ಮುತ್ತು ಮತ್ತು ಮೂತ್ರವನ್ನು ಹೋಲಿಸಿದ ಸಂಸದ ಶಶಿ ತರೂರ್‌, ನೆಟಿಜೆನ್ಸ್‌ ಏನಂದ್ರು?

By Bhavani Bhat  |  First Published Jan 13, 2025, 9:10 PM IST

ಸಂಸದ ಶಶಿ ತರೂರ್‌ ಅವರು ಭಾರತದಲ್ಲಿ ಬೀದಿಯಲ್ಲಿ ಮೂತ್ರ ಮಾಡುವುದು ಮತ್ತು ಮುತ್ತು ಕೊಡುವ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್‌ಗೆ ಒಳಗಾಗಿದೆ ಇಷ್ಟಕ್ಕೂ ಶಶಿ ಹೇಳಿದ್ದೇನು, ಜನ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವುದೇಕೆ? 


ಸಂಸದ ಶಶಿ ತರೂರ್‌ ಕ್ಲಿಷ್ಟ ಇಂಗ್ಲಿಷ್‌ ಪದಗಳನ್ನು ಬಳಸುವುದಕ್ಕೆ ಪ್ರಸಿದ್ಧರು. ಹಾಗೆಯೇ ಅವರು ಹೆಚ್ಚು ʼಮಹಿಳಾಪ್ರಿಯರು.ʼ ಕೆಲವೊಮ್ಮೆ ಮಾತಿನಲ್ಲಿ ವಿವಾದಗಳನ್ನೂ ಮಾಡಿಕೊಳ್ಳುತ್ತಾರೆ. ಇದೀಗ ಜಿಯೋಪೊಲಿಟಿಕ್ಸ್‌ಗೆ ನೀಡಿದ ಸಂದರ್ಶನದಲ್ಲಿ ಆಡಿದ ಒಂದು ಮಾತು ನೆಟಿಜೆನ್ಸ್‌ ನಡುವೆ ಟ್ರೋಲ್‌ಗೆ ಕಾರಣವಾಗಿದೆ. 

ಸಂದರ್ಶನದಲ್ಲಿ ಅವರು ಆಡಿದ ಮಾತು ಹೀಗಿದೆ: "ಭಾರತದಲ್ಲಿ ನೀವು ಬೀದಿಯಲ್ಲಿ ಮೂತ್ರ (piss) ಮಾಡಬಹುದು, ಅದರೆ ಮುತ್ತು (kiss) ಕೊಡುವಂತಿಲ್ಲ. ಇದು ನಮ್ಮ ಸಮಾಜದ ನಡುವೆ ಇರುವ ವಿರೋಧಾಭಾಸಗಳಲ್ಲಿ ಒಂದು. ಒಬ್ಬ ಮಹಿಳೆ ಹೇಳಿದ ಹಾಗೆ, ಇಲ್ಲಿ ನೀವು ಅಪರಿಚಿತರ ಜೊತೆ ಮಾತನಾಡುವುದು ಕಷ್ಟ, ಆದರೆ ಅಪರಿಚಿತರನ್ನು ಮದುವೆಯಾಗುತ್ತೀರಿ. ನೀವು ಭಾರತದ ರಸ್ತೆಗಳಲ್ಲಿ ಹೋದರೆ ಅಲ್ಲಿ ಪ್ರತಿಯೊಬ್ಬರೂ ಅವಸರದಲ್ಲಿರುತ್ತಾರೆ, ಆದರೆ ಯಾರೂ ಸರಿಯಾದ ಸಮಯಕ್ಕೆ ಆಗಮಿಸುವುದಿಲ್ಲ.  ನನ್ನ ಒಬ್ಬರು ಅಂಕಲ್‌ ಹೇಳುತ್ತಿದ್ದರು- ಈ ದೇಶದಲ್ಲಿ ನೀವು ಹಿಂದುಳಿದವರಾಗಿಲ್ಲದೆ ಹೋದರೆ ಮುಂದುವರಿಯಲಾರಿರಿ. ಇಂಥ ವಿರೋಧಾಭಾಸಗಳ ನಡುವೆ ನಾವು ಜೀವಿಸುತ್ತಿದ್ದೇವೆ."

