
ನವದೆಹಲಿ : ಮೇ 6 ಮತ್ತು 7ರಂದು ಭಾರತ ನಡೆಸಿದ ಆಪರೇಷನ್ ಸಿಂದೂರದಿಂದ ಪಾಕಿಸ್ತಾನ ಇನ್ನೂ ಚೇತರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ, ‘ಸಿಂದೂರದ ವೇಳೆ ನಾವು ಭೂದಾಳಿಗೂ ಸಿದ್ಧರಿದ್ದೆವು’ ಎಂದು ಸೇನಾ ಮುಖ್ತಸ್ಥ ಉಪೇಂದ್ರ ದ್ವಿವೇದಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದ್ವಿವೇದಿ, ‘ಭಾರತೀಯ ಸೇನೆಯನ್ನು ಸ್ಥಳಾಂತರಿಸಿ ಭೂದಾಳಿಗೂ ನಾವು ಸಿದ್ಧರಿದ್ದೆವು. ನಮ್ಮ ಪ್ರತಿದಾಳಿಯು ಚಾಣಾಕ್ಷ, ನಿಖರ ಮತ್ತು ಯಶಸ್ವಿಯಾಗಿದ್ದು, ಭಾರತ ದಿಟ್ಟವಾಗಿ ಉತ್ತರಿಸಬಹುದು ಎಂಬುದನ್ನು ಸಾಬೀತುಪಡಿಸಿತು’ ಎಂದು ಹೇಳಿದರು.
ಜತೆಗೆ, ‘ಪಾಕ್ ನಾಯಕರು ಅಣುದಾಳಿಯ ಬೆದರಿಕೆ ಒಡ್ಡುತ್ತಿದ್ದಾರೆಯೇ ಹೊರತು ಉಭಯ ದೇಶಗಳ ಡಿಜಿಎಂಒ ನಡುವೆ ಆ ಬಗ್ಗೆ ಯಾವುದೇ ಮಾತುಕತೆ ನಡೆದಿರಲಿಲ್ಲ’ ಎಂದರು.
’ಆಪರೇಷನ್ ಸಿಂದೂರ ಇನ್ನೂ ನಿಂತಿಲ್ಲ. ನಿರಂತರ ಕಣ್ಗಾವಲು, ಸಂಪರ್ಕ, ವಿಶ್ವಾಸ ವೃದ್ಧಿಯ ಅಗತ್ಯವಿದೆ. ಮೂಲಸೌಕರ್ಯ ನಿರ್ಮಾಣವೂ ನಡೆಯುತ್ತಿದೆ. ಪಾಕಿಸ್ತಾನ ದುಸ್ಸಾಹಸಕ್ಕೆ ಮುಂದಾದರೆ ಕಠಿಣ ಕ್ರಮಕ್ಕೆ ಸಿದ್ಧರಿದ್ದೇವೆ’ ಎಂದರು.
ಇತ್ತೀಚೆಗಷ್ಟೇ ಪಾಕಿಸ್ತಾನದ ಕಡೆಯಿಂದ 5 ಡ್ರೋನ್‌ಗಳು ಅಂತಾರಾಷ್ಟ್ರೀಯ ಗಡಿ ಮತ್ತು ಎಲ್‌ಎಸಿ ದಾಟಿ ಬಂದದ್ದು ಪತ್ತೆಯಾಗಿತ್ತು. ಈ ಬಗ್ಗೆಯೂ ಮಾತನಾಡಿರುವ ದ್ವಿವೇದಿ, ‘ಇಂತಹ ಚಟುವಟಿಕೆಗಳನ್ನು ಸಹಿಸಲಾಗದು. ತಮ್ಮ ಡ್ರೋನ್‌ಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವಂತೆ ಪಾಕಿಸ್ತಾನಕ್ಕೆ ಎಚ್ಚರಿಸಿದ್ದೇವೆ. ನಮ್ಮ ಸೇನೆ ಸದಾ ಎಚ್ಚರಿಕೆಯಿಂದಿದೆ’ ಎಂದಿದ್ದಾರೆ.
ಇದಲ್ಲದೆ, ‘ಚೀನಾ ಜತೆಗಿನ ಪ್ರಸ್ತುತ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಪರಿಸ್ಥಿತಿ ಸ್ಥಿರವಾಗಿದೆ’ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