ದೀದಿ ಅವಧಿಯಲ್ಲಿ ಸುಲಿಗೆ ಮಾಡಿದ್ದ TMC ನಾಯಕನ ತಲೆ ಬೋಳಿಸಿ, ಶೂ ಹಾರ ಹಾಕಿ ಮೆರವಣಿಗೆ ಮಾಡಿದ ಜನ! ವಿಡಿಯೋ ವೈರಲ್

Kannadaprabha News   | Kannada Prabha
Published : Jun 08, 2026, 09:21 AM IST
TMC Leader

ಸಾರಾಂಶ

ಪಶ್ಚಿಮ ಬಂಗಾಳದಲ್ಲಿ, ಭ್ರಷ್ಟಾಚಾರದ ಆರೋಪದ ಮೇಲೆ ಟಿಎಂಸಿ ನಾಯಕರು ಸಾರ್ವಜನಿಕರ ಆಕ್ರೋಶ ಮತ್ತು ಪೊಲೀಸ್ ಕ್ರಮವನ್ನು ಎದುರಿಸುತ್ತಿದ್ದಾರೆ. ಒಬ್ಬ ನಾಯಕನಿಗೆ ತಲೆ ಬೋಳಿಸಿ ಮೆರವಣಿಗೆ ಮಾಡಿದರೆ, ಮತ್ತೊಬ್ಬ ನಾಯಕ ಸೀರೆ ರಾಶಿಯಡಿ ಅಡಗಿ ಬಂಧನಕ್ಕೊಳಗಾಗಿದ್ದಾನೆ. ಇನ್ನೊಬ್ಬ ಕೌನ್ಸಿಲರ್ ಅಕ್ರಮವಾಗಿ ವಸೂಲಿ ಮಾಡಿದ ಹಣವನ್ನು ಹಿಂದಿರುಗಿಸಿದ್ದಾರೆ.

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅಧಿಕಾರದಲ್ಲಿದ್ದಾಗ ಸರ್ಕಾರಿ ಯೋಜನೆಗಳ ಹೆಸರಿನಲ್ಲಿ ಫಲಾನುಭವಿಗಳಿಂದ ಹಣ ಸುಲಿಗೆ (ಕಟ್‌ ಮನಿ) ಮಾಡಿದ್ದ ಎನ್ನಲಾದ ಟಿಎಂಸಿ ನಾಯಕನೊಬ್ಬನಿಗೆ, ತಲೆ ಬೋಳಿಸಿ ಶೂಗಳ ಹಾರ ಹಾಕಿ ಮೆರವಣಿಗೆ ಮಾಡಿರುವ ಘಟನೆ ಭಾನುವಾರ ಹೌರಾದಲ್ಲಿ ನಡೆದಿದೆ.

ಸನ್ನಾಶಿ ಮನ್ನಾ ಎಂಬ ಟಿಎಂಸಿ ನಾಯಕ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಸವಲತ್ತುಗಳನ್ನು ಪಡೆಯುವುದಕ್ಕೆ ಜನರಿಂದ ಹಣ ಸುಲಿಗೆ ಮಾಡುತ್ತಿದ್ದ ಎಂದು ಅಮರ್ದಹಾ ಗ್ರಾಮದ ಜನರು ಆರೋಪಿಸಿದ್ದಾರೆ. ಅಲ್ಲದೇ ಮಾನ್ ಮನೆಯಲ್ಲಿ ಹಲವರ ಆಧಾರ್‌ ಕಾರ್ಡ್‌ ಮತ್ತು ಮನರೇಗಾ ಉದ್ಯೋಗ ಕಾರ್ಡ್‌ ಕೂಡ ಪತ್ತೆಯಾಗಿವೆ. ಆತನ ಮೇಲೆ ಆಕ್ರೋಶಿತರಾಗಿದ್ದ ಜನರು ತಲೆ ಬೋಳಿಸಿದ್ದಾರೆ. ಮಾತ್ರವದೇ ಶೂಗಳ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ, ಇದರ ವಿಡಿಯೋ ಜಾಲತಾಣದಲ್ಲಿ ವೈರಲ್‌ ಆಗಿದೆ.

