ಭಾರೀ ಮಳೆಯ ಮುನ್ಸೂಚನೆ: ಎರಡು ರಾಜ್ಯಗಳಲ್ಲಿ ರೆಡ್‌ ಅಲರ್ಟ್!

By Kannadaprabha NewsFirst Published May 27, 2020, 12:02 PM IST
Highlights

ಎರಡು ರಾಜ್ಯಗಳಲ್ಲಿ ರೆಡ್‌ ಅಲರ್ಟ್| ಭಾರೀ ಮಳೆಯ ಮುನ್ಸೂಚನೆ| ಬಂಗಾಳ ಕೊಲ್ಲಿಯಿಂದ ಭಾರೀ ವೇಗದಲ್ಲಿ ಬೀಸುತ್ತಿರುವ ವಾಯುವ್ಯ ಮಾರುತಗಳು

ನವದೆಹಲಿ(ಮೇ.27): ಮೇ 26 ರಿಂದ 28ರ ವರೆಗೆ ಈಶಾನ್ಯ ರಾಜ್ಯಗಳಾದ ಅಸ್ಸಾಂ ಹಾಗೂ ಮೇಘಾಲಯದಲ್ಲಿ ಭಾರೀ ಮಳೆ ಸುರಿಯುವ ಸಂಭವವಿದ್ದು, ಹಾಗಾಗಿ ಈ ಎರಡೂ ರಾಜ್ಯಗಳಲ್ಲಿ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಬಂಗಾಳ ಕೊಲ್ಲಿಯಿಂದ ವಾಯುವ್ಯ ಮಾರುತಗಳು ಭಾರೀ ವೇಗದಲ್ಲಿ ಬೀಸುತ್ತಿದ್ದು, ಇವುಗಳು ಭಾರೀ ಮಳೆಯನ್ನು ಹೊತ್ತು ತರಲಿದೆ ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Due to prevailing dry northwesterly winds over plains of northwest India, Central India & adjoining interior parts of eastern India, present heat wave
conditions very likely to continue to prevails mainly during next 2 days.
Color Coded warning Attached. pic.twitter.com/CPE1lS5WUa

— IMD Weather (@IMDWeather)

ಇದೇ ವೇಳೆ ಜೂನ್‌ ತಿಂಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗಲಿದೆ. ಅಂಫಾನ್‌ ಪ್ರಚಂಡ ಮಾರುತದಿಂದ ಮಾನ್ಸೂನ್‌ ಮಾರುತಗಳು ಈ ಬಾರಿ ಏ.5 ಕ್ಕೆ ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದೆ.

click me!