ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ಸಜ್ಜಾದ ಬಿಜೆಪಿಗೆ ಶಾಕ್ ಕೊಟ್ಟ ನ್ಯಾಯಾಲಯ!

Published : Nov 24, 2020, 04:18 PM ISTUpdated : Nov 24, 2020, 04:21 PM IST
ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ಸಜ್ಜಾದ ಬಿಜೆಪಿಗೆ ಶಾಕ್ ಕೊಟ್ಟ ನ್ಯಾಯಾಲಯ!

ಸಾರಾಂಶ

ತನ್ನದೇ ತೀರ್ಪನ್ನು ವಜಾಗೊಳಿಸಿದ ಅಲಹಾಬಾದ್‌ ಹೈಕೋರ್ಟ್‌ನಿಂದ ಹೊಸ ತೀರ್ಪು| ವಯಸ್ಕರು ಒಂದೇ ಲಿಂಗ ಅಥವಾ ಅನ್ಯ ಲಿಂಗಕ್ಕೆ ಸೇರಿರಲಿ, ಅವರು ಒಟ್ಟಿಗೆ ಬಾಳಲು ಕಾನೂನು ಅವಕಾಶ ನೀಡುತ್ತದೆ ಎಂದ ಕೋರ್ಟ್| ಲವ್ ಜಿಹಾದ್ ವಿರುದ್ಧ ಸಮರ ಸಾರಿರುವ ರಾಜ್ಯ ಸರ್ಕಾರಗಳಿಗೆ ಶಾಕ್

ಅಲಹಾಬಾದ್‌(ನ.24) ಲವ್ ಜಿಹಾದ್ ಹೆಸರಲ್ಲಿ ನಡೆಯುತ್ತಿರುವ ಮತಾಂತರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಠಿಣ ಕಾನೂನು ಜಾರಿಗೊಳಿಸಲು ಉತ್ತರ ಪ್ರದೇಶ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯ ಸರ್ಕಾರಗಳು ಮುಂದಾಗಿದ್ದವು. ಕರ್ನಾಟಕದಲ್ಲೂ ಇಂತಹುದ್ದೊಂದು ಜಾರಿಗೊಳಿಸಬೇಕೆಂಬ ಕೂಗು ಜೋರಾಗಿತ್ತು. ಹೀಗಿರುವಾಗಲೇ ಅಲಹಾಬಾದ್ ಹೈಕೋರ್ಟ್‌ ತಾನು ಈ ಹಿಂದೆ ನೀಡಿದ್ದ 'ಕೇವಲ ವಿವಾಹದ ಉದ್ದೇಶಕ್ಕಾಗಿ ನಡೆಯುವ ಧಾರ್ಮಿಕ ಮತಾಂತರ ಸ್ವೀಕಾರಾರ್ಹವಲ್ಲ' ಎಂಬ ತನ್ನದೇ ತೀರ್ಪನ್ನು ರದ್ದುಗೊಳಿಸಿದೆ. ಅಲ್ಲದೇ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ಓರ್ವ ವ್ಯಕ್ತಿಯ ಮೂಲಭೂತ ಹಕ್ಕು ಎನ್ನುವ ಮೂಲಕ ಸರ್ಕಾರಗಳಿಗೆ ಶಾಕ್ ನೀಡಿದೆ.

ಲವ್ ಜಿಹಾದ್; 7 ತಿಂಗಳು ದೈಹಿಕ ಸಂಪರ್ಕ.. ಮದುವೆ ಎಂದಾಗ ಬಯಲಾದ ಬಂಡವಾಳ!

ಹೌದು ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೊಳಿಸುವ ಸಿಎಂ ಯೋಗಿ ಆದಿತ್ಯನಾಥ್‌ ನಿರ್ಧಾರಕ್ಕೆ ಪೂರಕ ಎಂಬಂತೆ ಕಳೆದ ತಿಂಗಳು ಅಲಹಾಬಾದ್ ಹೈಕೋರ್ಟ್​ನ ಏಕಸದಸ್ಯ ಪೀಠ ಕೇವಲ ಮದುವೆಯ ಉದ್ದೇಶದಿಂದ ಮತಾಂತರವಾಗುವುದು ಸರಿಯಲ್ಲ ಎಂಬ ಮಹತ್ವದ ತೀರ್ಪನ್ನು ನೀಡಿತ್ತು. ಆದರೀಗ ತನ್ನದೇ ತೀರ್ಪನ್ನು ರದ್ದುಗೊಳಿಸಿದ ಹೈಕೋರ್ಟ್ ಇಬ್ಬರು ವಯಸ್ಕರು ಒಂದೇ ಲಿಂಗ ಅಥವಾ ಅನ್ಯ ಲಿಂಗಕ್ಕೆ ಸೇರಿರಲಿ, ಅವರು ಒಟ್ಟಿಗೆ ಬಾಳಲು ಕಾನೂನು ಅವಕಾಶ ನೀಡುತ್ತದೆ ಎಂದು ಕೋರ್ಟ್ ತಿಳಿಸಿದೆ. 

ಯಾವುದೇ ವ್ಯಕ್ತಿ ಅಥವಾ ಕುಟುಂಬವು ಅವರ ಶಾಂತಿಯುತ ಜೀವನದ ಮಧ್ಯೆ ಹಸ್ತಕ್ಷೇಪ ಮಾಡಲಾಗದು. ಇಬ್ಬರು ವಯಸ್ಕರ ನಡುವಿನ ಸಂಬಂಧವನ್ನು ಸರ್ಕಾರ ಕೂಡ ಆಕ್ಷೇಪಿಸಲು ಸಾಧ್ಯವಿಲ್ಲ.  ತಮ್ಮ ಸಂಗಾತಿಗಳನ್ನು ಆಯ್ಕೆ ಮಾಡುವಲ್ಲಿ ವಯಸ್ಕರು ಸ್ವತಂತ್ರರಾಗಿದ್ದಾರೆ. ಆದ್ದರಿಂದ ಕೇವಲ ಮದುವೆಯ ಉದ್ದೇಶದಿಂದ ಮತಾಂತರವಾಗುವುದು ಮಾನ್ಯವಲ್ಲವೆನ್ನುವುದು ಸರಿಯಲ್ಲ. ಇದು ಅಷ್ಟೊಂದು ಉತ್ತಮ ಕಾನೂನು ಅಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

‘ಬ್ರಾಹ್ಮಣ, ವೈಶ್ಯ, ಶೂದ್ರ ಯುವತಿಯರ ಲವ್‌ ಜಿಹಾದ್‌ಗೆ 25 ಲಕ್ಷ!’

ಸದ್ಯ ಹೈಕೋರ್ಟ್‌ನ ಈ ತೀರ್ಪು ಲವ್ ಜಿಹಾದ್ ಕಾನೂನು ಜಾರಿಗೊಳಿಸಲು ಮುಂದಾದ ಸರ್ಕಾರಗಳನ್ನು ಚಿಂತೆಗೀಡು ಮಾಡಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