ಭಗವಂತ ಈ ಕಣ್ಣಲ್ಲಿ ಇನ್ನೇನೆಲ್ಲಾ ನೋಡ್ಬೇಕೋ: ಮೆಟ್ರೋದಲ್ಲೇ ಹೇರ್‌ ಸ್ಟ್ರೈಟ್ ಮಾಡ್ಕೊಂಡ ಹುಡ್ಗಿ

By Suvarna News  |  First Published Jun 19, 2023, 1:10 PM IST

ಹುಡುಗಿಯೊಬ್ಬಳು ಮೆಟ್ರೋದಲ್ಲಿ ತನ್ನ ಕೂದಲನ್ನು ಸ್ಟ್ರೇಟ್ ಮಾಡುವ ವೀಡಿಯೋವೊಂದು ವೈರಲ್ ಆಗಿದ್ದು, ವೀಡಿಯೋ ನೋಡಿದ ನೆಟ್ಟಿಗರು ಭಗವಂತ ಈ ಕಣ್ಣಲ್ಲಿ ಇನ್ನೇನೆಲ್ಲಾ ನೋಡ್ಬೇಕೋ ಎಂದು ಕಾಮೆಂಟ್ ಮಾಡ್ತಿದ್ದಾರೆ.


ನವದೆಹಲಿ: ದೆಹಲಿ ಮೆಟ್ರೋ ಟ್ರೈನ್ ಒಂದಲ್ಲ ಒಂದು ಕಾರಣಕ್ಕೆ ದಿನವೂ ಸುದ್ದಿಯಲ್ಲಿರುತ್ತದೆ.  ಒಂದೊಮ್ಮೆ ಹುಡುಗಿಯೊಬ್ಬಳು ಅರೆಬರೆ ಬಟ್ಟೆ ಧರಿಸಿಕೊಂಡು ಮೆಟ್ರೋ ಏರಿದ ಕಾರಣಕ್ಕೆ ಸುದ್ದಿಯಾಗಿತ್ತು, ನಂತರ ಹುಡುಗಿಯೊಬ್ಬಳ ಡಾನ್ಸ್‌ ಆದಾದ ಬಳಿಕ ಪ್ರೇಮಿಗಳಿಬ್ಬರ ಪಬ್ಲಿಕ್ ಕಿಸ್ಸಿಂಗ್ ಕಾರಣಕ್ಕೆ ಮೆಟ್ರೋ ಭಾರಿ ಸುದ್ದಿಯಾಗಿತ್ತು. ಇದಾದ ನಂತರ ಹುಡುಗರಿಬ್ಬರು ಮೆಟ್ರೋದ ಬಾಗಿಲು ಹಾಕಲು ಬಿಡದೇ ಕಾಲು ಅಡ್ಡವಿಟ್ಟು ತರಲೆ ಮಾಡುತ್ತಿದ್ದ ವೀಡಿಯೋವೋ ವೈರಲ್ ಆಗಿತ್ತು.  ಈಗ ನೋಡಿದ್ರೆ ಹುಡುಗಿಯೊಬ್ಬಳು ಮೆಟ್ರೋದಲ್ಲಿ ತನ್ನ ಕೂದಲನ್ನು ಸ್ಟ್ರೇಟ್ ಮಾಡುವ ವೀಡಿಯೋವೊಂದು ವೈರಲ್ ಆಗಿದ್ದು, ವೀಡಿಯೋ ನೋಡಿದ ನೆಟ್ಟಿಗರು ಭಗವಂತ ಈ ಕಣ್ಣಲ್ಲಿ ಇನ್ನೇನೆಲ್ಲಾ ನೋಡ್ಬೇಕೋ ಎಂದು ಕಾಮೆಂಟ್ ಮಾಡ್ತಿದ್ದಾರೆ.

