
ಅಹಮದಾಬಾದ್(ಮೇ.27): ಕಳೆದ 70 ವರ್ಷಗಳಿಂದ ಅನ್ನಹಾರವಿಲ್ಲದೇ ಜೀವಿಸುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದ ಗುಜರಾತ್‌ನ ಪ್ರಹ್ಲಾದ್ ಜಾನಿ ಅಲಿಯಾಸ್ ಚುರ್ನಿವಾಲಾ ಮಾತಾಜಿ (90) ಸೋಮವಾರ ಗಾಂಧಿನಗರ ಜಿಲ್ಲೆಯಲ್ಲಿ ಚರಾಡ ಗ್ರಾಮದಲ್ಲಿ ನಿಧನರಾಗಿದ್ದಾರೆ.
ಕಳೆದ 70 ವರ್ಷಗಳಿಂದ ತಾನು ನಿರಾಹಾರಿಯಾಗಿದ್ದು, ದೇವತೆಗಳು ಅನ್ನ ನೀರು ನೀಡುತ್ತಿದ್ದಾರೆ. 2003 ಹಾಗೂ 2010ರಲ್ಲಿ ವಿಜ್ಞಾನಿಗಳು ನನ್ನನ್ನು ಪರೀಕ್ಷೆ ಮಾಡಿ ಇದನ್ನು ದೃಢ ಪಡಿಸಿದ್ದಾರೆ ಎಂದು ಅವರು ಹೇಳಿಕೊಂಡಿದ್ದರು.
1 ಸಾವಿರ ಟನ್ ಚಿನ್ನ ಹೂತಿಟ್ಟ ಕನಸು ಬಿದ್ದಿದ್ದ ಶೋಭನ್ ಸರ್ಕಾರ್ ನಿಧನ!
ರಾಜ್ಯದಲ್ಲಿ ಅವರಿಗೆ ಭಾರೀ ದೊಡ್ಡ ಅಭಿಮಾನಿ ಬಳಗವಿದ್ದು, 14ನೇ ವಯಸ್ಸಿನಿಂದಲೇ ಅವರು ಅನ್ನ ನೀರು ತ್ಯಜಿಸಿ ಸರ್ವಸಂಗ ಪರಿತ್ಯಾಗಿಯಾಗಿದ್ದಾರೆ ಎಂದು ಅವರ ಅಭಿಮಾನಿಗಳು ಹೇಳಿಕೊಳ್ಳುತ್ತಾರೆ.
ಮೃತದೇಹವನ್ನು ಬನಸ್ಕಾಂತ ಜಿಲ್ಲೆಯ ಅಂಬಾಜಿ ದೇಗುಲದ ಬಳಿ ಇರುವ ಅವರ ಗುಹೆ (ಆಶ್ರಮ)ಗೆ ತರಲಾಗಿದೆ. ಮೂರು ದಿನ ಸಾರ್ವಜನಿಕ ಸಂದರ್ಶನಕ್ಕೆ ಇಟ್ಟಬಳಿಕ ಗುರುವಾರ ಅವರನ್ನು ಸಮಾಧಿ ಮಾಡಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