
ಎಲ್ಲವೂ 4018 ನಂಬರ್ ಪ್ಲೇಟ್ ಹೊಂದಿರುವ ರೋಲ್ಸ್ ರಾಯ್ಸ್, ಪೋರ್ಶೆ, ಲ್ಯಾಂಬೋರ್ಗಿನಿ.. ಶುಕ್ರವಾರ ಆದಾಯ ತೆರಿಗೆ ಇಲಾಖೆ ಕೆಕೆ ಶಿವಂ ಮಿಶ್ರಾ ಮನೆಗೆ ದಾಳಿ ಮಾಡಿದಾಗ ಮೊದಲು ವಶಪಡಿಸಿಕೊಂಡ ಕಾರುಗಳಿವು. ರದಿಗಳ ಪ್ರಕಾರ, ವಶಪಡಿಸಿಕೊಂಡ ಎಲ್ಲಾ ವಾಹನಗಳ ಒಟ್ಟು ಮೌಲ್ಯ 60 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇನ್ನು ಮನೆಯಲ್ಲಿಟ್ಟ ಕೋಟಿ ಕೋಟಿ ಹಣವನ್ನೂ ಐಟಿ ಇಲಾಖೆ ವಶಪಡಿಸಿಕೊಂಡಿದೆ. ಇಷ್ಟಕ್ಕೂ ಯಾರು ಈ ಕೆಕೆ ಮಿಶ್ರಾ?
ಕೆಕೆ ಮಿಶ್ರಾ ಯಾರು?
ಇಲ್ಲಿ ಈ ಫೋಟೋದಲ್ಲಿ 'ಕಹೋ ನಾ ಪ್ಯಾರ್ ಹೈ' ಚಿತ್ರದ ಹೃತಿಕ್‌ನಂತೆ ಪೋಸ್ ಕೊಡುತ್ತಿರುವ ಮುನ್ನಾ ಮಿಶ್ರಾ ಎಂದೂ ಕರೆಯಲ್ಪಡುವ ಕೆಕೆಮಿಶ್ರಾ ಅವರು ಕಾನ್ಪುರ ಮೂಲದ ಪ್ರಮುಖ ತಂಬಾಕು ಪೂರೈಕೆದಾರರಾದ ಬನ್ಶಿಧರ್ ತಂಬಾಕು ಕಂಪನಿಯ ಮಾಲೀಕ. ಭಾರತೀಯ ತಂಬಾಕು ಉದ್ಯಮದಲ್ಲಿ ದೊಡ್ಡ ಹೆಸರು. ಬನ್ಶಿಧರ್ ಅವರು ವಿವಿಧ ಪಾನ್ ಮಸಾಲಾ ಬ್ರಾಂಡ್‌ಗಳಿಗೆ ತಂಬಾಕು ಸರಬರಾಜು ಮಾಡುತ್ತಿದ್ದಾರೆ.
ಆದಾಯ ತೆರಿಗೆ ಇಲಾಖೆಯು ಬನ್ಶಿಧರ್ ತಂಬಾಕು ಕಂಪನಿಯ ಶುಕ್ರವಾರ ಮತ್ತು ಶನಿವಾರ ಸರಣಿ ದಾಳಿಗಳನ್ನು ನಡೆಸಿತು ಮತ್ತು ದಾಖಲೆಗಳಲ್ಲಿ ಹಣಕಾಸಿನ ದುರ್ಬಳಕೆಯ ಸಾಧ್ಯತೆಯನ್ನು ಪತ್ತೆ ಹಚ್ಚಿದೆ. ಈ ದಾಳಿಗಳು ಐದು ರಾಜ್ಯಗಳಲ್ಲಿ ಹದಿನೈದರಿಂದ ಇಪ್ಪತ್ತು ತಂಡಗಳು ಮತ್ತು ದೆಹಲಿ, ಕಾನ್ಪುರ, ಮುಂಬೈ ಮತ್ತು ಗುಜರಾತ್‌ನ ನಗರಗಳನ್ನು ಒಳಗೊಂಡ ಇಪ್ಪತ್ತು ಸ್ಥಳಗಳಲ್ಲಿ ನಡೆಸಿದ ಕಾರ್ಯಾಚರಣೆಯ ಭಾಗವಾಗಿದೆ. ವರದಿಗಳ ಪ್ರಕಾರ, ತನಿಖೆಯು ಚಿನ್ನ ಮತ್ತು ನಗದು ರೂಪದಲ್ಲಿ ಗುಪ್ತ ಆಸ್ತಿಗಳ ಬಗ್ಗೆ ಸುಳಿವು ನೀಡಿದೆ. ಆದಾಯ ತೆರಿಗೆ ಇಲಾಖೆ ಮೂಲಗಳ ಪ್ರಕಾರ, ಇಂದು ಬನ್ಶಿಧರ್ ತಂಬಾಕು ಗ್ರೂಪ್ ವಿರುದ್ಧ ಪ್ರಮುಖ ಕ್ರಮದ ಮೂರನೇ ದಿನವಾಗಿದೆ.
ಫೈಟರ್ ಚಿತ್ರ ಒಟಿಟಿ ಬಿಡುಗಡೆ ದಿನಾಂಕ; ಶಾಕಿಂಗ್ ಮೊತ್ತಕ್ಕೆ ಚಿತ್ರ ಖರೀದಿ ಮಾಡಿದ್ದು ಯಾವ ವೇದಿಕೆ?
