ಮೋದಿ ಪದೇ ಪದೇ ಹೇಳುವ ‘ಗ್ಲೋಬಲ್‌ ಸೌತ್‌’ ಎಂದರೇನು?

By Kannadaprabha News  |  First Published Sep 10, 2023, 8:28 AM IST

ಪ್ರಧಾನಿ ನರೇಂದ್ರ ಮೋದಿ ಅವರು ಜಿ20 ಶೃಂಗ ಮತ್ತು ಇತ್ತೀಚಿನ ಕೆಲ ಸಮಯದಿಂದ ಪದೇ ಪದೇ ‘ಗ್ಲೋಬಲ್‌ ಸೌತ್‌’ (ಜಾಗತಿಕ ದಕ್ಷಿಣ) ಎಂಬ ಪದ ಬಳಸುತ್ತಿದ್ದಾರೆ ಹಾಗೂ ಭಾರತವು ‘ಗ್ಲೋಬಲ್‌ ಸೌತ್‌’ನ ದನಿ ಆಗಲಿದೆ. ಹೀಗಾಗಿ ಬಡ ಆಫ್ರಿಕಾ ದೇಶಗಳನ್ನು ಜಿ20ಗೆ ಸೇರಿಸಿಕೊಳ್ಳಲಾಗುತ್ತದೆ’ ಎನ್ನುತ್ತಿದ್ದಾರೆ. ಇದು ಹಲವರ ಪಾಲಿಗೆ ಹೊಸ ಪದ ಆಗಿರುವ ಕಾರಣ ಅದರ ಅರ್ಥ ಏನೆಂಬುದನ್ನು ಇಲ್ಲಿ ವಿವರಿಸಲಾಗಿದೆ.


ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜಿ20 ಶೃಂಗ ಮತ್ತು ಇತ್ತೀಚಿನ ಕೆಲ ಸಮಯದಿಂದ ಪದೇ ಪದೇ ‘ಗ್ಲೋಬಲ್‌ ಸೌತ್‌’ (ಜಾಗತಿಕ ದಕ್ಷಿಣ) ಎಂಬ ಪದ ಬಳಸುತ್ತಿದ್ದಾರೆ ಹಾಗೂ ಭಾರತವು ‘ಗ್ಲೋಬಲ್‌ ಸೌತ್‌’ನ ದನಿ ಆಗಲಿದೆ. ಹೀಗಾಗಿ ಬಡ ಆಫ್ರಿಕಾ ದೇಶಗಳನ್ನು ಜಿ20ಗೆ ಸೇರಿಸಿಕೊಳ್ಳಲಾಗುತ್ತದೆ’ ಎನ್ನುತ್ತಿದ್ದಾರೆ. ಇದು ಹಲವರ ಪಾಲಿಗೆ ಹೊಸ ಪದ ಆಗಿರುವ ಕಾರಣ ಅದರ ಅರ್ಥ ಏನೆಂಬುದನ್ನು ಇಲ್ಲಿ ವಿವರಿಸಲಾಗಿದೆ.

ಅಭಿವೃದ್ಧಿ ಹೊಂದಿದ ರಾಷ್ಟ್ರಗಳನ್ನು ‘ಗ್ಲೋಬಲ್‌ ನಾರ್ತ್’ (Global North)) ಎಂದು ಕರೆಯಲಾಗುತ್ತದೆ. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ‘ಗ್ಲೋಬಲ್‌ ಸೌತ್‌’ (ಜಾಗತಿಕ ದಕ್ಷಿಣ) ಎಂದು ಕರೆಯಲಾಗುತ್ತದೆ.  ಹೆಚ್ಚಿನ ಅಭಿವೃದ್ಧಿ ಹೊಂದಿದ ದೇಶಗಳು (ನ್ಯೂಜಿಲೆಂಡ್‌ ಹಾಗೂ ಆಸ್ಪ್ರೇಲಿಯಾ ಹೊರತುಪಡಿಸಿ) ಭೂಮಿಯ ಉತ್ತರ ಗೋಳಾರ್ಧದ ಅಡಿಯಲ್ಲಿ ಬರುತ್ತವೆ. ಇವನ್ನು ಗ್ಲೋಬಲ್‌ ನಾರ್ತ್ ಎನ್ನಲಾಗುತ್ತದೆ. ಇನ್ನು ಭಾರತ (Bharat), ಚೀನಾ ಸೇರಿ ಅಭಿವೃದ್ಧಿಶೀಲ 134 ದೇಶಗಳು ಹೆಚ್ಚಾಗಿ ದಕ್ಷಿಣ ಗೋಳಾರ್ಧದಲ್ಲಿದ್ದು, ಇವನ್ನು ‘ಗ್ಲೋಬಲ್‌ ಸೌತ್‌’ ಎನ್ನಲಾಗುತ್ತದೆ.

