
ಬೆಂಗಳೂರು (ಮೇ 21): ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಲಭಿಸಿದ್ದು, 1950ರಿಂದ ಚುನಾವಣೆ ನಡೆದು ಸಂವಿಧಾನಬದ್ಧವಾಗಿ ಭಾರತದ ದೇಶದ ಪ್ರಧಾನಮಂತ್ರು ಹುದ್ದೆಯ ಅನುಸಾರ ಆಡಳಿತ ಮಾಡಲಾಗುತ್ತಿದೆ. ಈವರೆಗೆ 15 ಜನರು ಪ್ರಧಾನಮಂತ್ರಿಗಳು ಭಾರತದ ಪ್ರಧಾನಮಂತ್ರಿಗಳಾಗಿದ್ದಾರೆ. ಆದರೆ, 30 ರಾಜ್ಯಗಳಲ್ಲಿ ಕೇವಲ 6 ರಾಜ್ಯಗಳಿಂದ ಮಾತ್ರ ಪ್ರಧಾನಮಂತ್ರಿಗಳು ಆಯ್ಕೆ ಆಗಿದ್ದಾರೆ. ಹಾಗಾದರೆ ಯಾವ ರಾಜ್ಯಗಳು ಅತಿಹೆಚ್ಚು ಪ್ರಧಾನಮಂತ್ರಿಗಳನ್ನು ನೀಡಿವೆ ಎಂಬುದು ಗೊತ್ತಾ? ಇಲ್ಲಿದೆ ನೋಡಿ ವಿವರ..
ನಮ್ಮ ದೇಶದಲ್ಲಿ ಸಂವಿಧಾನ ಜಾರಿಗೆ ಬಂದ ನಂತರ ಒಟ್ಟು 18ನೇ ಬಾರಿಗೆ ಲೋಕಸಭಾ ಚುನಾವಣೆ ನಡೆದಿದೆ. ಈವರೆಗೆ ಕೆಲವರು ಒಂದು, ಎರಡು, ಮೂರು ಅಥವಾ ನಾಲ್ಕು ಬಾರಿ ಪ್ರಧಾನಮಂತ್ರಿಯಾಗಿ ಅಧಿಕಾರ ಮಾಡಿದ್ದಾರೆ. 18 ಲೋಕಸಭಾ ಚುನಾವಣೆಯಿಂದ ಒಟ್ಟು 15 ಮಂದಿ ಪ್ರಧಾನಮಂತ್ರಿಗಳಾಗಿ ಅಧಿಕಾರ ನಡೆಸಿದ್ದಾರೆ. ಅದರಲ್ಲಿ ದಕ್ಷಿಣ ಭಾರತದಿಂದ ಪ್ರಧಾನಮಂತ್ರಿ ಅಧಿಕಾರ ನಡೆಸಿದವರು ಅತಿವಿರಳವಾಗಿದ್ದಾರೆ. ದಕ್ಷಿಣ ಭಾರತದಿಂದ ಕೇವಲ ಇಬ್ಬರು ಮಾತ್ರ ಪ್ರಧಾನಮಂತ್ರಿಗಳು ಆಗಿದ್ದಾರೆ. ಹಾಗಾದರೆ, ಅತಿಹೆಚ್ಚು ಪ್ರಧಾನಮಂತ್ರಿಗಳನ್ನು ರಾಜ್ಯಗಳು ಯಾವುದು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ರಾಜ್ಯವಾರು ಪ್ರಧಾನಮಂತ್ರಿಗಳ ಸಂಖ್ಯೆ
ಉತ್ತರ ಪ್ರದೇಶ -7
ಪಂಜಾಬ್ - 3
ಗುಜರಾತ್ -2
ಕರ್ನಾಟಕ -1
ಮಧ್ಯ ಪ್ರದೇಶ -1
ತೆಲಂಗಾಣ -1
ಪ್ರಧಾನಮಂತ್ರಿಗಳ ಅಧಿಕಾರ ನಡೆಸಿದ ಅವಧಿ ವಿವರ:
ಜವಾಹರಲಾಲ್ ನೆಹರು 16 ವರ್ಷ 286 ದಿನಗಳು
ಇಂದಿರಾ ಗಾಂಧಿ 15 ವರ್ಷ 350 ದಿನಗಳು
ನರೇಂದ್ರ ಮೋದಿ ಬಿಜೆಪಿ 10 ವರ್ಷ 360 ದಿನಗಳು*
ಮನಮೋಹನ್ ಸಿಂಗ್ 10 ವರ್ಷ 4 ದಿನಗಳು
ಅಟಲ್ ಬಿಹಾರಿ ವಾಜಪೇಯಿ 6 ವರ್ಷ 80 ದಿನಗಳು
