ಬಂಗಾಳ CM ಮಮತಾ ಬ್ಯಾನರ್ಜಿ ಸಹೋದರ ಕೊರೋನಾಗೆ ಬಲಿ!

By Suvarna News  |  First Published May 15, 2021, 2:33 PM IST
  • ಪಶ್ಚಿಮ ಬಂಗಾಳದಲ್ಲಿ ಕೊರೋನಾ ಪ್ರಕರಣ ಗಣನೀಯ ಏರಿಕೆ
  • ಸಿಎಂ ಮಮತಾ ಬ್ಯಾನರ್ಜಿ ತಮ್ಮ ಕೊರೋನಾಗೆ ಬಲಿ
  • ಬಂಗಾಳದಲ್ಲಿ 2 ವಾರ ಲಾಕ್‌ಡೌನ್ ಜಾರಿ

ಕೋಲ್ಕತಾ(ಮೇ.15): ಕೊರೋನಾ ವೈರಸ್ ಪ್ರಕರಣ ಗಣನೀಯ ಏರಿಕೆಯಾಗುತ್ತಿದೆ. ಇದೀಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಆಶಿಮ್ ಬ್ಯಾನರ್ಜಿ ಕೊರೋನಾಗೆ ಬಲಿಯಾಗಿದ್ದಾರೆ. ಕೋಲ್ಕತಾದ ಮೆಡಿಕಲ್ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಶಿಮ್ ಬ್ಯಾನರ್ಜಿ ಇಂದು(ಮೇ.15) ಕೊರೋನಾದಿಂದ ನಿಧನರಾಗಿದ್ದಾರೆ.

ಕೊರೋನಾ ಪಾಸಿಟಿವಿಟಿ ರೇಟ್‌ ಹೆಚ್ಚಳ: ಡೇಂಜರ್‌ ಝೋನ್‌ನಲ್ಲಿ ರಾಜ್ಯದ 15 ಜಿಲ್ಲೆಗಳು..!

Tap to resize

Latest Videos

ಕೊರೋನಾ ದೃಢಪಟ್ಟ ಕಾರಣ ಒಂದು ತಿಂಗಳ ಹಿಂದೆ ಆಸ್ಪತ್ರೆ ದಾಖಲಾಗಿದ್ದ ಆಶಿಮ್ ಬ್ಯಾನರ್ಜಿಗೆ ಇತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ 60 ವರ್ಷದ ಆಶಿಮ್ ಬ್ಯಾನರ್ಜಿ ನಿಧನರಾಗಿದ್ದಾರೆ. ಆಶಿಮ್ ಬ್ಯಾನರ್ಜಿಗೆ ಕೊರೋನಾ ಅಂಟಿಕೊಂಡ ಕಾರಣ ಅವರ ಆರೋಗ್ಯ ಸ್ಥಿತಿ ಕ್ಷೀಣಿಸಿತ್ತು. ಸತತ ಚಿಕಿತ್ಸೆ ನೀಡಿದರೂ ಫಲಕಾರಿಯಾಗಿಲ್ಲ ಎಂದು ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ವೈದ್ಯ ಡಾ. ಅಲೋಕ್ ರಾಯ್ ಹೇಳಿದ್ದಾರೆ.

ಕೊರೋನಾ ಕಠಿಣ ನಿರ್ಬಂಧವಿರುವ ಕಾರಣ ಮಾರ್ಗಸೂಚಿ ಪ್ರಕಾರ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗುವುದು ಎಂದು ಮಮತಾ ಬ್ಯಾನರ್ಜಿ ಕುಟುಂಬಸ್ಥರು ತಿಳಿಸಿದ್ದಾರೆ. 

ಪಶ್ಚಿಮ ಬಂಗಾಳದಲ್ಲಿ ಕೊರೋನಾ ವೈರಸ್ ಪ್ರಕರಣ ಆತಂಕದ ವಾತಾವರಣ ಸೃಷ್ಟಿಸಿದೆ. ಹೀಗಾಗಿ ನಾಳೆಯಿಂದ(ಮೇ.16)  2 ವಾರಗಳ ಕಾಲ ಪಶ್ಚಿಮ ಬಂಗಾಳದಲ್ಲಿ ಲಾಕ್‌ಡೌನ್ ಜಾರಿಯಾಗಲಿದೆ. ಕಳೆದೆ 24 ಗಂಟೆಯಲ್ಲಿ ಪಶ್ಚಿಮ ಬಂಗಾಳದಲ್ಲಿ 20,846 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿದೆ. ಇನ್ನು 136 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.

click me!