BJP ನಾಯಕಿಯಿಂದ ಮತ್ತೋರ್ವ ಬಿಜೆಪಿ ಮುಖಂಡನ ವಿರುದ್ಧ ಗಂಭೀರ ಆರೋಪ

Published : Feb 21, 2021, 08:51 AM IST
BJP ನಾಯಕಿಯಿಂದ ಮತ್ತೋರ್ವ ಬಿಜೆಪಿ ಮುಖಂಡನ ವಿರುದ್ಧ ಗಂಭೀರ ಆರೋಪ

ಸಾರಾಂಶ

ಬಿಜೆಪಿ ನಾಯಕಿಯೋರ್ವರು ತಮ್ಮದೇ ಪಕ್ಷದ ಮುಖಂಡರೋರ್ವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ವಿರುದ್ಧ ಮಹಾ ಸಂಚಿನ ಬಗ್ಗೆ ಆರೋಪಿಸಿದ್ದಾರೆ. 

ಕೋಲ್ಕತಾ (ಫೆ.21): ಡಗ್ಸ್‌ ಪ್ರಕರಣದಲ್ಲಿ ಬಂಧಿತರಾಗಿರುವ ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿ ಪಮೇಲಾ ಗೋಸ್ವಾಮಿ,  ಪಕ್ಷದ ಸಹೋದ್ಯೋಗಿಯೊಬ್ಬರು ತಮ್ಮ ವಿರುದ್ಧ ಸಂಚು ರೂಪಿಸಿರುವುದಾಗಿ ಆರೋಪಿಸಿದ್ದಾರೆ. 

ಕೊಕೇನ್‌ ಇಟ್ಟುಕೊಂಡ ಕಾರಣಕ್ಕೆ ಪಮೇಲಾ ಗೋಸ್ವಾಮಿ ಅವರನ್ನು ಶುಕ್ರವಾರ ದಕ್ಷಿಣ ಕೋಲ್ಕತಾದ ನ್ಯೂ ಅಲಿಪೋರ್‌ದಲ್ಲಿ ಬಂಧಿಸಲಾಗಿತ್ತು. 

ಮಾದಕ ವಸ್ತು ಹೊಂದಿದ್ದ ಬಿಜೆಪಿ ಯುವ ನಾಯಕಿ ಅರೆಸ್ಟ್

ವಿಚಾರಣೆಯ ವೇಳೆ, ಬಿಜೆಪಿಯ ರಾಕೇಶ್‌ ಸಿಂಗ್‌ ಎನ್ನುವವರು ತಮ್ಮನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸಿದ್ದು, ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂದಿದ್ದಾರೆ.

 ಅಲ್ಲದೇ ಈ ಪ್ರಕರಣವನ್ನು ಸಿಐಡಿಗೆ ವಹಿಸಬೇಕು ಎಂದು ಪಮೇಲಾ ಹೇಳಿದ್ದಾರೆ. ಆದರೆ, ಈ ಆರೋಪವನ್ನು ರಾಕೇಶ್‌ ಸಿಂಗ್‌ ತಳ್ಳಿಹಾಕಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗೆಳತಿಯ ತಡೆಯಲು ಕಾರಿನ ರೂಫ್‌ ಮೇಲೆ ಹತ್ತಿದ.. ಆದರೆ ಆಕೆಯ ಪ್ರಿಯಕರ ಆತನ ಮೇಲೆ ಕಾರು ಹತ್ತಿಸಿದ
IAS: ಭ್ರಷ್ಟ ವ್ಯವಸ್ಥೆ ನಿದ್ದೆಗೆಡಿಸಿದ ಭಾರತದ ಆ ಐರನ್ ಐಎಎಸ್' ಆಫೀಸರ್ಸ್; ಈ ಲಿಸ್ಟ್‌ನಲ್ಲಿದೆ ಒಂದು ಕನ್ನಡದ ಕಲಿ!