ಭಾರತ ಮಾತೆಗೆ ಜೈ ಎಂದಷ್ಟೇ ಹೇಳಬಲ್ಲೆ... ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ನೂಪುರ್ ಶರ್ಮಾ

By Suvarna News  |  First Published Sep 25, 2023, 2:07 PM IST

ಪ್ರವಾದಿ ಮಹಮ್ಮದ್ ಅವರ ಬಗೆಗಿನ ವಿವಾದಿತ ಹೇಳಿಕೆಯಿಂದಾಗಿ ಬಿಜೆಪಿಯಿಂದ ಅಮಾನತುಗೊಂಡಿದ್ದ ನೂಪುರ್‌ ಶರ್ಮಾ ಹಲವು ತಿಂಗಳುಗಳ ನಂತರ ಇದೇ ಮೊದಲ ಬಾರಿ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡರು.


ನವದೆಹಲಿ: ಪ್ರವಾದಿ ಮಹಮ್ಮದ್ ಅವರ ಬಗೆಗಿನ ವಿವಾದಿತ ಹೇಳಿಕೆಯಿಂದಾಗಿ ಬಿಜೆಪಿಯಿಂದ ಅಮಾನತುಗೊಂಡಿದ್ದ ನೂಪುರ್‌ ಶರ್ಮಾ ಹಲವು ತಿಂಗಳುಗಳ ನಂತರ ಇದೇ ಮೊದಲ ಬಾರಿ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡರು. ಕಾಶ್ಮೀರ ಫೈಲ್ಸ್ ಸಿನಿಮಾ ಖ್ಯಾತಿಯ ವಿವೇಕ್ ಅಗ್ನಹೋತ್ರಿ ಅವರ ಮುಂದಿನ ಸಿನಿಮಾ 'ದ ವ್ಯಾಕ್ಸಿನ್ ವಾರ್‌'ನ (The Vaccine War) ಪ್ರಮೋಷನ್‌ ದೆಹಲಿಯಲ್ಲಿ ನಿನ್ನೆ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ  ನೂಪುರ್ ಶರ್ಮಾ ಭಾಗವಹಿಸಿದ್ದರು. 

ಕಾರ್ಯಕ್ರಮದಲ್ಲಿ ಮಾತನಾಡಿದ ಶರ್ಮಾ, ಸಿನಿಮಾ ತಂಡದವರಿಗೆ, ನಿರ್ಮಾಪಕರಿಗೆ ಹಾಗೂ ಈ ಕಾರ್ಯಕ್ರಮದಲ್ಲಿ ಹಾಜರಿದ್ದ ವ್ಯಾಕ್ಸಿನ್ ಕಂಡು ಹಿಡಿದ ವಿಜ್ಞಾನಿಗಳಿಗೆ (vaccine scientists) ಧನ್ಯವಾದ ತಿಳಿಸಿದರು. ನಾನು ನಿಮಗೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲು ಬಯಸುತ್ತೇನೆ. ನಿಮ್ಮ ಪ್ರಯತ್ನದಿಂದಾಗಿ ನಾವು ಭಾರತೀಯರು ಇಂದು ಜೀವಂತವಾಗಿದ್ದೇವೆ ಎಂದು ನೂಪುರ್ ಹೇಳಿದರು.

Tap to resize

Latest Videos

ರೈಲಲ್ಲೂ ಜೋಲಿ ಕಟ್ಟಿ ನಿದ್ದೆಗೆ ಜಾರಿದ ದೊಡ್ಡ ಪಾಪುವಿನ ವೀಡಿಯೋ ಸಖತ್ ವೈರಲ್‌

ಅಲ್ಲದೇ ತಮ್ಮನ್ನು ಈ ಕಾರ್ಯಕ್ರಮಕ್ಕೆ ಆಯೋಜಿಸಿದ್ದ ಸಿನಿಮಾ ಸಂಘಟಕರಿಗೂ ಧನ್ಯವಾದ ತಿಳಿಸಿದ ಅವರು ನಾನು ಸರಳವಾಗಿ ಭಾರತ್ ಮಾತಾ ಕಿ ಜೈ ಎಂದಷ್ಟೇ ಹೇಳಬಲ್ಲೆ ಎಂದರು.  ಮೊದಲಿಗೆ ಇಂಡಿಯಾ ಇದನ್ನು ಮಾಡಲಿದೆ ಎಂದ ಅವರು ಕೂಡಲೇ ಇಂಡಿಯಾ ಬದಲು ಭಾರತ ಈ ಸಾಧನೆ ಮಾಡಲಿದೆ ಎಂದರು. 

