
ನವದೆಹಲಿ (ಫೆ.14): ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಮೊಮ್ಮಗಳಾದ ಅನನ್ಯಾ ಪ್ರಸಾದ್, ಅಟ್ಲಾಂಟಿಕ್ ಸಾಗರವನ್ನು ಏಕಾಂಗಿಯಾಗಿ ರೋಯಿಂಗ್ ಮೂಲಕ ಕ್ರಮಿಸಿ ಮೂಲಕ ಹೊಸ ಇತಿಹಾಸ ರಚಿಸಿದ್ದಾರೆ.
ವಿಶ್ವದ ಅತ್ಯಂತ ಕಠಿಣ ರೋಯಿಂಗ್ ರೇಸ್‌ನ ಸೋಲೋ ವಿಭಾಗದಲ್ಲಿ ಭಾಗಿಯಾಗಿದ್ದ ಅನನ್ಯಾ, ಕಳೆದ ಡಿ.12ರಂದು ಸ್ಪೇನ್ ಸಮೀಪದ ಲಾ ಗೊಮೆರಾ ಎಂಬ ದ್ವೀಪದಿಂದ ಈ ಮಹಾಯಾನ ಆರಂಭಿಸಿ, ಫೆ.1ರಂದು ಯಾನ ಪೂರ್ಣಗೊಳಿಸಿದ್ದಾರೆ. 52 ದಿನ 5 ಗಂಟೆ, 44 ನಿಮಿಷದಲ್ಲಿ ಅವರು 4800 ಕಿ.ಮೀಗಳ ದೂರವನ್ನು ಕ್ರಮಿಸಿದ್ದಾರೆ. ಈ ಮೂಲಕ ಇಂಥ ಸಾಧನೆ ಮಾಡಿದ ಮೊದಲ ಶ್ವೇತವರ್ಣೀಯೇತರ ಮಹಿಳೆ ಮತ್ತು ಮೊದಲ ಭಾರತೀಯ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ಜಿಎಸ್‌ಎಸ್ ಮೊಮ್ಮಗಳು ಅನನ್ಯಾ ಪ್ರಸಾದ್‌ರಿಂದ ಮಹಾ ಸಮುದ್ರಯಾನ
ಜಿಎಸ್ಎಸ್ ಶಿವರುದ್ರಪ್ಪನವರರ ಪುತ್ರ ಶಿವಪ್ರಸಾದರ್ ಪುತ್ರಿಯಾಗಿರುವ ಅನನ್ಯಾ, ಈ ಯಾನಕ್ಕಾಗಿಯೇ ಕಠಿಣ ಶ್ರಮ ವಹಿಸಿದ್ದರು. ಅದಕ್ಕಾಗಿಯೇ 25 ಅಡಿ ಅಳತೆಯ ಬೋಟ್ ತಯಾರಿಸಿದ್ದರು. ಅಲ್ಲದೇ ಬೋಟ್ ರಿಪೇರಿಯನ್ನು ಸಹ ಕಲಿತಿದ್ದರು. ಅದಕ್ಕಾಗಿಯೇ ಅವರು ನಿತ್ಯ ಸುಮಾರು 50 ಮೈಲಿಗಳಷ್ಟು ರೋಯಿಂಗ್ ಮಾಡಿದ್ದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