ಪಸ್ಮಂದಾ ಮುಸ್ಲಿಮರನ್ನು ಅಸ್ಪಶೃರನ್ನಾಗಿ ನೋಡಲಾಗ್ತಿದೆ, ಅವರ ಜೊತೆ ನಾವಿದ್ದೇವೆ: ಪ್ರಧಾನಿ ಮೋದಿ

Published : Jun 27, 2023, 05:37 PM ISTUpdated : Jun 27, 2023, 05:40 PM IST
ಪಸ್ಮಂದಾ ಮುಸ್ಲಿಮರನ್ನು ಅಸ್ಪಶೃರನ್ನಾಗಿ ನೋಡಲಾಗ್ತಿದೆ, ಅವರ ಜೊತೆ ನಾವಿದ್ದೇವೆ: ಪ್ರಧಾನಿ ಮೋದಿ

ಸಾರಾಂಶ

ಸಾಮಾನ್ಯವಾಗಿ ತಮ್ಮ ಭಾಷಣದ ವೇಳೆ ಪಸ್ಮಂದಾ ಮುಸ್ಲಿಮರ ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ, ಭೋಪಾಲ್‌ನಲ್ಲಿ ಮಾತನಾಡುವ ವೇಳೆ ಪಸ್ಮಂದಾ ಮುಸ್ಲಿಂ ಸಮುದಾಯದ ಕೆಲ ಜಾತಿಗಳನ್ನು ವಿವರಿಸಿದರು. ಇದನ್ನು ಕೇಳಿ ಸ್ವತಃ ಮುಸ್ಲಿಮರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.  

ನವದೆಹಲಿ (ಜೂ.27): ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಬೂತ್ ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ಮತ್ತು ಸಂವಾದ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಕಾರ್ಯಕರ್ತರಿಗೆ ಗೆಲುವಿನ ಮಂತ್ರವನ್ನು ನೀಡಿದರು ಮತ್ತು ಅದೇ ಸಮಯದಲ್ಲಿ 2024 ರ ಚುನಾವಣೆಗೆ ಪಕ್ಷದ ಕಾರ್ಯಸೂಚಿಯನ್ನು ನಿಗದಿಪಡಿಸಿದರು. ಮುಸ್ಲಿಂ ಸಹೋದರ ಸಹೋದರಿಯರನ್ನು ನೋಡಿದರೆ ವೋಟ್ ಬ್ಯಾಂಕ್ ರಾಜಕಾರಣ ಮಾಡುವವರಿಂದ ಪಸ್ಮಾಂದ ಮುಸ್ಲಿಮರು ಬದುಕುವುದು ಕಷ್ಟಕರವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಮುಸ್ಲಿಮರಲ್ಲೇ ಅತ್ಯಂತ ಕೆಳವರ್ಗದವರಾಗಿರುವ ಅವರ ಬದುಕನ್ನು ಮೇಲ್ವರ್ಗದವರು ವೋಟ್‌ಬ್ಯಾಂಕ್‌ಗಾಗಿ ನಾಶ ಮಾಡಿದ್ದಾರೆ. ಪಸ್ಮಂದಾ ಮುಸ್ಲಿಮರನ್ನು ಅಸ್ಪಶೃರನ್ನಾಗಿ ನೋಡಲಾಗುತ್ತಿದೆ. ಆದರೆ, ಇವರ ದನಿಯನ್ನು ಕೇಳಲು ತಮ್ಮ ಸರ್ಕಾರ ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಇದರ ಬೆನ್ನಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಪಸ್ಮಂದಾ ಮುಸ್ಲಿಮರಲ್ಲಿರುವ ವಿವಿಧ ಜಾತಿಗಳನ್ನು ತಿಳಿಸಿದಾಗ, ಸ್ವತಃ ಮುಸ್ಲಿಮರೇ ಮೋದಿಗೆ ಪಸ್ಮಂದಾರಲ್ಲಿರುವ ಜಾತಿಯ ಮಾಹಿತಿ ಕೇಳಿ ಅಚ್ಚರಿ ಪಟ್ಟಿದ್ದಾರೆ.

