'18 ವರ್ಷ ಮೇಲ್ಪಟ್ಟವರು ತಮ್ಮಿಷ್ಟದ ಧರ್ಮ ಆಯ್ಕೆಗೆ ಸ್ವತಂತ್ರರು'

By Suvarna NewsFirst Published Apr 9, 2021, 8:32 PM IST
Highlights

ಹದಿನೆಂಟು ವರ್ಷ ಮೇಲ್ಪಟ್ಟವರು ತಮ್ಮ ಧರ್ಮ ಆಯ್ಕೆ ಮಾಡಿಕೊಳ್ಳಬಹುದು/ ಸಂವಿಧಾನದಲ್ಲಿಯೇ ಇದರ ಸ್ಪಷ್ಟ ಉಲ್ಲೇಖ ಇದೆ/ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ/ ಅರ್ಜಿ ಸಲ್ಲಿಸಿದವರ ತರಾಟೆಗೆ ತೆಗೆದುಕೊಂಡ ನ್ಯಾಯಾಲಯ

ನವದೆಹಲಿ (ಏ. 09) 18 ವರ್ಷಕ್ಕಿಂತ ಮೇಲ್ಪಟ್ಟವರು ತಮ್ಮ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಈ ದೇಶದಲ್ಲಿ ಇದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ಮಾಟ-ಮಮತ್ರ, ವಾಮಾಚಾರ ಮತ್ತು ಧಾರ್ಮಿಕ ಬಲತ್ಕಾರದ ಮತಾಂತರವನ್ನು ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ತಳ್ಳಿಹಾಕಿದೆ.

ನ್ಯಾಯಮೂರ್ತಿ ಆರ್.ಎಫ್. ನಾರಿಮನ್, ಬಿ. ಆರ್. ಗವಾಯಿ ಮತ್ತು ಹೃಷಿಕೇಶ್ ರಾಯ್ ನೇತೃತ್ವದ ನ್ಯಾಯಪೀಠ ಅರ್ಜಿದಾರ ವಕೀಲ ಅಶ್ವಿನ್ ಉಪಾಧ್ಯಾಯ್ ಅವರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣ ಮನವಿಯನ್ನು ಆಲಿಸಿತು.  ಸಂವಿಧಾನ ವಿಧಿ 32ರ ಅಡಿಯಲ್ಲಿ ಯಾವ ರೀತಿಯ ರಿಟ್ ಅರ್ಜಿಯನ್ನು ಹಾಕಿದ್ದೀರಿ, ಇದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ ನೀವು ಎಂದು ಎಚ್ಚರಿಕೆಯನ್ನು ನ್ಯಾಯಾಲಯ ನೀಡಿತು.

ಮಹಾರಾಷ್ಟ್ರದ ಹಫ್ತಾ ಗೇಟ್ ಪ್ರಕರಣ ಎಲ್ಲಿಗೆ ಬಂತು? 

18 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿ ತನ್ನ ಧರ್ಮವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಿತು. ನಂತರ ಅರ್ಜಿಯನ್ನು ಹಿಂಪಡೆಯಲು ಕೋರಿದ ಹಿರಿಯ ವಕೀಲ ಶಂಕರನಾರಾಯಣ ಸರ್ಕಾರ ಮತ್ತು ಕಾನೂನು ಆಯೋಗದ ಪ್ರತಿನಿಧಿಯನ್ನಾಗಿ ತಮ್ಮನ್ನು ಪರಿಗಣಿಸಬೇಕು ಎಂದು ಕೇಳಿಕೊಂಡರು.

ಈ ಬಗೆಯ ಸಂವಿಧಾನ ವಿರೋಧಿ ನಡವಳಿಕೆ ಕಂಡುಬಂದರೆ ಯಾಕೆ ನಿಮ್ಮ ಮೇಲೆ ದಂಡ ವಿಧಿಸಬಾರದು ಎಂದು ಅರ್ಜಿದಾರರನ್ನು ಕೇಳಿದ್ದು ಅಲ್ಲದೆ ನ್ಯಾಯಾಲಯದ  ವೇಳೆ ಹಾಳು ಮಾಡುವುದು ಸರಿ ಅಲ್ಲ ಎಂದು ತಿಳಿಸಿತು.

 

click me!