ಕಳೆದ 20 ವರ್ಷಗಳಿಂದ ದೆಹಲಿ ಮೆಟ್ರೋ (Delhi Metro) ರಾಜಧಾನಿಯ (Capital city)ಜನರ ಜೀವನಾಡಿಯಾಗಿದ್ದು, ಲಕ್ಷಾಂತರ ಜನ ದಿನವೂ ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ. ಯಾವುದೇ ಟ್ರಾಫಿಕ್ ಇಲ್ಲದೇ ನಿಗದಿತ ಸಮಯಕ್ಕೆ ತಲುಪಬಹುದಾದ ಕಾರಣ ಬಹುತೇಕರು ಮೆಟ್ರೋ ವಾಹನವನ್ನು ಅವಲಂಬಿಸಿದ್ದಾರೆ.  ಆದರೆ ಅಲ್ಲಿ ನಡೆಯುವ ಒಂದಲ್ಲ ಒಂದು ಅವಾಂತರಗಳು ಸಾಮಾನ್ಯ ಮೆಟ್ರೋ ಪ್ರಯಾಣಿಕರಿಗೆ ಇರಿಸು ಮುರಿಸು ಉಂಟು ಮಾಡುತ್ತಿದೆ.  ಕೆಲವರ ವಿಲಕ್ಷಣ ನಡವಳಿಕೆಗಳು ಪ್ರಯಾಣಿಕರನ್ನು ಗೊಂದಲಕ್ಕೀಡು ಮಾಡಿದರೆ ಮತ್ತೆ ಕೆಲವರು ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಸುಮ್ಮನಿರುತ್ತಾರೆ. 

Tap to resize

Latest Videos

ಮೆಟ್ರೋ ಬಾಗಿಲು ಕ್ಲೋಸ್ ಆಗಲು ಬಿಡದೇ ಕಿಡಿಗೇಡಿತನ : ಯುವಕರ ವೀಡಿಯೋ ವೈರಲ್

ಹೆಣ್ಮಕ್ಕಳು ನೇರವಾಗಿ ಇರುವ ಕೂದಲನ್ನು ಗುಂಗುರು ಮಾಡಿಕೊಂಡರೆ ಮತ್ತೆ ಕೆಲವು ಗುಂಗುರು ಕೂದಲಿನ ಹೆಣ್ಣು ಮಕ್ಕಳು ಕೂದಲನ್ನು ನೇರವಾಗಿಸಿಕೊಳ್ಳುತ್ತಾರೆ.  ಮತ್ತೆ ಕೆಲವರು ಮೃದು ಮಾಡಿಸಿಕೊಳ್ಳುವುದು ಬೌನ್ಸಿ ಬೌನ್ಸಿಯಾಗಿ (Bouncy hair) ಇರುವಂತೆ ಮಾಡಿಕೊಳ್ಳುವುದು ಹೀಗೆ ಕೂದಲನ್ನು ತಮಗಿಷ್ಟ ಬಂದಂತೆ ಮಾಡಿಕೊಳ್ಳುವುದು ಇಂದಿನ ತಲೆಮಾರಿನ ಹೆಣ್ಣು  ಮಕ್ಕಳ ಫ್ಯಾಷನ್‌, ಬಹುತೇಕರು ತಮ್ಮ ಮನೆಗಳಲ್ಲಿ ಇದಕ್ಕಾಗಿ ಎಲೆಕ್ಟ್ರಿಕ್ ಉಪಕರಣಗಳನ್ನು ಇರಿಸಿಕೊಂಡಿರುತ್ತಾರೆ. ಹಾಗೂ ಎಲ್ಲಿಗಾದರೂ ಹೊರಟು ಹೋಗಬೇಕೆಂದರೆ ಗಂಟೆಗೆ ಮೊದಲೇ ಕೂದಲನ್ನು ತಮಗೆ ಬೇಕಾದಂತೆ ಮಾಡುವ ಕೆಲಸ ಶುರು ಮಾಡಿ ನಂತರ ನೀಟ್ ಆಗಿ ರೆಡಿ ಆಗಿ ಹೋಗುತ್ತಾರೆ. ಆದರೆ ಇಲ್ಲಿ ಮೆಟ್ರೋದಲ್ಲೇ ಹುಡುಗಿ ಹೇರ್ ಸ್ಟ್ರೈಟ್ ಮಾಡುವುದಕ್ಕೆ ಇಳಿದುಕೊಂಡಿದ್ದು, ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಇವಳಿಗೇನು ಮನೆ ಮಠ ಇಲ್ವೇ ಇಲ್ಲೇಕೆ ಈ ಅವತಾರ ಎಂದು ಜನ ಪ್ರಶ್ನೆ ಮಾಡ್ತಿದ್ದಾರೆ.

