ಕುಂಭಮೇಳದ ವಿಚಿತ್ರ ಸಾಧುಗಳು: 32 ವರ್ಷಗಳಿಂದ ಕೈ ಎತ್ತಿರುವ ಸಾಧು, ಸ್ನಾನವನ್ನೇ ಮಾಡದ ಬಾಬಾ!

By Bhavani Bhat  |  First Published Jan 6, 2025, 7:36 PM IST

12 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮೇಳಕ್ಕೆ ವಿವಿಧ ಸಾಧು-ಸಂತರು- ಬಾಬಾಗಳು ಆಗಮಿಸುತ್ತಿದ್ದಾರೆ. 32 ವರ್ಷಗಳಿಂದ ಕೈ ಎತ್ತಿರುವ ಸಾಧು ಅಮರ್ ಭಾರತಿ ಮತ್ತು 32 ವರ್ಷಗಳಿಂದ ಸ್ನಾನ ಮಾಡದ ಛೋಟಾ ಬಾಬಾ ಇವರಲ್ಲಿ ಪ್ರಮುಖರು.


12 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮೇಳಕ್ಕೆ ದಿನಗಣನೆ ಪ್ರಾರಂಭಗೊಂಡಿದೆ. ಈ ನಡುವೆ ಮಹಾಕುಂಭ ಮೇಳಕ್ಕೆ ದೇಶದ ವಿವಿಧ ಕಡೆಗಳಿಂದ ಚಿತ್ರವಿಚಿತ್ರ ಸಾಧು ಸಂತರು ಪುಣ್ಯ ಸ್ನಾನ ಕೈಗೊಳ್ಳುವುದಕ್ಕ ಈಗಾಗಲೇ ಉತ್ತರಪ್ರದೇಶದ ಪ್ರಯಾಗ್ ರಾಜ್ (Prayagraj)ನತ್ತ ತಮ್ಮ ಪ್ರಯಾಣ ಬೆಳೆಸಿದ್ದಾರೆ. ಈ ಸಾಧು ಸಂತರಲ್ಲಿ ಹಲವರು ತರದ ವ್ಯಕ್ತಿತ್ವಗಳಿದ್ದು, ಇವರಲ್ಲಿ ಒಬ್ಬೊಬ್ಬರದ್ದು ಒಂದೊಂದು ವಿಶೇಷತೆಗಳಿವೆ. ಇವರಲ್ಲಿ ನಾಗಾ ಸಾಧುಗಳೂ ಇದ್ದಾರೆ.

ಅಂಥವರಲ್ಲೊಬ್ಬರು ಸಾಧು ಅಮರ್‌ ಭಾರತಿ. ಮೂವತ್ತೆರಡು ವರ್ಷಗಳ ಹಿಂದೆ, ಸಾಧು ಅಮರ್ ಭಾರತಿ ಅವರು ತಮ್ಮ ಸುತ್ತಲಿನ ಪ್ರಪಂಚದಲ್ಲಿರುವ ಜಗಳ ಮತ್ತು ದ್ವೇಷದಿಂದ ಬೇಸತ್ತು, ಇದನ್ನು ಹೋಗಲಾಡಿಸಲು ತಾನೊಂದು ಬಗೆಯ ತಪಸ್ಸು ಮಾಡಬೇಕು ಎಂದುಕೊಂಡರು. ತಮ್ಮ ಬಲಗೈಯನ್ನು ಎತ್ತಿ ಹಿಡಿದರು. ಅಂದಿನಿಂದ ಅವರು ಒಮ್ಮೆಯೂ ಕೈ ಕೆಳಗಿಳಿಸಲಿಲ್ಲ. ಈಗ ಅವರನ್ನು ʼಸಾಧು ಅಮರ ಭಾರತಿ ಊರ್ಧ್ವಬಾಹುʼ ಎಂದೇ ಕರೆಯುತ್ತಾರೆ. ಊರ್ಧ್ವಬಾಹು ಎಂದರೆ ಮೇಲೆತ್ತಿದ ಕೈ.

