'ಚುನಾವಣಾ ತಂತ್ರಗಾರನ ಕೆಲಸ ಹೋಯ್ತು: ಇಬ್ಬರ ನೌಕರಿಗೆ ಕತ್ತರಿ'

By Suvarna NewsFirst Published May 2, 2021, 11:21 AM IST
Highlights

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಬಿಜೆಪಿ ಜಿದ್ದಾಜಿದ್ದಿನ ಫೈಟ್| ಮಮತಾಗೆ ಹಿನ್ನಡೆ, ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ ಪರ ಜನರ ಒಲವು| ಆರಂಭಿಕ ಟ್ರೆಂಡ್ ಬೆನ್ನಲ್ಲೇ ಟಟಿಎಂಸಿಗೆ ಟಾಂಗ್‌ ಕೊಟ್ಟ ಸಂಬಿತ್ ಪಾತ್ರಾ

ಕೋಲ್ಕತ್ತಾ(ಮೇ.02): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರೆದಿದೆ. ಆರಂಭಿಕ ಟ್ರೆಂಡ್‌ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡು ಬಂದಿದೆ. ಮೊದಲ ಒಂದು ತಾಸಿನಲ್ಲಿ ಟಿಎಂಸಿಇ 100 ಹಾಗೂ ಬಿಜೆಪಿ 95 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಹೀಗಿರುವಾಗ ಬಿಜೆಪಿ ವಕ್ತಾರ ಸಂಭಿತ್ ಪಾತ್ರಾ ಪಶ್ಚಿಮ ಬಂಗಾಳ ಫಲಿತಾಂಶವನ್ನು ಗಮನಿಸಿದರೆ ಇಬ್ಬರು ನೌಕರಿ ಅಪಾಯದಲ್ಲಿದೆ ಎಂಬುವುದು ಸ್ಪಷ್ಟವಾಗುತ್ತದೆ ಎಂದಿದ್ದಾರೆ.
ಇಂದು ಯಾವುದೇ ಆಚರಣೆಯ ವಿಚಾರವಿಲ್ಲ

ಪಶ್ಚಿಮ ಬಂಗಾಳ: ಮೋದಿ VS ದೀದಿ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇಂದು ಯಾವುದೇ ಆಚರಣೆ ಅಥವಾ ವಿಜಯ ಯಾತ್ರೆ ಇಲ್ಲ ಎಂದಿರುವ ಸಂಬಿತ್ ಪಾತ್ರಾ ಕೊರೋನಾ ಕಾಲದಲ್ಲಿ ಇಂತಹ ಯಾವುದೇ ಆಚರಣೆ ಮಾಡದಿರಲು ಕಾರ್ಯಕರ್ತರ ಬಳಿ ಮನವಿ ಮಾಡಿದ್ದಾರೆ.

ಪ್ರಶಾಂತ್ ಕಿಶೋರ್ ನೌಕರಿ ಹೋಯ್ತು

ಮತ ಎಣಿಕೆ ಬಗ್ಗೆ ಮಾತನಾಡಿರುವ ಸಂಭಿತ್ ಪಾತ್ರಾ, ಇಬ್ಬರು ಕೆಲಸ ಕಳೆದುಕೊಳ್ಳುವುದು ಸ್ಪಷ್ಟವಾಗಿದೆ. ಪ್ರಶಾಂತ್‌ ಕಿಶೋರ್‌ರವರ ಕೆಲಸ ಹೋಗುತ್ತದೆ, ಯಾಕೆಂದರೆ ಬಿಜೆಪಿ ಡಬಲ್ ಡಿಜಿಟ್ ಕ್ರಾಸ್‌ ಮಾಡುವುದಿಲ್ಲ, ಹೀಗಾದರೆ ನಾನು ನಿವೃತ್ತಿ ಘೋಷಿಸುತ್ತೇನೆ ಎಂದಿದ್ದರು. ಈಗ ಬಿಜೆಪಿ ಡಬಲ್ ಡಿಜಿಟ್ ಕ್ರಾಸ್ ಆಗಿದೆ. ಫಲಿತಾಂಶ ಗಮನಿಸಿದರೆ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿಯ ಘಟಾನುಘಟಿ ನಾಯಕರಿಗೆ ಸೋಲಾಗುವಂತೆ ಭಾಸವಾಗಿದೆ ಎಂದಿದ್ದಾರೆ..

"

click me!