ಓದಿನ ಮೇಲೆ ಗಮನ ಕೊಡಲಿ ಅಂತ ಅಣ್ಣ-ಅಮ್ಮ ಸೇರಿಕೊಂಡು ತಮ್ಮನ ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟ ಮಾಡಿದ್ದರು. ಆದರೆ. ಇದರಿಂದ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೀರತ್ (ಜ.13): ಅಮ್ಮ ಮತ್ತು ಅಣ್ಣ ತಮ್ಮ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಮಾರಿದ್ದಕ್ಕೆ 17 ವರ್ಷದ ಹುಡುಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗೆಳೆಯರ ಜೊತೆ ಸುತ್ತಾಡೋದನ್ನ ತಪ್ಪಿಸೋಕೆ ಅಮ್ಮ ಮತ್ತು ಅಣ್ಣ ಬೈಕ್ ಮಾರಿದ್ದರಂತೆ. ಕುಟುಂಬದ ನಿರ್ಧಾರದಿಂದ ಮನನೊಂದ ಹುಡುಗ ಗುಂಡು ಹಾರಿಸಿಕೊಂಡು ಸತ್ತಿದ್ದಾನೆ. ಉತ್ತರ ಪ್ರದೇಶದ ಮೀರಟ್‌ನಲ್ಲಿ ಈ ಘಟನೆ ನಡೆದಿದೆ.
ಆತ್ಮಹತ್ಯೆಗೆ ಮುಂಚೆ “ಸತ್ತ ಮೇಲೆ ಏನಾಗುತ್ತೆ?” ಅಂತ ಗೂಗಲ್‌ನಲ್ಲಿ ಹುಡುಕಿದ್ದ ಅಂತ ಪೊಲೀಸರು ಹೇಳಿದ್ದಾರೆ. ಜನವರಿ 11ರಂದು ಹುಡುಗನ ಅಣ್ಣ, ಅಮ್ಮನನ್ನ ಮೀರತ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಿಂದ ಕರೆದುಕೊಂಡು ಹೋಗೋಕೆ ಹೋದಾಗ ಈ ಘಟನೆ ನಡೆದಿದೆ. ಒಳಗಡೆಯಿಂದ ಬಾಗಿಲು ಹಾಕಿದ್ದರಿಂದ ಬೇರೆ ದಾರಿಯಿಂದ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ಹುಡುಗ ಬಿದ್ದಿದ್ದ. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆತ ಸಾವು ಕಂಡಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.
ಗರ್ಲ್‌ಫ್ರೆಂಡ್‌ನ ಗಂಡ, ತಂದೆಯನ್ನು ಕೊಲ್ಲಲು ಗ್ಯಾಂಗ್‌ಗೆ ಸುಪಾರಿ ಕೊಟ್ಟಿದ್ದ ವಕೀಲ, ಆದ್ರೆ ಕೊಲೆಯಾದವನೇ ಬೇರೆ!
ಹುಡುಗ ಓದಿನಲ್ಲಿ ಗಮನ ಕೊಡ್ತಿರ್ಲಿಲ್ಲ, ಗೆಳೆಯರ ಜೊತೆ ಬೈಕ್‌ನಲ್ಲಿ ಸುತ್ತಾಡ್ತಿದ್ದ. ಹೀಗಾಗಿ ಮನೆಯವರು ದಿನಾ ಬೈಯುತ್ತಿದ್ದರು. ಓದಿನ ಮೇಲೆ ಗಮನ ಕೊಡಲಿ ಅಂತ ಆತನ ಬೈಕ್‌ಅನ್ನು ಮಾರಾಟ ಮಾಡಿದ್ದರು. ಆದರೆ, ಇದರಿಂದ ಮನನೊಂದು ಹುಡುಗ ಆತ್ಮಹತ್ಯೆ ಮಾಡಿಕೊಂಡ ಅಂತ ಪೊಲೀಸರು ಹೇಳಿದ್ದಾರೆ. ಹುಡುಗನ ಅಮ್ಮ ಮೀರತ್ ಮೆಡಿಕಲ್ ಕಾಲೇಜ್‌ನಲ್ಲಿ ನರ್ಸ್. ಅಣ್ಣ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡ್ಕೊಳ್ತಿದ್ದ. ಹುಡುಗನ ಅಪ್ಪ ಕಳೆದ ವರ್ಷ ತೀರಿಕೊಂಡಿದ್ದಾರೆ. ಕುಟುಂಬದವರು ಸಾವಿನ ಬಗ್ಗೆ ಈವರೆಗೂ ದೂರು ನೀಡಿಲ್ಲ. ಆದರೆ, ಹುಡುಗನಿಗೆ ಗನ್ ಎಲ್ಲಿಂದ ಸಿಕ್ತು ಅಂತ ಪೊಲೀಸರು ತನಿಖೆ ಮಾಡುತ್ತಿದ್ದಾರೆ.
Hassan: ಮೈದುನನ ಜೊತೆ ಸೇರಿ ಗಂಡನನ್ನೇ ಕೊಂದ್ಬಿಟ್ಲು, ಪೆಟ್ರೋಲ್ ತರ್ತೀನಿ ಅಂತಾ ಹೋದವನು ಫೋಟೋ ಆಗ್ಬಿಟ್ಟ!