Tap to resize

Latest Videos

ವಿಶ್ವಶಾಂತಿಗಾಗಿ ಇದು ಅನಿವಾರ್ಯವಾಗಿತ್ತು ಎಂದು ಅವರು ಹೇಳುತ್ತಾರೆ. ಅವರ ಪಂಥದ ಕೆಲವು ಸಾಧುಗಳು ಅವರ ನಂಬಿಕೆಯನ್ನು ತಾವೂ ಅಳವಡಿಸಿಕೊಂಡಿದ್ದಾರೆ- ಅವರು ಯುದ್ಧ ಮತ್ತು ಹಿಂಸಾಚಾರದ ವಿರುದ್ಧ ಪ್ರತಿಭಟಿಸಲು ತಮ್ಮ ಬಲಗೈಯನ್ನು ಎತ್ತಿ ಹಿಡಿದಿದ್ದಾರೆ. ಹೀಗೆ ಕಳೆದ 25, 13 ಅಥವಾ ಏಳು ವರ್ಷಗಳಿಂದ ಕೈ ಎತ್ತಿಹಿಡಿದಿರುವ ಕೆಲವರು ಇದ್ದಾರೆ. ಅಮರ ಭಾರತಿ ಅವರು 7ನೇ ವಯಸ್ಸಿನಲ್ಲಿ ಸಾಧು ಆದರು. 55 ವರ್ಷಗಳಿಂದ ಸಾಧುಗಳಾಗಿದ್ದಾರೆ. ಕುಂಭಮೇಳಕ್ಕೆ ಬರುವ ಹೆಚ್ಚಿನ ಸಾಧುಗಳಂತೆ ಅವರು ತಮ್ಮ ಪೂರ್ವಾಶ್ರಮದ ಬಗ್ಗೆ ವಿವರಗಳನ್ನು ಚರ್ಚಿಸಲು ಇಷ್ಟಪಡುವುದಿಲ್ಲ.

ಇನ್ನೊಬ್ಬರು ಇಂಥವರೇ ಸಾಧು- ಗಂಗಾಪುರಿ ಮಹಾರಾಜ್ ಅಥವಾ ಛೋಟಾ ಬಾಬಾ (Chhotu Baba) ಎಂದು ಕರೆಯಿಸಿಕೊಳ್ಳುತ್ತಿರುವ ಸಾಧು. ಇವರು ಕಳೆದ 32 ವರ್ಷಗಳಿಂದ ಒಂದು ಬಾರಿಯೂ ಸ್ನಾನವನ್ನೇ ಮಾಡಿಲ್ಲವಂತೆ! ಹಾಗಾಗಿ ಈ ಬಾರಿಯೂ ಈ ಛೋಟೂ ಬಾಬಾ ಪುಣ್ಯ ಸ್ನಾನದಲ್ಲಿ ಪಾಲ್ಗೊಳ್ಳುವುದಿಲ್ಲವಂತೆ! 57 ವರ್ಷ ಪ್ರಾಯದ ಈ ಛೋಟಾ ಬಾಬ ತನ್ನ ಒಂದು ಕೋರಿಕೆ ಈಡೇರುವವರೆಗೂ ಸ್ನಾನವನ್ನೇ ಮಾಡುವುದಿಲ್ಲ ಎಂಬ ವಿಶಿಷ್ಟ ವ್ರತವನ್ನು ಕೈಗೊಂಡಿದ್ದಾರಂತೆ. ಆದರೆ ತನ್ನ ಆ ಕೋರಿಕೆ ಏನೆಂಬುದನ್ನು ಮಾತ್ರಾ ಈ ಬಾಬಾ ಬಹಿರಂಗಪಡಿಸಿಲ್ಲ.