ರಾಜೀವ್ ಗಾಂಧಿ 5 ವರ್ಷ 32 ದಿನಗಳು
ಪಿ.ವಿ. ನರಸಿಂಹ ರಾವ್ 4 ವರ್ಷ 330 ದಿನಗಳು
ಮೊರಾರ್ಜಿ ದೇಸಾಯಿ 2 ವರ್ಷ 126 ದಿನಗಳು
ಲಾಲ್ ಬಹದ್ದೂರ್ ಶಾಸ್ತ್ರಿ 1 ವರ್ಷ 216 ದಿನಗಳು
ವಿಶ್ವನಾಥ್ ಪ್ರತಾಪ್ ಸಿಂಗ್ 343 ದಿನಗಳು
ಇಂದರ್ ಕುಮಾರ್ ಗುಜ್ರಾಲ್ 332 ದಿನಗಳು
ಎಚ್.ಡಿ. ದೇವೇಗೌಡ 324 ದಿನಗಳು
ಚಂದ್ರಶೇಖರ್ 223 ದಿನಗಳು
ಚರಣ್ ಸಿಂಗ್ 170 ದಿನಗಳು
ಗುಲ್ಜಾರಿಲಾಲ್ ನಂದಾ 26 ದಿನಗಳು
ಪ್ರಧಾನಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ರಾಜಕೀಯ ಪಕ್ಷ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC): 54 ವರ್ಷ 123 ದಿನಗಳು
ಭಾರತೀಯ ಜನತಾ ಪಕ್ಷ (BJP): 17 ವರ್ಷ 4 ದಿನಗಳು*
ಜನತಾ ದಳ (JD): 2 ವರ್ಷ 269 ದಿನಗಳು
ಜನತಾ ಪಕ್ಷ (JP): 2 ವರ್ಷ 126 ದಿನಗಳು
ಸಮಾಜವಾದಿ ಜನತಾ ಪಕ್ಷ (ರಾಷ್ಟ್ರೀಯ): 223 ದಿನಗಳು
ಜನತಾ ಪಕ್ಷ (ಜಾತ್ಯತೀತ): 170 ದಿನಗಳು
ಕರ್ನಾಟಕ ಏಕೈಕ ಪ್ರಧಾನಿ ಹೆಚ್.ಡಿ. ದೇವೇಗೌಡ:
ಕರ್ನಾಟಕದಲ್ಲಿ ಜನಿಸಿ ಭಾರತವನ್ನಾಳಿದ ಏಕೈಕ ಪ್ರಧಾನಮಂತ್ರಿ ಎಂದರೆ ಅದು ನಮ್ಮ ಹೆಚ್.ಡಿ. ದೇವೇಗೌಡ ಅವರು. ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿ ಮೇಲ್ಮನೆಗೆ ಹೋಗಿದ್ದ ಅವರು ಜನತಾದಳದಿಂದ ಸಮ್ಮಿಶ್ರ ಸರ್ಕಾರದಲ್ಲಿ ಪ್ರಧಾನಮಂತ್ರಿಯಾಗಿ ಕಾರ್ಯ ನಿರ್ವಹಿಸಿದರು. 1996ರ ಜೂ.1ರಿಂದ 1997ರ ಏ.21ರವರೆಗೆ ಒಟ್ಟು 324 ದಿನಗಳ ಕಾಲ ಪ್ರಧಾನಿಯಾಗಿ ಕಾರ್ಯಾಭಾರವನ್ನು ನಡೆಸಿದ್ದಾರೆ. ಜೊತೆಗೆ ದೇವೇಗೌಡರು ಗೃಹ ಸಚಿವರಾಗಿ, ಕೃಷಿ ಸಚಿವರಾಗಿ, ಜವಳಿ ಸಚಿವರಾಗಿ ಹಾಗೂ ನಗರಾಭಿವೃದ್ಧಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಈಗಲೂ ಕರ್ನಾಟಕದ ಪ್ರತಿನಿಧಿಯಾಗಿ ರಾಜ್ಯಸಭೆಯ ಸದಸ್ಯರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