ಕ್ಯಾಪ್ಟನ್‌ ಸ್ಮಿತ್‌ರನ್ನು ಇರಿದು ಉಗ್ರ ಸಂಚು ರೂಪಿಸಿದ್ದ ಕೋ-ಪೈಲೆಟ್‌ ಯಾರು? ಗುಟ್ಟಾಗಿದ್ದು ಯಾಕೆ

Published : Oct 01, 2026, 07:42 PM IST
Captain Smit Machchhar

ಸಾರಾಂಶ

ದುಬೈಯಿಂದ ಟೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನದಲ್ಲಿ ಸಹ-ಪೈಲಟ್‌ನಿಂದ ಇರಿತಕ್ಕೊಳಗಾದರೂ ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ 137 ಪ್ರಯಾಣಿಕರ ಜೀವ ಉಳಿಸಿದ್ದಾರೆ. ಓಮನ್ ಮೂಲದ ಸಹ-ಪೈಲಟ್‌ನ ಈ ಕೃತ್ಯದ ಹಿಂದೆ ಉಗ್ರರ ಕೈವಾಡವಿದೆಯೇ ಎಂಬ ಬಗ್ಗೆ ಯುಎಇ ಅಟಾರ್ನಿ ಜನರಲ್ ತನಿಖೆಗೆ ಆದೇಶಿಸಿದ್ದಾರೆ.

ದುಬೈ: ದುಬೈಯಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ನಿನ್ನೆ ಹೊರಟಿದ್ದ ಫ್ಲೈದುಬೈ FZ1073 ವಿಮಾನದಲ್ಲಿ ಸಂಭವಿಸಿದ ಘಟನೆಯಲ್ಲಿ 137 ಪ್ರಯಾಣಿಕರ ಜೀವ ಉಳಿಸಿರುವ ಭಾರತದ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಈಗ ವಿಶ್ವದಾದ್ಯಂತ ಸದ್ದು ಮಾಡುತ್ತಿದ್ದಾರೆ. ಸಹ ಪೈಲೆಟ್‌ನಿಂದ ಇರಿತಕ್ಕೆ ಒಳಗಾದರೂ, ಭಾರತೀಯ ಸಂಜಾತ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಧೈರ್‍ಯ, ಸಾಹಸಕ್ಕೆ (ಒಂದಷ್ಟು ಶತ್ರು ರಾಷ್ಟ್ರಗಳನ್ನು ಬಿಟ್ಟರೆ) ಇಡೀ ವಿಶ್ವವೇ ಕೊಂಡಾಡುತ್ತಿದೆ. ಒಂದು ವೇಳೆ ಕ್ಯಾಪ್ಟನ್‌ ಸ್ಮಿತ್‌ ಅವರು, ಈ ಕಾರ್ಯ ನಡೆಸದಿದ್ದರೆ, ಎಲ್ಲಾ ಪ್ರಯಾಣಿಕರೂ ಜೀವ ಕಳೆದುಕೊಳ್ಳಬೇಕಿತ್ತು. ಹೀಗೆ ಆಗಿದ್ದರೆ, ಇದೊಂದು 9/11ರ ಇನ್ನೊಂದು ಉಗ್ರ ಕೃತ್ಯವಾಗಿರುತ್ತಿತ್ತು ಎಂದೇ ಹೇಳಲಾಗಿದೆ.

ಇಷ್ಟಾದರೂ, ಆ ಕೋ-ಪೈಲಟ್‌ ಹೆಸರನ್ನು ಯಾಕೆ ಬಹಿರಂಗಪಡಿಸಿಲ್ಲ ಎನ್ನುವುದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈತ ಯಾರು, ಈತನ ಹೆಸರು ಏನು? ಈತನ ಉದ್ದೇಶ ಏನಾಗಿತ್ತು? ವಿಮಾನದಲ್ಲಿದ್ದ ಹೆಚ್ಚು ಇಸ್ರೇಲಿಗರನ್ನು ಸಾಯಿಸುವ ಉದ್ದೇಶವನ್ನು ಈತ ಯಾಕೆ ಹೊಂದಿದ್ದ ಎನ್ನುವುದು ಇದಾಗಲೇ ಬಹುತೇಕ ತಿಳಿದಿದ್ದರೂ, ಆ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

ಸದ್ಯಕ್ಕೆ ಬಂದಿರುವ ಮಾಹಿತಿ ಏನು?

