ಪಶ್ಚಿಮ ಬಂಗಾಳದಲ್ಲಿ 4ನೇ ಹಂತದ ಚುನಾವಣೆ: ಕೇಂದ್ರ ಸಚಿವ ಸೇರಿ 373 ಜನ ಕಣದಲ್ಲಿ!

By Kannadaprabha News  |  First Published Apr 10, 2021, 7:43 AM IST

ಇಂದು ಬಂಗಾಳದಲ್ಲಿ 4ನೇ ಹಂತದ ಚುನಾವಣೆ| 44 ಕ್ಷೇತ್ರಗಳಲ್ಲಿ ಮತದಾನ| ಕೇಂದ್ರ ಸಚಿವ ಸುಪ್ರಿಯೋ ಸೇರಿ 373 ಜನ ಕಣದಲ್ಲಿ| 1.15 ಕೋಟಿ ಮತದಾರರಿಂದ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ


ಕೋಲ್ಕತಾ(ಏ.10): ಟಿಎಂಸಿ-ಬಿಜೆಪಿ-ಎಡರಂಗದ ನಡುವೆ ತ್ರಿಕೋನ ಹಣಾಹಣಿ ಏರ್ಪಟ್ಟಿರುವ ಪಶ್ಚಿಮ ಬಂಗಾಳದ 8 ಹಂತಗಳ ವಿಧಾನಸಭೆ ಚುನಾವಣೆ ಪೈಕಿ ಶನಿವಾರ 4ನೇ ಹಂತದ ಮತದಾನ ನಡೆಯಲಿದೆ. ಕೇಂದ್ರ ಸಚಿವ ಬಾಬುಲ್‌ ಸುಪ್ರಿಯೋ, ಬಂಗಾಳದ ಸಚಿವರಾದ ಪಾರ್ಥ ಚಟರ್ಜಿ ಹಾಗೂ ಅರೂಪ್‌ ವಿಶ್ವಾಸ್‌ ಅವರು ಈ ಹಂತದಲ್ಲಿ ತಮ್ಮ ಭವಿಷ್ಯ ಪರೀಕ್ಷೆಗೆ ಇಳಿದಿದ್ದಾರೆ.

ದಕ್ಷಿಣ 24 ಪರಗಣ, ಅಲಿಪುರದ್ವಾರ, ಕೂಚ್‌ ಬೆಹಾರ್‌ ಜಿಲ್ಲೆ ವ್ಯಾಪ್ತಿಯ 44 ಕ್ಷೇತ್ರಗಳಲ್ಲಿ ನಡೆಯಲಿರುವ ಮತದಾನದಲ್ಲಿ ಒಟ್ಟಾರೆ 1.15 ಕೋಟಿ ಮತದಾರರು ಚುನಾವಣಾ ಅಖಾಡದಲ್ಲಿರುವ 373 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಣಯಿಸಲಿದ್ದಾರೆ.

Latest Videos

undefined

ಸುಗಮ ಮತದಾನಕ್ಕಾಗಿ 15,940 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಸಿಆರ್‌ಪಿಎಫ್‌ನ 789 ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಪ್ರತಿಯೊಂದು ತುಕಡಿಗಳಲ್ಲಿ ಅಧಿಕಾರಿಗಳು ಸೇರಿದಂತೆ 100 ಸಿಬ್ಬಂದಿ ಇದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಪರ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟಾ್ರಧ್ಯಕ್ಷ ಜೆ.ಪಿ ನಡ್ಡಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಭರ್ಜರಿ ಪ್ರಚಾರ ರಾರ‍ಯಲಿಗಳನ್ನು ನಡೆಸಿದ್ದರು.

click me!