ಅವರದೇ ಧರ್ಮದ ಒಂದು ವಿಭಾಗವು ಪಸ್ಮಾಂದ ಮುಸ್ಲಿಮರನ್ನು ತುಂಬಾ ಶೋಷಣೆ ಮಾಡಿದೆ ಎಂದು ಮೋದಿ ಹೇಳಿದ್ದಾರೆ. ಆದರೆ ಇದು ದೇಶದಲ್ಲಿ ಎಂದಿಗೂ ಚರ್ಚೆಯಾಗಲಿಲ್ಲ. ಅವರ ಧ್ವನಿಯನ್ನು ಕೇಳಲು ಯಾರೂ ಸಿದ್ಧರಿಲ್ಲ. ಪಸ್ಮಾಂದ ಮುಸ್ಲಿಮರಾಗಿರುವವರಿಗೆ ಇಂದಿಗೂ ಸಮಾನ ಸ್ಥಾನಮಾನ ಸಿಕ್ಕಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮೋಚಿ, ಭಠಿಯಾರ, ಜೋಗಿ, ಮದರಿ, ಜುಲಹ, ಉದ್ದಾ, ತೇಜ, ಲಹರಿ, ಹಲ್ದಾರ್‌ನಂತಹ ಪಸ್ಮಂದಾ ಜಾತಿಗಳನ್ನು ಉಲ್ಲೇಖಿಸಿದ ಅವರು, ಅವರ ವಿರುದ್ಧ ತುಂಬಾ ತಾರತಮ್ಯ ಮಾಡಲಾಗಿದ್ದು, ಅನೇಕ ತಲೆಮಾರುಗಳು ತಮ್ಮ ನಷ್ಟವನ್ನು ಅನುಭವಿಸಬೇಕಾಗಿದೆ ಎಂದು ಹೇಳಿದರು.

ಈ ಕುರಿತಂತೆ ಟ್ವೀಟ್‌ ಮಾಡಿರುವ ಅಲೋಕ್‌ ಭಟ್‌, 'ಭಾರತದ ಬಗ್ಗೆ ಮೋದಿಯವರಿಗೆ ಬಗ್ಗೆ ಇರುವ ಅತ್ಯಂತ ಆಳವಾದ ತಿಳಿವಳಿಕೆಯ ಮಟ್ಟವಾಗಿದೆ. 1947ರ ನಂತರ ಭಾರತೀಯ ಮುಸ್ಲಿಮರ ವಾಸ್ತವತೆಯನ್ನು ಅತ್ಯಂತ ಸ್ಪಷ್ಟ ಹಾಗೂ ನಿಸ್ಸಂದಿಗ್ಧವಾಗಿ ವಿವರಿಸಿದ ಭಾರತದ ಯಾವುದೇ ಒಬ್ಬ ನಾಯಕರ ಭಾಷಣವನ್ನು ನನಗೆ ತೋರಿಸಿ. ಬಹುಶಃ ಫಯಾಜ್‌ ಅಹ್ಮದ್‌ ಇಂದು ಪ್ರಧಾನಮಂತ್ರಿಯವರ ಭಾಷಣಗಳನ್ನು ಕೇಳಿ ಸಂತೋಷ ಪಡುತ್ತಾರೆ' ಎಂದು ಅವರಿಗೆ ಟ್ಯಾಗ್‌ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಪಸ್ಮಂದಾ ಮುಸ್ಲಿಮರ ಹಕ್ಕುಗಳ ಹೋರಾಟಗಾರ ಹಾಗೂ ವೃತ್ತಿಯಲ್ಲಿ ವೈದ್ಯರಾಗಿರುವ ಫಯಾಜ್‌ ಅಹ್ಮದ್‌, 'ನಿಜವಾಗಿಯೂ ಇಂದು ನಾನು ಬಹಳ ಭಾವುಕನಾಗಿದ್ದೇನೆ. ದೇಶಜ್ ಪಸ್ಮಾಂದ ಎಂದು ಕರೆಯುವ ಭಾರತೀಯ ಮೂಲದ ಮುಸ್ಲಿಮರ ನೋವು ಮತ್ತು ದುಃಖದ ಬಗ್ಗೆ ಮಾತನಾಡಿದ ಬಹುಶಃ ಭಾರತದ ಮೊದಲ ಪ್ರಧಾನಿ ನರೇಂದ್ರ ಮೋದಿ' ಎಂದು ಟ್ವೀಟ್ ಮಾಡಿದ್ದಾರೆ.

