ಹಿಂದೂ ಮುಸ್ಲಿಂ ಬೇಧ ನಮಗಿಲ್ಲ, ಸಂಗಾತಿ ಜೊತೆ ಬಾಳಲು ಸ್ವತಂತ್ರ: ಮಹತ್ವದ ತೀರ್ಪು ಪ್ರಕಟ!

By Suvarna News  |  First Published Nov 24, 2020, 5:31 PM IST

ಹಿಂದೂ-ಮುಸ್ಲಿಂ ಎಂಬ ಜಾತಿ ಅಂತರ ನಮಗಿಲ್ಲ. ವಯಸ್ಸಿಗೆ ಬಂದ ವ್ಯಕ್ತಿಗಳಿಗ ಯಾವುದೇ ಧರ್ಮ, ಜಾತಿಯ ಸಂಗಾತಿ ಜೊತೆ ಬಾಳಲು ಕಾನೂನು ಅವಕಾಶ ಮಾಡಿಕೊಡುತ್ತದೆ ಎಂದು ಅಲಹಾಬಾದ್ ಹೈಕೋರ್ಟ್ ಲವ್ ಜಿಹಾದ್ ಕುರಿತು ಮಹತ್ವದ ತೀರ್ಪು ಪ್ರಕಟಿಸಿದೆ.


ಉತ್ತರ ಪ್ರದೇಶ(ನ.24): ದೇಶದಲ್ಲಿ ಲವ್ ಜಿಹಾದ್ ಕುರಿತು ಭಾರಿ ಕೋಲಾಹಲವೇ ಸೃಷ್ಟಿಯಾಗುತ್ತಿದೆ. ಕೆಲ ರಾಜ್ಯಗಳು ಲವ್ ಜಿಹಾದ್ ವಿರುದ್ಧ ಪ್ರಬಲ ಕಾನೂನು ಜಾರಿಗೊಳಿಸುವ ಪ್ರಯತ್ನದಲ್ಲಿದೆ. ಇದರ ಬೆನ್ನಲ್ಲೇ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಮದುವೆಗಾಗಿ ಮತಾಂತರ ಒಪ್ಪಲು ಸಾಧ್ಯವಿಲ್ಲ; ಮಹತ್ವದ ಆದೇಶ ನೀಡಿದ ಹೈಕೋರ್ಟ್!.

Tap to resize

Latest Videos

ಒಂದು ಪ್ರಕರಣದ ಕುರಿತು ಅಲಹಾಬಾದ್ ಹೈಕೋರ್ಟ್ ಇದೀಗ ಎರಡನೇ ತೀರ್ಪುು ನೀಡಿದೆ.  ನವೆಂಬರ್ 11 ರಂದು ಅಲಹಬಾದಾ ಹೈಕೋರ್ಟ್ 14 ಪುಟಗಳ ಆದೇಶವನ್ನು ಮತ್ತೊಮ್ಮೆ ಅವಲೋಕನ ಮಾಡಿ ಹೊಸ ತೀರ್ಪುು ನೀಡಿದೆ. ಕೋರ್ಟ್‌ಗೆ ಹಿಂದೂ ಅಥವಾ ಮುಸ್ಲಿಂ ಎಂದಿಲ್ಲ, ಅನ್ಯಧರ್ಮಿಯರು ಅವರವರ ಬಾಳ ಸಂಗಾತಿ ಜೊತೆ ಬಾಳಲು ಕಾನೂನು ಅವಕಾಶ ನೀಡುತ್ತದೆ ಎಂದು ಕೋರ್ಟ್ ತೀರ್ಪು ನೀಡಿದೆ.

ಹತ್ರಾಸ್ ಪ್ರಕರಣ: ಸುಪ್ರೀಂ ಮಹತ್ವದ ಆದೇಶ!..

ಸಲಾಮತ್ ಅನ್ಸಾರಿ ಹಾಗೂ ಪ್ರಿಯಾಂಕ ಖರವಾರ್ ಪ್ರಕರಣ ಕುರಿತು ಅಲಹಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹಿಂದೂ ಹಾಗೂ ಮುಸ್ಲಿಂ ಕುಟುಂಬದ ಇವರಿಬ್ಬರು 2019ರಲ್ಲಿ ವಿವಾಹವಾಗಿದ್ದರು. ಮದುವೆ ಬಳಿಕ ಸಲಾಮತ್ ಅನ್ಸಾರಿ ತನ್ನ ಪತ್ನಿ ಪ್ರಿಯಾಂಕ ಖರವಾರ್ ಹೆಸರನ್ನು ಆಲಿಯಾ ಎಂದು ಬದಲಿಸಿದ್ದರು. 

ಇದರ ವಿರುದ್ಧ ಪ್ರಿಯಾಂಕ ಖರವಾರ ತಂದೆ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿದ್ದರು. ಈ ಕುರಿತು ನವೆಂಬರ್ 11 ರಂದು ಅಲಹಾಬಾದ್ ಹೈಕೋರ್ಟ್,  ಮದುವೆಗಾಗಿ ಮತಾಂತರ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿತ್ತು. ಇಷ್ಟೇ ಅಲ್ಲ ಈ ಪ್ರಕರಣದ ವಿಚಾರಣೆಯನ್ನ ಮುಂದೂಡಿತ್ತು. ಇದೀಗ ಅಲಹಾಬಾದ್ ಹೈಕೋರ್ಟ್, ಸಲಾಮತ್ ಅನ್ಸಾರಿ ಹಾಗೂ ಪ್ರಿಯಾಂಕ ವಯಸ್ಕರಾಗಿದ್ದಾರೆ. ಹೀಗಾಗಿ ಇವರ ಕುಟುಂಬದ ಮಧ್ಯೆ ಕೋರ್ಟ್ ಪ್ರವೇಶಿಸುವುದಿಲ್ಲ. ಕಾನೂನು ಪ್ರಕರಾ ಅವರಿಗೆ ಎಲ್ಲಾ ಭದ್ರತೆ ನೀಡಲಾಗುವುದು ಎಂದಿದೆ.

ಸಲಾಮತ್ ಅನ್ಸಾರಿ ಹಾಗೂ ಪ್ರಿಯಾಂಕ ಖರವಾರ ಅವರನ್ನು ಕೋರ್ಟ್ ಹಿಂದೂ ಮುಸ್ಲೀಂ ಎಂದುು ನೋಡುವುದಿಲ್ಲ. ಅವರಿಗೆ ಶಾಂತಿಯುತವಾಗಿ ಬಾಳುವ ಸ್ವಾತಂತ್ರ್ಯವಿದೆ. ಈ ಸ್ವಾತಂತ್ರ್ಯಕ್ಕೆ ಯಾರು ಅಡ್ಡಿಪಡಿಸುವಂತಿಲ್ಲ, ಇದಕ್ಕೆ ಸರ್ಕಾರ ಕೂಡ ಹೊರತಾಗಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.

click me!