Tap to resize

Latest Videos

ಶಶಿ ತರೂರ್‌ ಅವರ ಮಾತನ್ನು ಕೆಲವು ಮಂದಿ ಸ್ವಾಗತಿಸದ್ದಾರೆ. ಭಾರತದ ಜನತೆಯ ಮನಸ್ಥಿತಿಯ ಬಗ್ಗೆ ಸರಿಯಾಗಿಯೇ ಹೇಳಿದ್ದಾರೆ ಎಂದಿದ್ದಾರೆ. ಆದರೆ ತುಂಬಾ ಮಂದಿಗೆ ಈ ಮಾತುಗಳು ಇಷ್ಟವಾಗಿಲ್ಲ. ಹಾಗಾಗಿ ಈ ಮಾತು ಟ್ರೋಲ್‌ ಆಗಿದೆ. "ಇದು ನಮ್ಮ ದೇಶಕ್ಕೆ ಮಾಡಿರುವ ಅವಮಾನ. ದೇಶಕ್ಕೆ ಅವಮಾನ ಮಾಡದಂತೆ ಮಾತಾಡಲು ಈ ಕಾಂಗ್ರೆಸಿಗರಿಗೆ ಬರುವುದೇ ಇಲ್ವೇ?" ಎಂದು ಒಬ್ಬರು ಪ್ರಶ್ನಿಸಿದ್ದಾರೆ. "ಹಿಂದುಳಿದವರಾಗಿಲ್ಲದೆ ಹೋದರೆ ಮುಂದುವರಿಯಲಾರಿರಿ ಎಂಬುದು ಕಾಂಗ್ರೆಸ್‌ನ ಅಜೆಂಡಾ" ಎಂದು ಇನ್ನೊಬ್ಬರು ಕುಟುಕಿದ್ದಾರೆ. 

"ಹಾಗಾದ್ರೆ ಇಸ್ಲಾಮಿಕ್‌ ದೇಶಗಳ ಕತೆಯೇನು? ಅಲ್ಲಿ ಪಬ್ಲಿಕ್‌ನಲ್ಲಿ ಕಿಸ್‌ ಕೊಡುವುದು ಮಹಾಪರಾಧ ಅಲ್ವೇ?" ಎಂದೊಬ್ಬರು ಪ್ರಶ್ನಿಸಿದ್ದಾರೆ. "60 ವರ್ಷಗಳ ಕಾಲ ಕಾಂಗ್ರೆಸ್‌ ಆಡಳಿತದಲ್ಲಿತ್ತು. ಸಾರ್ವಜನಿಕ ಟಾಯ್ಲೆಟ್‌ಗಳನ್ನು ನೀವು ಕಟ್ಟಿಸಲಿಲ್ಲ. ಇನ್ನು ಜನ ಪಬ್ಲಿಕ್‌ನಲ್ಲಿ ಮೂತ್ರ ಮಾಡದೇ ಇನ್ನೇನ್ಮಾಡ್ತಾರೆ?" ಎಂದು ಮತ್ತೊಬ್ಬರು ರೇಗಿದ್ದಾರೆ.  "ಈಗ ಪಬ್ಲಿಕ್‌ನಲ್ಲಿ ಮೂತ್ರ ಮಾಡುವುದು ಅಪರಾಧ. ನೀವು 500 ರೂ. ದಂಡ ಕಟ್ಟಬೇಕಾಗುತ್ತದೆ, ನಿಮಗೆ ಗೊತ್ತಿಲ್ವೇ?" ಎಂದೊಬ್ಬರು ಕೇಳಿದ್ದಾರೆ. 

ಶಶಿ ತರೂರ್‌ಗೂ ಇಂಥ ಫನ್ನಿ ವಿವಾದಗಳಿಗೂ ಬಹಳ ನಂಟಿದೆ. ಕೆಲವೊಮ್ಮೆ ಅವರೇ ಕ್ಲಿಷ್ಟ ಇಂಗ್ಲಿಷ್‌ ಪದವನ್ನು ಹೇಳಿ ತಮ್ಮ ಜ್ಞಾನವನ್ನು ಪ್ರದರ್ಶಿಸುತ್ತಾರೆ. ಆಗ "ಇದೆಲ್ಲಾ ಶೋ ಆಫ್"‌ ಎಂಬ ಟೀಕೆಗೆ ಒಳಗಾಗುತ್ತಾರೆ. ಇತ್ತೀಚೆಗೆ ಒಮ್ಮೆ ಲೋಕಸಭೆಯ ಮಹಿಳಾ ಸಂಸದರ ಜೊತೆಗೆ ಅವರು ನಿಂತು ಫೋಟೋ ತೆಗೆಸಿಕೊಂಡಿದ್ದರು. ನಂತರ ಆ ಫೋಟೋವನ್ನು "ಲೋಕಸಭೆ ಕೆಲಸ ಮಾಡಲು ಆಕರ್ಷಕ ಜಾಗವಲ್ಲ ಎಂದು ಯಾರು ಹೇಳಿದ್ದು?" ಎಂದು ಕ್ಯಾಪ್ಷನ್‌ ನೀಡಿ ಸೋಶಿಯಲ್‌ ಮೀಡಿಯಾದಲ್ಲಿ ಹಾಕಿದ್ದರು. ಇದು ಯರ್ರಾಬಿರ್ರಿ ಟೀಕೆಗೆ ಒಳಗಾಗಿತ್ತು. ಶಶಿ ತರೂರ್‌ ಮಹಿಳಾ ಸಂಸದರನ್ನು ಆಕರ್ಷಣೆಯ ವಸ್ತು ಎಂಬಂತೆ ಬಿಂಬಿಸಿದ್ದಾರೆ ಎಂದು ಟೀಕಿಸಿದರು ಜನ. 