Lok Sabha election 2024; ‘ಪಸ್ಮಾಂದಾ’ ಮುಸ್ಲಿಮರ ಮೇಲೆ ಬಿಜೆಪಿ ಕಣ್ಣು!

ಬಿಜೆಪಿ ಸರ್ಕಾರ ಪಸ್ಮಂದಾ ಮುಸ್ಲಿಮರಿಗೆ ಪಕ್ಕಾ ಮನೆ, ಉಚಿತ ಆರೋಗ್ಯ ಸೌಲಭ್ಯಗಳನ್ನೂ ನೀಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಅವರನ್ನೂ ವಿಶ್ವಾಸದಿಂದ ಸಂಪರ್ಕಿಸಿ ಅವರ ಗೊಂದಲ ನಿವಾರಿಸುತ್ತೇವೆ. ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮತ್ತು ತ್ರಿವಳಿ ತಲಾಖ್ ಬಗ್ಗೆಯೂ ಪ್ರಧಾನಿ ಮೋದಿ ಪ್ರಸ್ತಾಪಿಸಿದರು. ಪ್ರತಿಪಕ್ಷಗಳು ಯುಸಿಸಿ ಬಗ್ಗೆ ಗೊಂದಲ ಮೂಡಿಸುತ್ತಿವೆ ಎಂದು ಆರೋಪಿಸಿದ ಅವರು, ಅವರ ಎಲ್ಲಾ ಗೊಂದಲಗಳನ್ನು ನಿವಾರಿಸಲು ನಾವು ಪ್ರಯತ್ನಿಸುತ್ತೇವೆ ಎಂದರು.

ಬೆಂಗಳೂರು-ಧಾರವಾಡ ವಂದೇ ಭಾರತ್‌ ರೈಲಿಗೆ ಪ್ರಧಾನಿ ಮೋದಿ ಚಾಲನೆ, ಕರ್ನಾಟಕದ 2ನೇ ಎಕ್ಸ್‌ಪ್ರೆಸ್ ರೈಲು ಹೆಗ್ಗಳಿಕೆ!

ಯಾರಿವರು ಪಸ್ಮಂದಾ ಮುಸ್ಲಿಮರು: ಮುಸ್ಲಿಮರಲ್ಲಿ, ಪಸ್ಮಂದಾ ಮುಸ್ಲಿಮರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಮತ್ತು ಶೈಕ್ಷಣಿಕವಾಗಿ ಬಹಳ ಹಿಂದುಳಿದಿದ್ದಾರೆ. ದೇಶದ ಒಟ್ಟು ಜನಸಂಖ್ಯೆಯ ಶೇ. 85ರಷ್ಟು ಮುಸ್ಲಿಮರು ಪಸ್ಮಂದಾರಾಗಿದ್ದರೆ, ಶೇ.15ರಷ್ಟು ಮೇಲ್ಜಾತಿ ಮುಸ್ಲಿಮರಿದ್ದಾರೆ. ದಲಿತ ಮತ್ತು ಹಿಂದುಳಿದ ಮುಸ್ಲಿಮರು ಪಸ್ಮಂದಾ ವರ್ಗದ ಅಡಿಯಲ್ಲಿ ಬರುತ್ತಾರೆ. ಗಮನಾರ್ಹವೆಂದರೆ, ಮುಸ್ಲಿಂ ಸಮುದಾಯವೂ ಹಿಂದೂಗಳಂತೆ ಜಾತಿ ವ್ಯವಸ್ಥೆಯನ್ನು ಹೊಂದಿದೆ. ಪಸ್ಮಂದಾ ಮೂಲತಃ ಪರ್ಷಿಯನ್ ಪದ, ಇದರರ್ಥ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಜನರು ಎಂದರ್ಥ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!