ಗಂಡನ ಮುಂದೆಯೇ ಪತ್ನಿ ಮೇಲೆ ಅತ್ಯಾಚಾರ: ವಿಷ ಸೇವಿಸಿ ಸಾವಿಗೆ ಶರಣಾದ ದಂಪತಿ

By Suvarna News  |  First Published Sep 25, 2023, 12:21 PM IST

ಗಂಡನ ಮುಂದೆ ಪತ್ನಿ ಮೇಲೆ ಕಾಮುಕರಿಬ್ಬರು ಅತ್ಯಾಚಾರ ನಡೆಸಿದ್ದರಿಂದ ಮನನೊಂದ ದಂಪತಿ ವಿಷ ಸೇವಿಸಿ ಸಾವಿಗೆ ಶರಣಾದ ದಾರುಣ ಘಟನೆ ಉತ್ತರಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ.


ಬಸ್ತಿ: ಗಂಡನ ಮುಂದೆ ಪತ್ನಿ ಮೇಲೆ ಕಾಮುಕರಿಬ್ಬರು ಅತ್ಯಾಚಾರ ನಡೆಸಿದ್ದರಿಂದ ಮನನೊಂದ ದಂಪತಿ ವಿಷ ಸೇವಿಸಿ ಸಾವಿಗೆ ಶರಣಾದ ದಾರುಣ ಘಟನೆ ಉತ್ತರಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್  ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಗಂಡ ಮನೆಯಲ್ಲೇ ಸಾವನ್ನಪ್ಪಿದ್ದರೆ ಹೆಂಡತಿ ಮರುದಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಆಸ್ತಿಗೆ ಸಂಬಂಧಿಸಿದಂ ಗಲಾಟೆಯೇ ಈ ಅತ್ಯಾಚಾರಕ್ಕೆ ಕಾರಣ ಎಂದು ಪೊಲೀಸ್ ತನಿಖೆ ವೇಳೆ ತಿಳಿದ್ದು ಬಂದಿದ್ದು, ದಂಪತಿ ಸಾವಿನಿಂದಾಗಿ ಮೂವರು ಪುಟ್ಟ ಮಕ್ಕಳು ಅನಾಥರಾಗಿದ್ದಾರೆ. 

ಸೆಪ್ಟೆಂಬರ್ 20 ಮತ್ತು 21 ರ ಮಧ್ಯರಾತ್ರಿ ರುಧೌಲಿ (Rudhuli)ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬರುವ ಮಹಿಳೆಯ ಮನೆಯಲ್ಲೇ ಆಕೆಯ ಮೇಲೆ ಕಾಮುಕರಿಬ್ಬರು ಅತ್ಯಾಚಾರವೆಸಗಿದ್ದಾರೆ ಎಂದು ಆಕೆಯ ಸಂಬಂಧಿಕರು ಆರೋಪಿಸಿದ್ದಾರೆ. ಘಟನೆಯ ನಂತರ ದಂಪತಿ ತಮ್ಮ ಹೇಳಿಕೆಯನ್ನು ವೀಡಿಯೋ ರೆಕಾರ್ಡ್‌ ಮಾಡಿ ಸಾವಿಗೆ ಶರಣಾಗಿದ್ದಾರೆ. ಈ ವೀಡಿಯೋದಲ್ಲಿ ಅವರಿಬ್ಬರು ಆರೋಪಿಗಳ ಹೆಸರು ಹೇಳಿದ್ದಾರೆ ಎಂದು ಬಸ್ತಿಯ ಸೂಪರಿಟೆಂಡೆಂಟ್ ಆಫ್ ಪೊಲೀಸ್ ಗೋಪಾಲಕೃಷ್ಣ ಹೇಳಿದ್ದಾರೆ. 

Tap to resize

Latest Videos

ಹಾಸ್ಟೆಲ್‌ ಆಹಾರದಲ್ಲಿ ಸತ್ತ ಕಪ್ಪೆ ಪತ್ತೆ: ಐಐಟಿಯಲ್ಲೇ ಹೀಗಾದ್ರೆ ಹೇಗೆ?

ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವ್ಯಕ್ತಿಯ ಸಹೋದರ ದೂರು ದಾಖಲಿಸಿದ್ದು, ಇಬ್ಬರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ಡಿ(ಸಾಮೂಹಿಕ ಅತ್ಯಾಚಾರ) 306 (ಆತ್ಮಹತ್ಯೆಗೆ ಪ್ರೇರಣೆ ) ಪ್ರಕರಣ ದಾಖಲಾಗಿದೆ. 

ಈ ದಂಪತಿಗೆ ಮಕ್ಕಳಿದ್ದು, ಅವರು ನೀಡಿದ ಮಾಹಿತಿ ಪ್ರಕಾರ, ಶಾಲೆಗೆ ಹೊರಟು ನಿಂತ ಮಕ್ಕಳಲ್ಲಿ ಪೋಷಕರು ತಾವು ವಿಷ ಸೇವಿಸಿದ್ದು, ಸಾವಿಗೆ ಶರಣಾಗುತ್ತಿರುವುದಾಗಿ ಹೇಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಈ ದಂಪತಿಗೆ 8 ಹಾಗೂ 2 ವರ್ಷದ ಇಬ್ಬರು ಗಂಡು ಮಕ್ಕಳು ಹಾಗು ಒಮದು ವರ್ಷದ ಮಗಳು ಇದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಈ ದಂಪತಿ ತಮಗೆ ಸೇರಿದ್ದ ಆಸ್ತಿಯನ್ನು ಮಾರಾಟ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ದ್ವೇಷದಿಂದ ಈ ಅತ್ಯಾಚಾರ (Rape) ಮಾಡಲಾಗಿದೆ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. 

ಆರ್‌ಬಿಐ ಗವರ್ನರ್‌ಗೆ ಹಣದ ರಾಶಿ ಮೇಲೆ ಕುಳಿತ ಹಾವು ಎಂದಿದ್ದರಂತೆ ಪ್ರಧಾನಿ ಮೋದಿ!

click me!