ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಎದ್ದು, ದೀದಿ ಬಿದ್ರೆ ಏನಾಗುತ್ತೆ?

By Suvarna NewsFirst Published May 2, 2021, 12:36 PM IST
Highlights

ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಬಹುತೇಕ ಗೆಲುವು| ಟಿಎಂಸಿ ಗೆದ್ದರೂ ಹಿಂದುಳಿದ ಮಮತಾ ಬ್ಯಾನರ್ಜಿ| ಪಕ್ಷ ಗೆದ್ದು ಮಮತಾ ಸೋತರೆ ಅಪಾಯ ಕಟ್ಟಿಟ್ಟ ಬುತ್ತಿ

ಕೋಲ್ಕತ್ತಾ(ಮೇ.02): ಕೊರೋನಾ ಹಾವಳಿ ನಡುವೆಯೂ ನಡೆದ ಪಂಚ ರಾಜ್ಯ ಚುನಾವಣೆಗಳ ಮತ ಎಣಿಕೆ ಕಾರ್ಯ ಇಂದು, ಭಾನುವಾರ ಆರಂಭವಾಗಿದೆ. ಹೀಗಿರುವಾಗ ಈ ಫಲಿತಾಂಶ ಇಡೀ ದೇಶದ ಚಿತ್ತ ತನ್ನತ್ತ ಸೆಳೆದಿದೆ. ಅದರಲ್ಲೂ ವಿಶೇಷವಾಗಿ ಪಶ್ಚಿಮ ಬಂಗಾಳದ ರಿಸಲ್ಟ್ ಏನಾಗುತ್ತದೆ ಎಂಬ ಕುತೂಹಲ ಎಲ್ಲರನ್ನೂ ಕಾಡಿದೆ. ಕೇಂದ್ರದಲ್ಲಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹತ್ತು ವರ್ಷದಿಂದ ಅಧಿಕಾರದಲ್ಲಿರುವ ಟಿಎಂಸಿಗೆ ನೇ ಪೈಪೋಟಿ ನೀಡಿರುವುದೇ ಇದಕ್ಕೆ ಕಾರಣ. ಈ ಚುನಾವಣೆಯಲ್ಲಿ ಪಶ್ಚಿಮ ಬಂಗಾಲದಲ್ಲಿ ದೀದಿಯನ್ನು ಸೋಲಿಸಲು ಬಿಜೆಪಿ ಎಲ್ಆ ರೀತಿಯ ಯತ್ನ ನಡೆಸಿದೆ. ಖುದ್ದು ಪಿಎಂ ಮೋದಿ, ಅಮಿತ್ ಶಾ ಸೇರಿ ಕೇಂದ್ರ ಸಚಿವರೆಲ್ಲರೂ ಇಲ್ಲಿ ಪ್ರಚಾರಕ್ಕೆ ಆಗಮಿಸಿದ್ದರು. ಆದತೆ ಅತ್ತ ದೀದಿಯ ಟಿಎಂಸಿ ಪಕ್ಷ ಮೂರನೇ ಬಾರಿ ಅಧಿಕಾರಕ್ಕೇರುವ ಹಠದಿಂದ ಪ್ರಚಾರ ನಡೆಸಿತ್ತು.

'ಚುನಾವಣಾ ತಂತ್ರಗಾರನ ಕೆಲಸ ಹೋಯ್ತು: ಇಬ್ಬರ ನೌಕರಿಗೆ ಕತ್ತರಿ'

ಇನ್ನು ಪಶ್ಚಿಮ ಬಂಗಾಳದಲ್ಲಿ ಬಹುತೇಕ ಎಲ್ಲರ ಗಮನ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಫಲಿತಾಂಶದ ಮೇಲಿದೆ. ಇಲ್ಲಿ ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿಯ ಸುವೇಂದು ಅಧಿಕಾರಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. 11.15ಕ್ಕೆ ಬಂದ ಫಲಿತಾಂಶದನ್ವಯ ಅಧಿಕಾರಿ 23495 ಮತ ಅಂದರೆ ಶೇ. 57.89 ರಷ್ಟು ಮತ ಗಳಿಸಿ ಮುನ್ನಡೆಯಲ್ಲಿದ್ದರೆ, ಅತ್ತ ಮಮತಾ ಬ್ಯಾನರ್ಜಿ 15294 ಮತಗಳು ಅಂದರೆ ಶೇ. 37.68ರಷ್ಟು ಓಟು ಪಡೆದು ಹಿಂದೆ ಉಳಿದಿದ್ದಾರೆ.

ಇನ್ನು ಅತ್ತ ಪಶ್ಚಿಮ ಬಂಗಾಳದ ಒಟ್ಟು ಫಲಿತಾಂಶದಲ್ಲಿ ಟಿಎಂಸಿ ಮುಂಚೂಣಿಯಲ್ಲಿದ್ದರೂ, ಮಮತಾ ಬ್ಯಾನರ್ಜಿ ಹಿಂದುಳಿದಿರುವ ಬಗ್ಗೆಯೇ ಎಲ್ಲೆಡೆ ಚರ್ಚೆಗಳಾಗುತ್ತಿವೆ. ದೀದೀ ತನ್ನ ಆಪ್ತರಾಗಿದ್ದ ಅಧಿಕಾರಿ ಎದುರು ಸೋಲಬಹುದಾ ಎಂಬ ಪ್ರಶ್ನೆ ಹಲವರಲ್ಲಿದೆ. ಹೀಗಿರುವಾಗ ತಜ್ಞರ ಅನ್ವಯ ಒಂದು ವೇಳೆ ಟಿಎಂಸಿ ಗೆದ್ದು ಮಮತಾ ಬ್ಯಾನರ್ಜಿ ಸೋತರೆ ಇದು ಮುಂದಿನ ದಿನಗಳಲ್ಲಿ ಪಶ್ಚಿಮ ಬಂಗಾಳ ರಾಜಕೀಯದ ಮೇಲೆ ಭಾರೀ ಪ್ರಭಾವ ಬೀರಲಿದೆ ಎಂದಿದ್ದಾರೆ. 

