ಹೊಸ ಎಲ್‌ಪಿಜಿ ಸಂಪರ್ಕ ಯಾವಾಗ ಸಿಗುತ್ತೆ? ಕೇಂದ್ರ ಸರ್ಕಾರ ಏಕೆ ನಿಷೇಧ ಮಾಡಿದೆ?

Published : Aug 30, 2026, 01:48 PM IST
LPG e KYC

ಸಾರಾಂಶ

ಭಾರತದಾದ್ಯಂತ 14.2 ಕೆಜಿ ತೂಕದ ಹೊಸ ಎಲ್‌ಪಿಜಿ ಸಂಪರ್ಕಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಭೌಗೋಳಿಕ ರಾಜಕೀಯ ಅನಿಶ್ಚಿತತೆಯೇ ಇದಕ್ಕೆ ಕಾರಣವಾಗಿದ್ದು, ಪರ್ಯಾಯವಾಗಿ ಗ್ರಾಹಕರಿಗೆ 5 ಮತ್ತು 10 ಕೆಜಿ ಕಾಂಪೋಸಿಟ್ ಸಿಲಿಂಡರ್‌ಗಳನ್ನು ನೀಡಲಾಗುತ್ತಿದೆ.

ಭಾರತಕ್ಕೆ ಎಲ್‌ಪಿಜಿ ಆಮದು ಹೆಚ್ಚಾದರೂ ದೇಶದ ಜನರಿಗೆ ಹೊಸ ಎಲ್‌ಪಿಜಿ ಸಂಪರ್ಕಗಳಿಗಾಗಿ ಕಾಯುತ್ತಿದ್ದಾರೆ. ಇಂಡಿಯನ್, ಭಾರತ್ ಗ್ಯಾಸ್, ಎಚ್‌ಪಿ ಗ್ಯಾಸ್‌ಗಾಗಿ ಅರ್ಜಿ ಸಲ್ಲಿಕೆ ಮಾಡಿದ ಜನರು ಇನ್ನು ಕಾದು ನೋಡುತ್ತಿದ್ದಾರೆ. ದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತ್ತಾ, ಚೆನ್ನೈನಲ್ಲಿ ಗ್ರಾಹಕರಿಗೆ ಯಾವುದೇ ಹೊಸ ಸಿಲಿಂಡರ್ (14.2 ಕೆಜಿ) ಸಂಪರ್ಕವನ್ನು ನೀಡುತ್ತಿಲ್ಲ.

ಎಲ್‌ಪಿಜಿ ಸಂಪರ್ಕ ಸ್ಥಗಿತ: ತೆರೆಮರೆಯ ಸತ್ಯವೇನು?

ಯುದ್ಧದ ಸಂದರ್ಭದಲ್ಲಿ ಎಲ್‌ಪಿಜಿ ವಿತರಣೆ ಬಗ್ಗೆ ಹಲವು ನಿರ್ಬಂಧಗಳನ್ನು ಕೇಂದ್ರ ಸರ್ಕಾರ ವಿಧಿಸಿತ್ತು. ಆದರೆ ಯುದ್ಧ ತೀವ್ರತೆ ಕಡಿಮೆಯಾದ ಬಳಿಕ ಸರ್ಕಾರ ನಿರ್ಬಂಧಗಳನ್ನು ಸಡಿಲಗೊಳಿಸಿದರೂ ಯಾವುದೇ ಹೊಸ ಸಂಪರ್ಕಗಳನ್ನು ನೀಡುತ್ತಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಕೇಂದ್ರ ಇಂಧನ ಸಚಿವಾಲಯ, ಭೌಗೋಳಿಕ ರಾಜಕೀಯ ಪರಿಸ್ಥಿತಿಯಿಂದಾಗಿ, ಹೊಸ ಎಲ್‌ಪಿಜಿ ಸಂಪರ್ಕಗಳ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆದರೆ ಈಗಾಗಲೇ ಸಿಲಿಂಡರ್ ಪಡೆದಿರುವ ಗ್ರಾಹಕರಿಗೆ ಸಿಲಿಂಡರ್ ಪೂರೈಕೆ ಮಾಡುವುದರಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಹೇಳಿತ್ತು.