ಅಷ್ಟಕ್ಕೂ, ಸದ್ಯ ಬಂದಿರುವ ಮಾಹಿತಿಯ ಪ್ರಕಾರ, ಇಸ್ರೇಲ್‌ನೊಂದಿಗೆ ಯಾವುದೇ ರಾಜತಾಂತ್ರಿಕ ಸಂಬಂಧವನ್ನು ಹೊಂದಿರದ ಓಮನ್ ದೇಶದ ಪೌರತ್ವವನ್ನು ಸಹ-ಪೈಲಟ್ ಹೊಂದಿದ್ದ ಎನ್ನುವುದಷ್ಟೇ ಬಹಿರಂಗಗೊಂಡಿದೆ. ಇದೀಗ ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಇಸ್ರೇಲ್ ಮಾರ್ಗಗಳಲ್ಲಿನ ವಿಮಾನಯಾನ ಸಂಸ್ಥೆಯ ನೇಮಕಾತಿ ಪ್ರಕ್ರಿಯೆಗಳನ್ನು ಪರಿಶೀಲಿಸುವುದು ಹಾಗೂ ಕಡ್ಡಾಯ ಭದ್ರತಾ ನಿಯಮಾವಳಿಗಳ ಒಟ್ಟಾರೆ ಪಾಲನೆಯನ್ನು ಮೌಲ್ಯಮಾಪನ ಮಾಡುವುದು ಈಗ ನಾಗರಿಕ ವಿಮಾನಯಾನ ಪ್ರಾಧಿಕಾರದ ಜವಾಬ್ದಾರಿಯಾಗಿದೆ.

ತನಿಖೆಗೆ ಆದೇಶ

ಅದೇ ಇನ್ನೊಂದೆಡೆ ಈತ, ವಿಮಾನ FZ 1073 ಅನ್ನು ಸೌದಿ ಅರೇಬಿಯಾದ ತಬೂಕ್‌ನಲ್ಲಿ ಸುರಕ್ಷಿತವಾಗಿ ಇಳಿಸುವ ಮೊದಲು ಅದನ್ನು ಬೇರೆಡೆಗೆ ತಿರುಗಿಸಿ ಸೌದಿ ಅರೇಬಿಯಾದಲ್ಲಿ ಸುರಕ್ಷಿತವಾಗಿ ಇಳಿಸಿದ ಘಟನೆಯ ಕುರಿತು ತನಿಖೆಗೆ ಯುಎಇ ಅಟಾರ್ನಿ ಜನರಲ್ ಆದೇಶಿಸಿದ್ದಾರೆ. ತನಿಖಾ ತಂಡವು ಘಟನೆಯ ಸುತ್ತಲಿನ ಸಂಗತಿಗಳು ಮತ್ತು ಸಂದರ್ಭಗಳನ್ನು ಸ್ಥಾಪಿಸಲು ಕೆಲಸ ಮಾಡುತ್ತದೆ, ಇದರಲ್ಲಿ ಯಾವುದೇ ಭಯೋತ್ಪಾದಕ ಚಟುವಟಿಕೆಗೆ ಸಂಬಂಧಿಸಿದೆಯೇ ಅಥವಾ ಪೂರ್ವ ಯೋಜನೆಯಲ್ಲಿ ಒಳಗೊಂಡಿತ್ತೇ ಎಂಬುದು ಸೇರಿದೆ. ಪ್ರಯಾಣದ ಸಮಯದಲ್ಲಿ ವಿಮಾನದ ಡೆಕ್‌ನಲ್ಲಿ ವಾಗ್ವಾದ ಸಂಭವಿಸಿದೆ, ಇದರಿಂದಾಗಿ ಸಿಬ್ಬಂದಿ ಮಧ್ಯಪ್ರವೇಶಿಸಿ ವಿಮಾನವನ್ನು ಸುರಕ್ಷಿತವಾಗಿರಿಸಬೇಕಾಯಿತು ಎಂಬ ಫ್ಲೈದುಬೈ ಹೇಳಿಕೆಯನ್ನು ಅನುಸರಿಸಿ ತನಿಖೆ ನಡೆಸಲಾಗುತ್ತಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗ್ರೀನ್ ಎನರ್ಜಿ ಕಾರಿಡಾರ್ 3ನೇ ಹಂತಕ್ಕೆ ಕೇಂದ್ರ ಸಂಪುಟ ಅಸ್ತು: ₹1.86 ಲಕ್ಷ ಕೋಟಿ ವೆಚ್ಚದ ಬೃಹತ್ ಯೋಜನೆ!
ಉದ್ಯೋಗ ಸೃಷ್ಟಿ ಹಾಗೂ ಕೌಶಲ್ಯಾಭಿವೃದ್ಧಿಗೆ ಒತ್ತು, ಸಂಸದರು ಹಾಗೂ ಶಾಸಕರಿಗಾಗಿ ಕಾರ್ಯಾಗಾರ