
ಕೋಲ್ಕತಾ (ಮೇ.28): ಪಶ್ಚಿಮ ಬಂಗಾಳ(West bengal)ದ ಬದುರಿಯಾ(Baduriya)ದಲ್ಲಿರುವ ತೃಣಮೂಲ ಕಾಂಗ್ರೆಸ್ ಕಚೇರಿ(TMC office) ಬಳಿ ಭೂಗತವಾಗಿ ಹಲವು ಚೀಲಗಳಲ್ಲಿ ತುಂಬಿಡಲಾಗಿದ್ದ 500 ರು. ಮುಖಬೆಲೆಯ ನೋಟುಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಸರ್ಕಾರದ ಪರಿಹಾರ ಯೋಜನೆಯಲ್ಲಿ ಅವ್ಯವಹಾರ ಮತ್ತು ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಟಿಎಂಸಿ ಹಿರಿಯ ನಾಯಕ ಮತ್ತು ಬದುರಿಯಾ ಪುರಸಭೆ ಅಧ್ಯಕ್ಷ ದೀಪಂಕರ್ ಭಟ್ಟಾಚಾರ್ಯ ಬಂಧನ(Deepankar Bhattacharya arrested) ಬಳಿಕ ನಡೆದ ಶೋಧ ಕಾರ್ಯಾಚರಣೆ ವೇಳೆ ಹಣದ ಚೀಲಗಳು ಪತ್ತೆಯಾಗಿವೆ.
ಮಂಗಳವಾರ ತಡರಾತ್ರಿ ಪಕ್ಷದ ಕಚೇರಿ ಸಮೀಪ ಅನುಮಾನಸ್ಪದ ಚಟುವಟಿಕೆ ಕಂಡುಬಂದ ಹಿನ್ನೆಲೆ ಬುಧವಾರ ಪೊಲೀಸರು ಟಿಎಂಸಿ ಕಚೇರಿ ಬಳಿ ಶೋಧ ನಡೆಸಿದ್ದಾರೆ. ಈ ವೇಳೆ ಹೂತಿಟ್ಟಿದ್ದ 500 ರು.ನೋಟುಗಳ ಬಂಡಲ್‌ಗಳನ್ನು ಪತ್ತೆಹಚ್ಚಿದ್ದು, 4 ದೊಡ್ಡ ಚೀಲಗಳನ್ನು ಪೊಲೀಸರು ಹೊತ್ತುಕೊಂಡು ಹೋಗುತ್ತಿರುವ ದೃಶ್ಯಗಳು ಸೆರೆಯಾಗಿದೆ. ಕೋಟ್ಯಂತರ ಹಣವಿರುವ ಶಂಕೆ ವ್ಯಕ್ತವಾಗಿದ್ದು, ನಿಖರ ಮೊತ್ತ ಪತ್ತೆಯಾಗಿಲ್ಲ.
#BreakingNews | Cash buried underground near a TMC party office?
Police recovered four bags allegedly stuffed with ₹500 currency bundles during search operations after the arrest of the TMC chairman of Baduria in an irregularities case@KamalikaSengupt gets you more details… pic.twitter.com/5tn7JLhmpk— News18 (@CNNnews18) May 27, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