Tap to resize

Latest Videos

ಮೊದಲು 2014ರಲ್ಲಿ ಗ್ಲೋಬಲ್‌ ಸೌತ್‌ ಪರಿಕಲ್ಪನೆ ಆರಂಭಿಸಿದ ಚೀನಾ (China) , ಈ ದೇಶಗಳ ನಾಯಕತ್ವ ವಹಿಸಿಕೊಳ್ಳಲು ಯತ್ನಿಸಿತು. ಅಲ್ಲದೆ, ಒನ್‌ ಬೆಲ್ಟ್‌ ಒನ್‌ ರೋಡ್‌ ಯೋಜನೆ ಮೂಲಕ ಬಡ ದೇಶಗಳನ್ನು ಸಾಲದ ಸುಳಿಗೆ ಸಿಲುಕಿಸಲು ಯತ್ನಿಸಿ ಅವುಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಹವಣಿಸಿತು. ಆದರೆ 2019ರಲ್ಲಿ ಕೋವಿಡ್‌ ಆರಂಭವಾದ ನಂತರ ಬದಲಾದ ಪರಿಸ್ಥಿತಿಯಲ್ಲಿ ಚೀನಾ ಯಾವುದೇ ‘ಗ್ಲೋಬಲ್‌ ಸೌತ್‌’ (Global south) ದೇಶಗಳ ನೆರವಿಗೆ ಬರಲಿಲ್ಲ.

ಇದೇ ಸಂದರ್ಭ ಬಳಸಿಕೊಂಡ ಭಾರತ, ಗ್ಲೋಬಲ್‌ ಸೌತ್‌ನ ಅನೇಕ ದೇಶಗಳಿಗೆ ಲಸಿಕೆ ಹಾಗೂ ಇತರ ನೆರವನ್ನು ಕೋವಿಡ್‌ ವೇಳೆ ‘ವಸುಧೈವ ಕುಟುಂಬಕಂ’ ಧ್ಯೇಯವಾಕ್ಯದ ಅಡಿ ನೀಡಿ ಮಾನವೀಯತೆ ಮೆರೆಯಿತು. 2023ರ ಜನವರಿಯಲ್ಲಿ ಮೊದಲ ಗ್ಲೋಬಲ್‌ ಸೌತ್‌ ವರ್ಚುವಲ್‌ ಶೃಂಗ (Global South Virtual Summit)ಆಯೋಜಿಸಿತು. ಇದರಲ್ಲಿ ಚೀನಾ (China), ಪಾಕ್‌ ಹೊರತುಪಡಿಸಿ 123 ದೇಶಗಳು ಪಾಲ್ಗೊಂಡವು. ಮೇಲಾಗಿ ಉತ್ತರ ಮತ್ತು ಚೀನಾದಂತೆ ಭಾರತ ಸಾಮ್ರಾಜ್ಯಶಾಹಿ ಅಲ್ಲ. ಇದು ಭಾರತದ ಜನಪ್ರಿಯತೆಗೆ ಕಾರಣವಾಗಿದೆ.