 

ಇತ್ತೀಚೆಗೆ ಮಮತಾ ನಿರ್ಗಮಿಸಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರ ಬಂದ ನಂತರ ರಾಜ್ಯದಲ್ಲಿ ಅನೇಕ ಟಿಎಂಸಿಗರು ತಾವು ಮಮತಾ ಅವಧಿಯಲ್ಲಿ ಪೀಕಿದ್ದ ಭ್ರಷ್ಟಾಚಾರದ ಹಣ ಹಿಂತಿರುಗಿಸಿದ್ದರು.

ಬಂಧನ ಭೀತಿಯಿಂದ ಸೀರೆ ರಾಶೀ ಅಡಿ ಅವಿತ ಟಿಎಂಸಿ ನಾಯಕ ಚಕ್ರವರ್ತಿ ಸೆರೆ

ಕೋಲ್ಕತಾ: ಅಕ್ರಮವಾಗಿ ಲಂಚ ಪಡೆದ ಆರೋಪದಲ್ಲಿ ಬಂಧಿಸಲ್ಪಡುವ ಭೀತಿಯಿಂದ ಟಿಎಂಸಿ ನಾಯಕ ಬ್ರಹ್ಮಾನಂದ ಚಕ್ರವರ್ತಿ, ಬಟ್ಟೆ ಅಂಗಡಿಯೊಂದರ ಗೋದಾಮಿನಲ್ಲಿ ಸೀರೆ ರಾಶಿಗಳ ಅಡಿಯಲ್ಲಿ ಅವಿತಿದ್ದ ಘಟನೆ ನಡೆದಿದೆ. ಆದರೆ ಆ ಸ್ಥಳ ಪತ್ತೆ ಮಾಡಿದ ಪೊಲೀಸರು, ಚರ್ಕ್ರವರ್ತಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಸರ್ಕಾರದ ವಸತಿ ಯೋಜನೆ ನಿಧಿಯ ಹಣದಲ್ಲಿ ಅದರ ಫಲಾನುಭವಿಗಳಿಂದ ಪಾಲನ್ನು ಕೇಳುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದು, ಪ್ರಕರಣ ದಾಖಲಾಗಿತ್ತು. ತಾವು ಬಂಧಿಸಲ್ಪಡುವುದು ಖಚಿತ ಎಂದರಿತ ಚಕ್ರವರ್ತಿ, ಹತ್ತಿರದ ಸೀರೆ ಅಂಗಡಿಯನ್ನು ಹೊಕ್ಕು, ಸೀರೆ ಅಟ್ಟಿಗಳನ್ನು ಮೈಮೇಲೆಳೆದುಕೊಂಡು ಕುಳಿತಿದ್ದರು. ಆದರೆ ಅಲ್ಲಿಗೆ ಬಂದ ಪೊಲೀಸರಿಗೆ ಸೀರೆಗಳನ್ನು ಸೆರಿಸಿ ಚಕ್ರವರ್ತಿಯನ್ನು ಹಿಡಿಯುವುದರಲ್ಲಿ ಹೆಚ್ಚು ಸಮಯ ಹಿಡಿಸಲಿಲ್ಲ.

₹1 ಲಕ್ಷ ಮರಳಿಸಿದ ಟಿಎಂಸಿ ಕೌನ್ಸಿಲರ್‌

ಸ್ಥಳೀಯರಿಂದ ಅಕ್ರಮವಾಗಿ ವಸೂಲಿ ಮಾಡಿದ್ದ 1 ಲಕ್ಷ ರು.ವನ್ನು ಮಠಭಂಗ ಪುರಸಭೆಯ ಕೌನ್ಸಿಲರ್‌ ಆಗಿರುವ ಟಿಎಂಸಿಯ ಕಕೋಲಿ ಘೋಷ್‌ ಮರಳಿಸಿದ್ದಾರೆ. ಉಳಿದ ಹಣವನ್ನೂ ಕಂತುಗಳಲ್ಲಿ ನೀಡುವುದಾಗಿ ಭರವಸೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Ayodhya ರಾಮಮಂದಿರಕ್ಕೆ ದೇಣಿಗೆ ಬಂದ ಕೋಟ್ಯಂತರ ಹಣ ಕಾಣೆ: ಅಖಿಲೇಶ್‌ ಯಾದವ್ ಗಂಭೀರ ಆರೋಪ
ಕೇರಳದ ರಾಜಕೀಯವೇ ವಿಚಿತ್ರ: ಶಾಸಕ ರಾಜೀವ್‌ ಚಂದ್ರಶೇಖರ್‌ ಬಣ್ಣನೆ