ಹುಡುಗಿ ಮೆಟ್ರೋದಲ್ಲೇ ತನ್ನ ಕೂದಲನ್ನು (Hair Straightening) ನೇರ ಮಾಡಿಕೊಳ್ಳುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದು, ನೆಟ್ಟಿಗರು ಅನೇಕ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಈ ವೀಡಿಯೋವನ್ನು ಹಸ್ನಾ ಜರೂರಿ ಹೈ ಎಂಬ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು,  ದೆಹಲಿ ಮೆಟ್ರೊದ ಮಾತೇ ಬೇರೆ ಎಂದು ಬರೆದು ಈ ವೀಡಿಯೋ ಶೇರ್ ಮಾಡಲಾಗಿದೆ. 15 ಸೆಕೆಂಡ್‌ಗಳ ವೀಡಿಯೋದಲ್ಲಿ ಹುಡುಗಿ ಮೆಟ್ರೋದಲ್ಲಿರು ಚಾರ್ಜರ್ ಸಾಕೆಟ್‌ಗೆ ಪ್ಲಗ್ ಸಿಕ್ಕಿಸಿ ಕೂದಲನ್ನು ನೇರವಾಗಿಸುತ್ತಿದ್ದಾಳೆ. ವೀಡಿಯೋದಲ್ಲಿ ಎಲ್ಲೂ ಆಕೆಯ ಮುಖ ಮಾತ್ರ ಕಾಣಿಸುತ್ತಿಲ್ಲ,  ಒಂದು ಲಕ್ಷಕ್ಕೂ ಅಧಿಕ ಜನ ಈ ವೀಡಿಯೋವನ್ನು ವೀಕ್ಷಿಸಿದ್ದು, ಕೆಲವರು ಈಕೆಯ ಪೋಷಕರು ಈಕೆಗೆ ಎಲ್ಲಿ  ಹೇಗಿರಬೇಕು ಎಂಬ ಸಂಸ್ಕಾರ ಕಲಿಸಿಲ್ಲ ಎಂದು ಬೈದಾಡಿದ್ದಾರೆ. ಮತ್ತೆ ಕೆಲವರು ಈಕೆಗೆ ಮನೆಯಲ್ಲಿ ಸಮಯ ಇರಲಿಲ್ಲವೆನಿಸುತ್ತೆ ಪಾಪ ಎಂದು ಕಾಮೆಂಟ್ ಮಾಡಿದ್ದಾರೆ. 

ಮೆಟ್ರೋದಲ್ಲಿ ಜಡೆಜಗಳ; ಚಪ್ಪಲಿ, ವಾಟರ್ ಬಾಟಲ್‌ನಲ್ಲಿ ಹೊಡೆದಾಡಿಕೊಂಡ ರೌಡಿ ಬೇಬೀಸ್!

ಮತ್ತೆ ಕೆಲವರು ಆಕೆಯನ್ನು ಸಮರ್ಥಿಸಿಕೊಂಡಿದ್ದು, ಬಹುಶಃ ಆಕೆ ಬ್ಯುಸಿ ಆಗಿದಿರಬಹುದು, ಆಕೆ ಇದ್ದ ಸ್ಥಳದಲ್ಲಿ ಕರೆಂಟ್ ಇಲ್ಲದೇ ಹೋಗಿರಬಹುದು ಹೀಗೆ ಹಲವು ರೀತಿಯಲ್ಲಿ ಕಾಮೆಂಟ್‌ಗಳು ಬಂದಿವೆ. 

Delhi Metro की बात ही अलग है!
😂😂😂😂😂😂 pic.twitter.com/zzy6nNLmbA

— Hasna Zaroori Hai 🇮🇳 (@HasnaZarooriHai)

 

click me!