ದಾಳಿಯ ವೇಳೆ ಐಟಿ ಇಲಾಖೆಯು ದೆಹಲಿಯ ವಸಂತ ವಿಹಾರ್‌ನಲ್ಲಿರುವ ಶಿವಂ ಮಿಶ್ರಾ ಅವರ ಮನೆಯಲ್ಲಿ ಸುಮಾರು 16 ಕೋಟಿ ರೂಪಾಯಿ ಮೌಲ್ಯದ ರೋಲ್ ರಾಯ್ಸ್ ಫ್ಯಾಂಟಮ್ ಅನ್ನು ಪತ್ತೆ ಮಾಡಿದೆ. ಏತನ್ಮಧ್ಯೆ, ಪೋರ್ಷೆ ಕಯೆನ್ನೆ, ಲಂಬೋರ್ಘಿನಿ ಉರಸ್ ಮತ್ತು ಮೆಕ್ಲಾರೆನ್ 720 ಗಳಂತಹ ಇತರ ವಾಹನಗಳು ಇದ್ದವು. ಇಷ್ಟೇ ಅಲ್ಲದೆ, 2.5 ಕೋಟಿ ಮೌಲ್ಯದ ವಜ್ರದ ವಾಚ್‌ಗಳು ಸೇರಿದಂತೆ ಐದು ದುಬಾರಿ ವಾಚ್‌ಗಳನ್ನು ಇಲಾಖೆ ವಶಪಡಿಸಿಕೊಂಡಿದೆ.
ಬನ್ಶಿಧರ್ ಟೊಬ್ಯಾಕೋ ಪ್ರೈವೆಟ್ ಲಿಮಿಟೆಡ್
#BanshidharTobacco Private Limited ತಂಬಾಕು ಉದ್ಯಮದಲ್ಲಿನ ದೊಡ್ಡ ಹೆಸರುಗಳಲ್ಲಿ ಒಂದಾಗಿದೆ ಮತ್ತು ಪ್ರಮುಖ ಪಾನ್ ಮಸಾಲಾ ಗುಂಪುಗಳಿಗೆ ಉತ್ಪನ್ನಗಳ ಪೂರೈಕೆದಾರ. ವಿವಿಧ ವರದಿಗಳ ಆಧಾರದ ಮೇಲೆ, ಕಂಪನಿಯು 20 ರಿಂದ 25 ಕೋಟಿ ರೂಪಾಯಿಗಳ ಆದಾಯವನ್ನು ವರದಿ ಮಾಡಿದೆ. ಆದರೆ ವಾಸ್ತವಿಕ ವಹಿವಾಟು ವರದಿಯಾದ ಮೊತ್ತಕ್ಕಿಂತ ಅನೇಕ ಪಟ್ಟು ಹೆಚ್ಚಾಗಿದೆ. ಬನ್ಶಿಧರ್ ತಂಬಾಕು ಪ್ರೈವೇಟ್ ಲಿಮಿಟೆಡ್ ಕಳೆದ 32 ವರ್ಷಗಳಿಂದ ಉತ್ಪಾದನಾ ವ್ಯವಹಾರಗಳಲ್ಲಿ ಸಕ್ರಿಯವಾಗಿದೆ.
ಅನಂತ್ ಅಂಬಾನಿ ಬರೋಬ್ಬರಿ 108 ಕೆಜಿ ಇಳಿಸಲು ನೆರವಾದ ಫಿಟ್ನೆಸ್ ಕೋಚ್ ಪಡೆದ ಫೀಸ್ ಎಷ್ಟು?
ಆರ್ಯನಗರದಲ್ಲಿ ನೆಲೆಸಿರುವ ಕಂಪನಿಯ ಮಾಲೀಕ, ಕಾನ್ಪುರದಿಂದ ದೆಹಲಿಗೆ ತನ್ನ ವ್ಯಾಪಾರ ಕಾರ್ಯಾಚರಣೆಯನ್ನು ಸ್ಥಳಾಂತರಿಸಿದ್ದಾರೆ ಮತ್ತು ಈಗ ಅಲ್ಲಿ ವಾಸಿಸುತ್ತಿದ್ದಾರೆ. ಉದ್ಯಮದ ಕಾರ್ಖಾನೆಯು ಅಹಮದಾಬಾದ್‌ನಲ್ಲಿದೆ. ಕಳೆದ ಕೆಲವು ತಿಂಗಳುಗಳಿಂದ ಆದಾಯ ತೆರಿಗೆ ಇಲಾಖೆಯು ಕಂಪನಿಯ ಹಣಕಾಸು ಖಾತೆಗಳು ಮತ್ತು ತೆರಿಗೆ ರಿಟರ್ನ್ಸ್ ಮೇಲೆ ತೀವ್ರ ನಿಗಾ ಇರಿಸಿದೆ.
ಆದಾಯ ತೆರಿಗೆ ಇಲಾಖೆ ತಂಡ ಕಂಪನಿ ಮಾಲೀಕ ಕೆಕೆ ಮಿಶ್ರಾ ಅವರನ್ನು ನಿವಾಸದಲ್ಲಿ ವಿಚಾರಣೆ ನಡೆಸುತ್ತಿದೆ. ಮೂಲಗಳ ಪ್ರಕಾರ ಕೆ.ಕೆ.ಮಿಶ್ರಾ ಅವರು ತಮ್ಮ ಆರೋಗ್ಯದ ಹೀನಸ್ಥಿತಿಯನ್ನು ಉಲ್ಲೇಖಿಸಿ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