ಈ ಬಗ್ಗೆ ಮಾತನಾಡಿರುವ ಭಾರತೀಯ ಎಲ್‌ಪಿಜಿ ವಿತರಕರ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಪವನ್ ಸೋನಿ, ದೀರ್ಘಾವಧಿಯಲ್ಲಿ ಇದು ಹಾಗೆಯೇ ಇರುತ್ತದೆ ಎಂದು ಹೇಳುವುದು ಕಷ್ಟ. ಪಶ್ಚಿಮ ಏಷ್ಯಾದ ಪರಿಸ್ಥಿತಿ ಅನಿಶ್ಚಿತವಾಗಿರುವುದರಿಂದ ತೈಲ ಮಾರುಕಟ್ಟೆ ಕಂಪನಿಗಳು ಎಷ್ಟು ಎಲ್‌ಪಿಜಿ ತರಬಲ್ಲವು ಎಂದು ಯಾರಿಗೂ ತಿಳಿದಿಲ್ಲ. ಆದ್ದರಿಂ ಬೇಡಿಕೆ ಪೂರೈಸಲು ಬೇಕಾದ ಶೇಖರಣಾ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಕೆಜಿ ಮತ್ತು 10 ಕೆಜಿಯ ಕಾಂಪೋಸಿಟ್ ಸಿಲಿಂಡರ್‌ ಪೂರೈಕೆ

ಸದ್ಯ 14ಕೆಜಿಯ ಹೊಸ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡುವುದು ರದ್ದು ಮಾಡಿದ್ದರು, 5ಕೆಜಿ ಮತ್ತು 10 ಕೆಜಿಯ ಕಾಂಪೋಸಿಟ್ ಸಿಲಿಂಡರ್‌ಗಳನ್ನು ನೀಡಲಾಗುತ್ತಿದೆ. ಸದ್ಯ ಇದಕ್ಕೆ ಬೇಡಿಕೆ ಹೆಚ್ಚಾಗಿದೆ. ಹೊಸ ಸಂಪರ್ಕಕ್ಕಾಗಿ ಬರುವ ಗ್ರಾಹಕರಿಗೆ 5ಕೆಜಿ ಮತ್ತು 10 ಕೆಜಿ ಸಿಲಿಂಡರ್ ಗಳನ್ನು ನೀಡಲು ಏಜೆನ್ಸಿಗಳು ಮುಂದಾಗಿದೆ.

ಸದ್ಯ ಎಲ್‌ಪಿಜಿ ಗ್ರಾಹಕರು ತಮ್ಮ ಕೆವೈಸಿ ವಿವರಗಳನ್ನು ನವೀಕರಿಸುವಂತೆ ಹೇಳಿದೆ. ನಕಲಿ ಮತ್ತು ನಿಷ್ಕ್ರಿಯ ಸಂಪರ್ಕಗಳನ್ನು ಗುರುತಿಸುವುದು ಇದರ ಉದ್ದೇಶವಾಗಿದೆ. ಆದರೆ ಹೊಸ ದೇಶೀಯ ಎಲ್‌ಪಿಜಿ ಸಂಪರ್ಕಗಳನ್ನು ಪುನರಾರಂಭಿಸಲು ಪ್ರಸ್ತುತ ಯಾವುದೇ ದೃಢೀಕತ ದಿನಾಂಕವನ್ನು ನೀಡಿಲ್ಲ. ಪೆಟ್ರೋಲಿಯಂ ಸಚಿವಾಲಯ ಈ ನಿರ್ಬಂಧವನ್ನು ತಾತ್ಕಾಲಿಕ ಎಂದು ಹೇಳಿದೆ. ಎಲ್‌ಪಿಜಿ ಲಭ್ಯತೆ ಮತ್ತು ಪೂರೈಕೆ ಪರಿಸ್ಥಿತಿಗಳು ಹೆಚ್ಚು ಸ್ಥಿರವಾದ ನಂತರ ಹೊಸ ಸಂಪರ್ಕಗಳು ಪುನರಾರಂಭಗೊಳ್ಳುವ ನಿರೀಕ್ಷೆ ಇದೆ ನ್ಯೂಸ್18 ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಫ್ಲುಯೆನ್ಸರ್ ಮಂಜೀತ್ ಕೌರ್ ಸಾವು: ಮರಣೋತ್ತರ ಪರೀಕ್ಷೆಯಲ್ಲಿ 7 ವಾರಗಳ ಗರ್ಭಿಣಿ ಎಂಬ ವಿಚಾರ ಬಯಲು
ಎವರೆಸ್ಟ್‌ ಎಗ್ ಕರಿ, ಚಿಕನ್, ಗರಂ ಮಸಾಲಾ & ಲಾಲ್ಜೀ ಇಂಗು ಮಾರಾಟದ ಮೇಲೆ ನಿರ್ಬಂಧ