ವಿಶ್ವದ ಶ್ರೀಮಂತ ವ್ಯಕ್ತಿಗಳು ತಮ್ಮ ದೇಶ ತೊರೆಯಲು ಚಿಂತನೆ! ಮಿಲಿಯನೇರ್‌ಗಳ ನಿರ್ಧಾರಕ್ಕೆ ಕಾರಣವೇನು?

ಮಹಿಳೆಯರ ಬಗ್ಗೆ ಶಶಿ ತರೂರ್‌ಗೆ ಸ್ವಲ್ಪ ಹೆಚ್ಚೇ ಪ್ರೀತಿ ಇರುವುದು ನಿಜ. ಯಾವಾಗಲೂ ಅವರ ಸುತ್ತ ಮುತ್ತ ಮಹಿಳೆಯರೇ ತುಂಬಿಕೊಂಡಿರುತ್ತಾರೆ ಎಂಬುದು ಸುಳ್ಳಲ್ಲ. ಜೈಪುರ ಲಿಟರೇಚರ್‌ ಫೆಸ್ಟಿವಲ್‌ಗೆ ಸದಾ ಅತಿಥಿಯಾಗಿರುವ ಶಶಿ, ಅಲ್ಲಿ ದೊಡ್ಡ ಪ್ರಮಾಣದ ಮಹಿಳಾ ಅಭಿಮಾನಿ ಬಳಗವನ್ನು ಆಕರ್ಷಿಸುತ್ತಾರೆ. ಹಿಂದೊಮ್ಮೆ  ಲೋಕಸಭೆಯಲ್ಲಿ ಪಕ್ಕದಲ್ಲಿದ್ದ ಫಾರೂಕ್‌ ಅಬ್ದುಲ್ಲಾ ಭಾಷಣ ಮಾಡುತ್ತಿರುವಾಗ ಪಕ್ಕದಲ್ಲಿದ್ದ ಸುಪ್ರಿಯಾ ಸುಳೆ ಹಿಂದಿನ ಸೀಟಿನಲ್ಲಿದ್ದ ಶಶಿ ತರೂರ್‌ನತ್ತ ತಿರುಗಿ ಆತನೊಂದಿಗೆ ಮಾತನಾಡುತ್ತಿದ್ದುದು, ಆಗ ಶಶಿ ಎದುರಿಗಿದ್ದ ಡೆಸ್ಕ್‌ನ ಮೇಲೆ ಅರೆ ಮಲಗಿ ತದೇಕಚಿತ್ತದಿಂದ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದುದರ ವಿಡಿಯೋ ವೈರಲ್‌ ಆಗಿತ್ತು. 

ಪ್ರೀತಿಸಿ ಮದುವೆಯಾದ 60ರ ಹರೆಯದ ಅಪ್ಪ: ಮಕ್ಕಳಿಂದ ಗಲಾಟೆ
    
ಇನ್ನು ಶಶಿಯ ಪತ್ನಿ ಸುನಂದಾ ಪುಷ್ಕರ್‌ ಸಾವಿನ ಬಗ್ಗೆ ನಿಮಗೆ ಗೊತ್ತೇ ಇದೆ. ಈ ಸಾವಿನ ರಹಸ್ಯ ಬಗೆಹರಿದೇ ಇಲ್ಲ. ಪ್ರಾಥಮಿಕ ಮರಣೋತ್ತರ ಪರೀಕ್ಷೆಯಲ್ಲಿ ಅವರ ಸಾವು ಆತ್ಮಹತ್ಯೆ ಮೂಲಕ ಸಂಭವಿಸಿದೆ ಅಂತ ವರದಿಯಾಗಿತ್ತು. ಆದರೆ ದೇಹದಲ್ಲಿ ಕಂಡ ವಿಷಕಾರಿ ಅಂಶ, ಅವರ ಕೈ ಮೇಲೆ ಇಂಜಕ್ಷನ್ ತೆಗೆದುಕೊಂಡ ಗುರುತುಗಳು, ಅಂಗೈ ಮೇಲೆ ಕಚ್ಚಿದ ಗಾಯ ಇವೆಲ್ಲ ಅವರು ಕೊಲೆಯಾಗಿರಬಹುದಾದ ಸಾಧ್ಯತೆಗೆ ಪುಷ್ಠಿ ನೀಡಿದ್ದವು. ಆಗ ಸುನಂದಾ ಜೊತೆಗಿದ್ದವರು ಶಶಿ ತರೂರ್.‌ ತರೂರ್ ವಿಚಾರಣೆ ನಡೆಯಿತಾದರೂ ಅರೋಪಗಳ್ಯಾವೂ ಸಾಬೀತಾಗಲಿಲ್ಲ. ದೆಹಲಿಯ ಒಂದು ಕೋರ್ಟ್ ಆಗಸ್ಟ್ 17, 2021 ರಂದು ತರೂರ್ ಅವರನ್ನು ಎಲ್ಲ ಆರೋಪಗಳಿಂದ ಮುಕ್ತ ಮಾಡಿತು.


 

click me!