಿಗೆ ಹೆಚ್ಚಿನ ನೆಟ್ಟಿಗರು ಅವಮಾನಿಸುತ್ತಿರುವಂತೆಯೇ ಮತ್ತೊಂದು ವರ್ಗ ಅವರ ಬೆಂಬಲಕ್ಕೆ ನಿಂತಿದೆ.
ಅವರು ಹಣ ಗಳಿಸುತ್ತಾರೆಂದು ವ್ಯಂಗ್ಯವಾಡುವವರು ಕೈಲಾಗದವರು, ಓದಿಯೂ ಕೆಲಸ ಗಿಟ್ಟಿಸಲಾಗದ್ದು ನಿಮ್ಮ ಸೋಲು ಎಂದು ತಿರುಗೇಟು ನೀಡುತ್ತಿದ್ದಾರೆ. ಅಲ್ಲದೆ, ಆತ ನಿಮ್ಮ ಕೆಲಸ ಕದಿಯುತ್ತಿಲ್ಲ, ತನ್ನ ಪಾಡಿಗೆ ತನ್ನ ಜೀವನ ಮಾಡುತ್ತಿದ್ದಾನೆ ಎಂದು ಡಾಲಿ ಪರ ಮಾತಾಡಿದ್ದಾರೆ.
ಟೀ ಸ್ಟಾಲ್
ಡಾಲಿ ಚಾಯ್‌ವಾಲಾ ನಾಗ್ಪುರದವರು ಮತ್ತು ಅವರು ಅಲ್ಲಿಯೇ ತಮ್ಮ ಪುಟ್ಟ ಟೀ ಸ್ಟಾಲ್ ಇಟ್ಟುಕೊಂಡಿದ್ದಾರೆ. ನಾಗ್ಪುರದ ಅನೇಕ ಜನರು ತಮ್ಮ ಅಂಗಡಿಗಳನ್ನು ಉದ್ಘಾಟಿಸಲು ಅವರನ್ನು ಕರೆಯುತ್ತಾರೆ. ಅನೇಕ ಬ್ರಾಂಡ್‌ಗಳು ಅವರೊಂದಿಗೆ ಸಹಕರಿಸುತ್ತವೆ. ಅವರು Instagram ನಲ್ಲಿ 2.1 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಪ್ರಸ್ತುತ, ಅವರು ಮಾಲ್ಡೀವ್ಸ್‌ನಲ್ಲಿ ರಜೆಯಲ್ಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