ಭಾರೀ ಮಳೆಯಿಂದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೆಲಿಕಾಪ್ಟರ್ ಮಂಗಳವಾರ ಉತ್ತರ ಬಂಗಾಳದ ಸೇನಾ ವಾಯುನೆಲೆಯಲ್ಲಿ ತುರ್ತು ಭೂಸ್ಪರ್ಶ mAwide. ಅವರು ಬಾಗ್ದೋಗ್ರಾದಿಂದ ಜಲ್ಪೈಗುರಿಗೆ ಪ್ರಯಾಣ ಮಾಡುತ್ತಿದ್ದರು.
ಕೋಲ್ಕತ್ತಾ(ಜೂ.27): ಹವಾಮಾನ ವೈಪರೀತ್ಯದಿಂದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿದ್ದ ಹೆಲಿಕಾಪ್ಟರ್ ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಉತ್ತರ ಬಂಗಾಳದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಮುಖ್ಯಮಂತ್ರಿಯ ಬೆನ್ನು ಮತ್ತು ಮೊಣಕಾಲಿಗೆ ಸಣ್ಣ ಗಾಯವಾಗಿದ್ದು, ಅವರನ್ನು ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಭಾರೀ ಮಳೆಯಿಂದಾಗಿ ಉತ್ತರ ಬಂಗಾಳದ ಸಲಗರಾದಲ್ಲಿರುವ ಸೇನಾ ವಾಯುನೆಲೆಯಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದೆ. ಪಂಚಾಯತ್ ಸಭೆಯ ನಂತರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬಾಗ್ದೋಗ್ರಾದಿಂದ ಜಲಪೈಗುರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಆ ಬಳಿಕ ರಸ್ತೆ ಮಾರ್ಗದ ಮೂಲಕವಾಗಿ ಮಮತಾ ಬ್ಯಾನರ್ಜಿ ಪ್ರಯಾಣ ಮಾಡಿದರು. ಮಧ್ಯಾಹ್ನದ ವೇಳೆಗೆ ಮಮತಾ ಬ್ಯಾನರ್ಜಿ ಕೋಲ್ಕತ್ತಾಗೆ ಆಗಮಿಸಿದರು. ನೇರವಾಗಿ ಅವರನ್ನು ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ನೈಋತ್ಯ ಮಾನ್ಸೂನ್ ದೆಹಲಿ, ಮುಂಬೈ, ಪಶ್ಚಿಮ ಬಂಗಾಳ ಮತ್ತು ದೇಶಾದ್ಯಂತ ಇತರ ಸ್ಥಳಗಳಲ್ಲಿ ಮುಂದುವರೆದಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಭಾನುವಾರ ತಿಳಿಸಿದೆ.
ಮಮತಾ ಬ್ಯಾನರ್ಜಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ, ಅಪಾಯದಿಂದ ಪಾರು!
ನಿಧಾನಗತಿಯ ಆರಂಭವನ್ನು ಹೊಂದಿದ್ದ ಮಾನ್ಸೂನ್ ಈಗ ವೇಗವಾಗಿ ಪ್ರಗತಿ ಸಾಧಿಸಿದೆ, ಮಹಾರಾಷ್ಟ್ರದ ಕೆಲವು ಭಾಗಗಳು, ಸಂಪೂರ್ಣ ಕರ್ನಾಟಕ, ಕೇರಳ, ತಮಿಳುನಾಡು, ಛತ್ತೀಸ್‌ಗಢ, ಒಡಿಶಾ, ಈಶಾನ್ಯ ಭಾರತ, ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ, ಪೂರ್ವ ಉತ್ತರ ಪ್ರದೇಶ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಮಳೆ ಬಿರುಸಲಾಗಿದೆ. , ಉತ್ತರಾಖಂಡ, ಹಿಮಾಚಲ ಪ್ರದೇಶದ ಹೆಚ್ಚಿನ ಭಾಗಗಳು ಮತ್ತು ಹರಿಯಾಣದ ಕೆಲವು ಭಾಗಗಳಲ್ಲೂ ಭಾರಿ ಮಳೆಯಾಗಿದೆ ಎಂದು ಇಲಾಖೆ ತಿಳಿಸಿದೆ.
ಬಿಜೆಪಿ ಪರ ಬಿಎಸ್‌ಎಫ್ ಕೆಲಸ; ಮತ ಹಾಕದಂತೆ ಗಡಿ ಭಾಗದ ಜನರಿಗೆ ಬೆದರಿಕೆ: ಮಮತಾ ಬ್ಯಾನರ್ಜಿ ಆರೋಪ
ಹೆಲಿಕಾಪ್ಟರ್ ತುರ್ತು ಭೂಸ್ಪರ್ಶಕ್ಕೆ ಹವಮಾನ ವೈಪರೀತ್ಯವೇ ಕಾರಣ ಎಂದು ಮುಖ್ಯಮಂತ್ರಿ ಕಚೇರಿ ಕೂಡ ದೃಢಪಡಿಸಿದೆ. ಕಾಲು ಹಾಗೂ ಮೊಣಕಾಲಿಗೆ ಸ್ಪಲ್ಪ ಹೆಚ್ಚಿನ ಪೆಟ್ಟು ಬಿದ್ದಿದೆ ಎಂದು ತಿಳಿಸಿದೆ. ಮಂಗಳವಾರ ಪಂಚಾಯತ್ ಚುನಾವಣೆ ಪ್ರಚಾರ ಮುಗಿಸಿ ಜಲ್ಪೈಗುರಿ ಜಿಲ್ಲೆಯ ಕ್ರಾಂತಿಯಿಂದ ಬಾಗ್ದೋರಾಕ್ಕೆ ಹೆಲಿಕಾಪ್ಟರ್ ಮೂಲಕ ಹಿಂತಿರುಗುತ್ತಿದ್ದರು. ಆ ಸಮಯದಲ್ಲಿ ಮಳೆ ಮತ್ತು ಮಿಂಚಿನಿಂದ ಆಕಾಶವು ಕತ್ತಲೆಯಾಯಿತು. ಹೆಲಿಕಾಪ್ಟರ್ ಪೈಲಟ್ ಪ್ರಯಾಣ ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಬೈಕುಂಠಪುರ ಕಾಡಿನಲ್ಲಿ ಕೆಳಗೆ ಇಳಿಯಲು ಸಾಧ್ಯವಾಗಲಿಲ್ಲ. ನಂತರ ಹೆಲಿಕಾಪ್ಟರ್ ಸಿಲಿಗುರಿ ಬಳಿಯ ಶಾಲುಗ್ರಾ ಬಳಿಯ ಸೇವಕ್ ವಾಯುನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಿತು. ಅಲ್ಲಿಂದ ಮಮತಾ ಕಾರಿನಲ್ಲಿ ಬಾಗ್ದೋಗ್ರಾ ವಿಮಾನ ನಿಲ್ದಾಣಕ್ಕೆ ತೆರಳಿದರು.