ಹಾಗಾದ್ರೆ ಮಮತಾ ಸೋತರೆ ಪಕ್ಷಕ್ಕಾಗುವ ನಷ್ಟವೇನು?

ರಾಜ್ಯದಲ್ಲಿ ಟಿಎಂಸಿ ಗೆಲ್ಲಬಹುದು. ಆದರೆ ಮಮತಾ ಬ್ಯಾನರ್ಜಿ ಸೋತರೆ ಪಕ್ಷ ಬಿಟ್ಟು ಹೋಗುವಚವರ ಸಂಖ್ಯೆ ಏರಲಿದೆ ಎಂಬುವುದು ರಾಜಕೀಯ ವಿಶ್ಲೇಷಕರ ಮಾತಾಗಿದೆ. ಅದರಲ್ಲೂ ವಿಶೇಷವಾಗಿ ಅಭಿಷೇಕ್ ಬ್ಯಾನರ್ಜಿ ಬಗ್ಗೆ ಪಕ್ಷದಲ್ಲಿ ಬಹಳಷ್ಟು ಮಂದಿಗೆ ಅಸಮಾಧಾನವಿದೆ. ಪಕ್ಷದ ಮನೇಲೆ ಅವರ ಹಿಡಿತವಿರುವುದೇ ಕಾರಣ. ಪಕ್ಷಕ್ಕೆ ಸಮಬಂಧಿಸಿದ ಬಹುತೇಕ ನಿರ್ಧಾರಗಳನ್ನು ಇವರೇ ತೆಗೆದುಕೊಳ್ಳುತ್ತಾರೆ. ಇದು ಹಲವರ ಕೋಪಕ್ಕೆ ಕಾರಣವಾಗಿದೆ. ಇಷ್ಟೇ ಅಲ್ಲದೇ ಅಭಿಷೇಕ್‌ ಬ್ಯಾನರ್ಜಿಯಿಂದ, ಮಮತಾ ಬ್ಯಾನರ್ಜಿ ವರ್ಚಸ್ಸಿಗೂ ಹಾನಿಯುಂಟಾಗಿದೆ. ಇನ್ನು ಈಗಾಗಲೇ ಟಿಎಂಸಿ ಬಿಟ್ಟು ಬಿಜೆಪಿಗೆ ಹೋದವರೂ ಪಕ್ಷದ ಹಿಡಿತ ಮಮತಾ ಬ್ಯಾನರ್ಜಿ ಬಳಿ ಇಲ್ಲ ಅಭಿಷೇಕ್ ಬಳಿ ಇದೆ ಎಂದು ದೂರಿದ್ದರು. ಇದೇ ವಿಚಾರ ಸುವೇಂದು ಅಧಿಕಾರಿ ಪಕ್ಷ ಬಿಟ್ಟು ಬಿಜೆಪಿಗೆ ಸೇರ್ಪಡೆಗೊಳ್ಳಲು ಕಾರಣವಾಗಿತ್ತು.

ಪಶ್ಚಿಮ ಬಂಗಾಳ: ಮೋದಿ VS ದೀದಿ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನು ಅಧಿಕಾರ ಹೋದರೆ ಪಕ್ಷದ ಅನೇಕ ಮಂದಿ ಬಿಜೆಪಿಗೆ ಸೇರ್ಪಡೆಗೊಳ್ಳುವ ತಯಾರಿಯಲ್ಲಿಯೂ ಇದ್ದಾರೆ ಎನ್ನಲಾಗಿದೆ. ಇದು ಸಹಜವಾಗಿ ಮಮತಾರನ್ನು ಬಲಹೀನಗೊಳಿಸುತ್ತದೆ. 

ಇನ್ನು ರಾಷ್ಟ್ರೀಯವಚಾಗಿ ಮಮತಾ ಬ್ಯಾನರ್ಜಿಯನ್ನು, ಮೋದಿ ವಿರೋಧಿಯಾಗಿಯೇ ನೋಡಲಾಗುತ್ತದೆ. ಇನ್ನು ಅನೇಕ ಬಾರಿ ತಾನೊಬ್ಬಳೇ ಮೋದಿ ಹಾಗೂ ಅಮಿತ್ ಶಾ ಜೋಡಿಯನ್ನು ಸೋಲಿಸಬಲ್ಲೆ ಎಂದಿದ್ದಾರೆ. ಒಂದು ವೇಳೆ ಅವರು ನಂದಿಗ್ರಾಮದಲ್ಲಿ ಸೋತರೆ ಮುಖಭಂಗವಾಗಲಿದೆ. 

"

click me!