ಸ್ವಚ್ಛ ಪರಿಸರಕ್ಕೆ ಜಾಗತಿಕ ಇಂಧನ ಒಕ್ಕೂಟ: ಮೋದಿ ಘೋಷಣೆ

ಸ್ವಚ್ಛ ಪರಿಸರ ಸ್ಥಾಪನೆ ಉದ್ದೇಶದಿಂದ ಜಾಗತಿಕ ಜೈವಿಕ ಇಂಧನ ಒಕ್ಕೂಟ (Global Biofuels Alliance) ಆರಂಭಿಸುವುದಾಗಿ ಭಾರತ ಘೋಷಿಸಿದೆ ಹಾಗೂ ಈ ಒಕ್ಕೂಟ ಸೇರಿಕೊಳ್ಳಲು ಜಿ20 ಸದಸ್ಯ ದೇಶಗಳನ್ನು ಒತ್ತಾಯಿಸಿದೆ.  ಜಾಗತಿಕವಾಗಿ ಪೆಟ್ರೋಲ್‌ನೊಂದಿಗೆ ಶೇ.20 ಎಥೆನಾಲ್ ಮಿಶ್ರಣ ಮಾಡಬೇಕೆಂಬ ಮನವಿಯೊಂದಿಗೆ ಭಾರತ ಈ ಒತ್ತಾಯ ಮಾಡಿದೆ. ಜಿ20 ಶೃಂಗಸಭೆಯಲ್ಲಿ ‘ಒನ್‌ ಅರ್ಥ್’ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ‘ಜಿ 20 ಉಪಗ್ರಹ ಮಿಷನ್‌ ಪರಿಸರ ಮತ್ತು ಹವಾಮಾನ ವೀಕ್ಷಣೆಗೆ ಜಿ20 ಉಪಗ್ರಹ ಮಿಷನ್‌’ ಮತ್ತು ‘ಗ್ರೀನ್‌ ಕ್ರೆಡಿಟ್‌ ಇನಿಶಿಯೇಟಿವ್‌’ ಆರಂಭಿಸಲು ಮನವಿ ಮಾಡಿದರು.

‘ಇಂದು ಇಂಧನ ಮಿಶ್ರಣ ಕ್ಷೇತ್ರದಲ್ಲಿ ಎಲ್ಲ ದೇಶಗಳು ಒಟ್ಟಾಗಿ ಕೆಲಸ ಮಾಡುವುದು ಸಮಯದ ಅಗತ್ಯವಾಗಿದೆ. ಜಾಗತಿಕ ಮಟ್ಟದಲ್ಲಿ ಪೆಟ್ರೋಲ್‌ನಲ್ಲಿ ಎಥೆನಾಲ್… ಮಿಶ್ರಣವನ್ನು ಶೇ.20 ರವರೆಗೆ ತೆಗೆದುಕೊಳ್ಳಲು ನಾವು ಮನವಿ ಮಾಡುತ್ತಿದ್ದೇವೆ’ ಎಂದರು. ಇದೇ ವೇಳೆ, ‘ಪರ್ಯಾಯವಾಗಿ, ಹೆಚ್ಚಿನ ಜಾಗತಿಕ ಒಳಿತಿಗಾಗಿ ನಾವು ಮತ್ತೊಂದು ಇಂಧನ ಮಿಶ್ರಣ ಅಭಿವೃದ್ಧಿಪಡಿಸಲು ಕೆಲಸ ಮಾಡಬಹುದು. ಇದು ಸ್ಥಿರವಾದ ಇಂಧನ ಪೂರೈಕೆಯನ್ನು ಖಾತ್ರಿಪಡಿಸುತ್ತದೆ ಮತ್ತು ಹವಾಮಾನ ಭದ್ರತೆಗೆ ಕೊಡುಗೆ ನೀಡುತ್ತದೆ’ ಎಂದು ಮೋದಿ ಅವರು ಸೌದಿ ಅರೇಬಿಯಾದ (Saudi Arabia) ರಾಜಕುವರ ಮೊಹಮ್ಮದ್‌ ಬಿನ್‌ ಸಲ್ಮಾನ್‌(Prince Mohammed bin Salman), ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ (Joe Biden), ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ (British Prime Minister Rishi Sunak)ಭಾಗವಹಿಸಿದ್ದ ಅಧಿವೇಶನದಲ್ಲಿ ಹೇಳಿದರು.
 

click me!