ಈ ಸಿನಿಮಾದ ವಿಶೇಷ ಸ್ಕ್ರೀನಿಂಗ್ ನಂತರ ನೂಪುರ್ ಅವರನ್ನು ವೇದಿಕೆಗೆ ಕರೆದ ವಿವೇಕ್ ಅಗ್ನಿಹೋತ್ರಿ, ನೂಪುರ್ ಅವರ ಧೈರ್ಯವನ್ನು ಕೊಂಡಾಡಿದ್ದಾರೆ. ನೂಪುರ್‌ ಅವರು ಈ ದೇಶದ ಯುವತಿಯರು ಧೈರ್ಯದಿಂದ ಇರಲು ಪ್ರೇರಣೆ ಆಗಿದ್ದಾರೆ. ಇದು ವಿಜ್ಞಾನದ ಕುರಿತಾದ ಚಲನಚಿತ್ರ ಎಂದು ನನಗೆ ತಿಳಿದಿದೆ ಮತ್ತು ನಾನು ಅದನ್ನು ರಾಜಕೀಯ ಮಾಡಲು ಬಯಸುವುದಿಲ್ಲ. ಆದರೆ ನಾನು ಅವರನ್ನು ವೇದಿಕೆಗೆ ಆಹ್ವಾನಿಸಿದೆ ಏಕೆಂದರೆ ಬಹಳಷ್ಟು ಭಾರತೀಯರು ಮಹಿಳೆಯರಿಗೆ ನೂಪುರ್ ಪ್ರೇರಣೆ ಆಗಿದ್ದಾರೆ. ಅವರು ಧೈರ್ಯಶಾಲಿ ಭಾರತೀಯ ಮಹಿಳೆಯರ ಸಂಕೇತವಾಗಿದ್ದಾರೆ ಎಂದು ವಿವೇಕ್ ಅಗ್ನಿ ಹೋತ್ರಿ (Vivek Agnihotri) ಹೇಳಿದ್ದಾರೆ. 

ಆರ್‌ಬಿಐ ಗವರ್ನರ್‌ಗೆ ಹಣದ ರಾಶಿ ಮೇಲೆ ಕುಳಿತ ಹಾವು ಎಂದಿದ್ದರಂತೆ ಪ್ರಧಾನಿ ಮೋದಿ!

ಕಳೆದ ಮೇ ತಿಂಗಳಲ್ಲಿ ಟಿವಿ ಚಾನೆಲೊಂದರಲ್ಲಿ ಚರ್ಚೆಯೊಂದರಲ್ಲಿ ಭಾಗವಹಿಸಿದ್ದ ನೂಪುರ್ ಶರ್ಮಾ ಅವರು ನೀಡಿದ ಹೇಳಿಕೆ ದೇಶಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದಾದ ನಂತರ ಅವರು ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಇದರ ಜೊತೆಗೆ ಅವರು 2022ರ ಜೂನ್‌ 5 ರಂದು ಟ್ವಿಟ್ಟರ್‌ನಲ್ಲಿ ಮಾಡಿದ್ದ ಪೋಸ್ಟ್‌ ಕೊನೆಯ ಸಾರ್ವಜನಿಕ ಪೋಸ್ಟ್ ಆಗಿತ್ತು.  ಪ್ರವಾದಿ ಮೊಹಮ್ಮದ್ (Prophet Muhammed) ಬಗ್ಗೆ ಇವರು ನೀಡಿದ ಹೇಳಿಕೆ ದೇಶದಲ್ಲಿ ಭಾರತೀಯ ಮುಸಲ್ಮಾನರು ಸಿಡಿದೇಳುವಂತೆ ಮಾಡಿತ್ತು. 

ಯುಎಇ, ಸೌದಿ ಅರೇಬಿಯಾ, ಕತಾರ್, ಇರಾನ್ ಸೇರಿದಂತೆ ಹಲವು ಇಸ್ಲಾಮಿಕ್ ದೇಶಗಳು ನೂಪುರ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು.  ಇದಾದ ನಂತರ ಬಿಜೆಪಿ ಕೂಡ ಅವರನ್ನು ಪಕ್ಷ ವಕ್ತಾರ ಸ್ಥಾನದಿಂದ ಅಮಾನತು ಮಾಡಿತ್ತು. ಇದರ ಜೊತೆಗೆ ಸುಪ್ರೀಂಕೋರ್ಟ್ ಕೂಡ ನೂಪುರ್‌ ಶರ್ಮಾ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ ನಿಮ್ಮ ಹಿಡಿತವಿಲ್ಲದ ನಾಲಿಗೆಯಿಂದ ಇಡೀ ದೇಶಕ್ಕೆ ಬೆಂಕಿ ಹಚ್ಚಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿತ್ತು.

ಈ ವಿವಾದದ ನಂತರ ನೂಪುರ್ ಶರ್ಮಾಗೆ ಭಾರಿ ಜೀವ ಬೆದರಿಕೆ ಬಂದಿತ್ತು. ನೂಪುರ್‌ ಶರ್ಮಾ, ರಾಷ್ಟ್ರೀಯ ಟಿವಿ ಚಾನೆಲ್‌ಗಳ ಹಲವು ರಾಜಕೀಯ ಚರ್ಚೆಗಳಲ್ಲಿ ಸದಾ ಭಾಗವಹಿಸುತ್ತಿದ್ದ ನೂಪುರ್ ಶರ್ಮಾ, ಬಿಜೆಪಿಯನ್ನು ಸಮರ್ಥಿಸಿಕೊಳ್ಳುತ್ತಿದ್ದರು. 

Thank you for being such an inspiration for young girls. Nobody can stop you when you have millions of brothers fighting for you. pic.twitter.com/QlG6922BPW

— Vivek Ranjan Agnihotri (@vivekagnihotri)

 

click me!