‘ನಾನು 3 ಅಡಿ 8 ಇಂಚು ಎತ್ತರವಿದ್ದು, ನನಗೀಗ 57 ವರ್ಷ ಪ್ರಾಯ. ನನಗಿಲ್ಲಿ ಬಂದು ತುಂಬಾ ಸಂತೋಷವಾಗಿದೆ. ನೀವೆಲ್ಲಾ ಇಲ್ಲಿಗೆ ಬಂದಿರುವುದಕ್ಕೂ ನನಗೆ ತುಂಬಾ ಸಂತೋಷವಾಗುತ್ತಿದೆ. ಆದರೆ, ನಾನು ಈ ಬಾರಿಯ ಕುಂಭ ಮೇಳದಲ್ಲಿ ಪುಣ್ಯ ಸ್ನಾನವನ್ನು ಕೈಗೊಳ್ಳುವುದಿಲ್ಲ ಯಾಕಂದರೆ, ನನ್ನದೊಂದು ಕೋರಿಕೆ ಕಳೆದ 32 ವರ್ಷಗಳಿಂದ ಈಡೇರಿಲ್ಲ. ನನ್ನ ಕೋರಿಕೆ ಈಡೇರಿದ ಬಳಿಕವೇ ನಾನು ಸ್ನಾನವನ್ನು ಮಾಡುವುದು’ ಎಂದು ಈ ಬಾಬಾ ಹೇಳಿಕೊಂಡಿದ್ದಾರೆ.

ಸನ್ಯಾಸಿ ಆಗಬೇಕು ಅನಿಸ್ತಿದೆಯಾ? ಹಾಗಾದರೆ ನಿಮಗೀಗ ಈ ಮಹಾದೆಸೆ!

ಗಂಗಾಪುರಿ ಮಹಾರಾಜ್ ಕಾಮಾಕ್ಯ ಪೀಠದಿಂದ ಇಲ್ಲಿಗೆ ಬಂದಿದ್ದಾರೆ. 12 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳವನ್ನು ಕಣ್ತುಂಬಿಕೊಳ್ಳಲು ಬಂದಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಈ ಮೇಳವನ್ನು ಅವರು ಆತ್ಮಗಳು ಸಂಗಮಿಸುವ ‘ಮಿಲನ ಮೇಳ’ ಎಂದು ಕರೆದಿದ್ದಾರೆ. ಆದರೆ ಮಹಾಕುಂಭ ಮೇಳದಲ್ಲಿ ನಡೆಯುವ ‘ಶಾಹಿ ಸ್ನಾನ’ದಲ್ಲಿ ಮಾತ್ರ ಈ ಛೋಟಾ ಬಾಬಾ ಭಾಗಿಯಾಗುವುದಿಲ್ಲ. 

ಪ್ರಮುಖ ಸ್ನಾನವೆಂದೇ ಕರೆಯಲಾಗುವ ಶಾಹಿ ಸ್ನಾನ ಜ. 14ರ ಮಕರ ಸಂಕ್ರಮಣ, ಜನವರಿ 29 (ಮೌನಿ ಅಮಾವ್ಯಾಸೆ) ಮತ್ತು ಫೆ. 3 (ವಸಂತ ಪಂಚಮಿ) ದಿನಗಳಂದು ಸಂಪನ್ನಗೊಳ್ಳಲಿದೆ. ಜ.13 ರಿಂದ ಫೆ. 26ರವರೆಗೆ ನಡೆಯಲಿರುವ ಈ ಮಹಾ ಕುಂಭ ಮೇಳದಲ್ಲಿ ಪಾಲ್ಗೊಳ್ಳಲು ದೇಶ ವಿದೇಶಗಳ ಕೋಟ್ಯಂತರ ಜನ ಪ್ರಯಾಗ್ ರಾಜ್‌ಗೆ ಆಗಮಿಸುವ ನಿರೀಕ್ಷೆಯಿದೆ. ಹಾಗಾಗಿ ಭಕ್ತಾದಿಗಳು ಮತ್ತು ಪ್ರವಾಸಿಗರ ಸುರಕ್ಷತೆಗಾಗಿ ಜಿಲ್ಲಾಡಳಿತವು ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಪುರುಷರಲ್ಲಿ ವೀರ್ಯಶಕ್ತಿ ಕಡಿಮೆಯಾಗೋಕೆ ಜಾತಕದಲ್ಲಿ ಹೀಗಿರೋದೇ ಕಾರಣ! ಪರಿಹಾರ ಇಲ್ಲಿದೆ
 

click me!