ಮುಸ್ಲಿಮರ ಜನಸಂಖ್ಯೆ ಕಡಿಮೆಯಾಗ್ತಿದೆ; ನಮ್ಮಿಂದಲೇ ಹೆಚ್ಚು ಕಾಂಡೋಮ್‌ ಬಳಕೆ: Asaduddin Owaisi

By BK AshwinFirst Published Oct 9, 2022, 1:33 PM IST
Highlights

ಮುಸ್ಲಿಂ ಜನಸಂಖ್ಯೆ ಹೆಚ್ಚಾಗುತ್ತಿಲ್ಲ. ಬದಲಿಗೆ ಕುಸಿಯುತ್ತಿದೆ. ಕಾಂಡೋಮ್‌ಗಳನ್ನು ಯಾರು ಹೆಚ್ಚಾಗಿ ಬಳಸುತ್ತಿದ್ದಾರೆ? ನಾವು. ಮೋಹನ್ ಭಾಗವತ್ ಈ ಬಗ್ಗೆ ಮಾತನಾಡುವುದಿಲ್ಲ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥರ ಜನಸಂಖ್ಯಾ ಅಸಮತೋಲನ ಹೇಳಿಕೆಗೆ ಅಸಾದುದ್ದೀನ್ ಓವೈಸಿ ತಿರುಗೇಟು ನೀಡಿದ್ದಾರೆ. 

ದೇಶದಲ್ಲಿ ಇತ್ತೀಚೆಗೆ "ಜನಸಂಖ್ಯೆಯ ಅಸಮತೋಲನ" (Population Imbalance) ವಾಗುತ್ತಿದೆ ಎಂಬ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರ ಹೇಳಿಕೆಗೆ ವಿರುದ್ಧವಾಗಿ ಅಸಾದುದ್ದೀನ್ ಓವೈಸಿ (Asaduddin Owaisi) ಪ್ರತಿಕ್ರಿಯೆ ನೀಡಿದ್ದಾರೆ.  ಮುಸ್ಲಿಂ ಜನಸಂಖ್ಯೆಯು ಕಡಿಮೆಯಾಗುತ್ತಿದೆ ಮತ್ತು ಈ ಸಮುದಾಯದ ಜನರು ಗರ್ಭನಿರೋಧಕಗಳನ್ನು (Contraceptives) ಹೆಚ್ಚು ಬಳಸುತ್ತಾರೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. "ಚಿಂತೆ ಮಾಡಬೇಡಿ. ಮುಸ್ಲಿಂ (Muslim) ಜನಸಂಖ್ಯೆ ಹೆಚ್ಚಾಗುತ್ತಿಲ್ಲ. ಬದಲಿಗೆ ಕುಸಿಯುತ್ತಿದೆ. ಕಾಂಡೋಮ್‌ಗಳನ್ನು (Condom) ಯಾರು ಹೆಚ್ಚಾಗಿ ಬಳಸುತ್ತಿದ್ದಾರೆ? ನಾವು. ಮೋಹನ್ ಭಾಗವತ್ ಈ ಬಗ್ಗೆ ಮಾತನಾಡುವುದಿಲ್ಲ" ಎಂದು ಅಸಾದುದ್ದೀನ್‌ ಓವೈಸಿ ಹೇಳಿದರು. ಹಾಗೂ, "ಜನಸಂಖ್ಯೆಯ ಕುರಿತಾದ ಸಮಗ್ರ ನೀತಿಗಾಗಿ ಭಾಗವತ್ ಕರೆ ನೀಡಿದರು ಮತ್ತು ಅದು ಎಲ್ಲರಿಗೂ ಸಮಾನವಾಗಿ ಅನ್ವಯವಾಗುತ್ತದೆ ಎಂದು ಹೇಳಿದರು" ಎಂದೂ ಅಸಾದುದ್ದೀನ್‌ ಓವೈಸಿ ಅಭಿಪ್ರಾಯ ಪಟ್ಟಿದ್ದಾರೆ.

ಹೆಚ್ಚುತ್ತಿರುವ ಜನಸಂಖ್ಯೆಯು ಹೊರೆಯಾಗದಂತೆ ನೋಡಿಕೊಳ್ಳಬೇಕು ಹಾಗೂ ಅದನ್ನು ಸಂಪನ್ಮೂಲವಾಗಿ ಬಳಸಬಹುದು ಎಂದು ಸಮಗ್ರ ಜನಸಂಖ್ಯಾ ನೀತಿಗೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್ ಕರೆ ನೀಡಿದ ಕೆಲವು ದಿನಗಳ ನಂತರ ಅಸಾದುದ್ದೀನ್ ಓವೈಸಿ ಈ ಹೇಳಿಕೆಗಳನ್ನು ನೀಡಿದ್ದಾರೆ. ವಾರ್ಷಿಕ ಆರ್‌ಎಸ್‌ಎಸ್ ವಿಜಯದಶಮಿ ಉತ್ಸವವನ್ನು ಉದ್ದೇಶಿಸಿ ಮಾತನಾಡಿದ್ದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್‌ ಭಾಗವತ್, “ಜನಸಂಖ್ಯೆ ನಿಯಂತ್ರಣ ಮತ್ತು ಧರ್ಮಾಧಾರಿತ ಜನಸಂಖ್ಯೆಯ ಸಮತೋಲನವು ಇನ್ನು ಮುಂದೆ ನಿರ್ಲಕ್ಷಿಸಲಾಗದ ಪ್ರಮುಖ ವಿಷಯವಾಗಿದೆ. ಆದ್ದರಿಂದ ಸಮಗ್ರ ಜನಸಂಖ್ಯಾ ನೀತಿಯನ್ನು ತರಬೇಕು ಮತ್ತು ಸಮಾನವಾಗಿ ಅನ್ವಯಿಸಬೇಕು. ಆಗ ಮಾತ್ರ ಜನಸಂಖ್ಯಾ ನಿಯಂತ್ರಣಕ್ಕೆ ಸಂಬಂಧಿಸಿದ ನಿಯಮಗಳು ಫಲಿತಾಂಶಗಳನ್ನು ನೀಡುತ್ತವೆ’’ ಎಂದು ಹೇಳಿದ್ದರು. 

ಇದನ್ನು ಓದಿ: RSS ದಸರಾ ಕಾರ್ಯಕ್ರಮಕ್ಕೆ ಇದೇ ಮೊದಲ ಬಾರಿ ಮುಖ್ಯ ಅತಿಥಿಯಾದ ಮಹಿಳೆ

ಇನ್ನೊಂದೆಡೆ, ಅಲ್ಪಸಂಖ್ಯಾತರನ್ನು ಅಧಿಕಾರಿಗಳು ಬೀದಿಗಳಲ್ಲಿ ಥಳಿಸಿದ ಇತ್ತೀಚಿನ ವೈರಲ್ ವಿಡಿಯೋ ವಿರುದ್ಧವೂ ಅಸಾದುದ್ದೀನ್‌ ಓವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನೀವು ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಬಹುದಿತ್ತು, ಆದರೆ ನೀವು ಅವರ ಗೌರವವನ್ನು ಹಾಳು ಮಾಡಲು ರಸ್ತೆಗಳಲ್ಲೇ ನೇರವಾಗಿ ಹೊಡೆದಿದ್ದೀರಿ. 30 ಕೋಟಿ ಮುಸ್ಲಿಮರು ಇರುವ 133 ಕೋಟಿ ಜನಸಂಖ್ಯೆಯುಳ್ಳ ದೇಶದಲ್ಲಿ ಮುಸ್ಲಿಮರ ಘನತೆ ಬೀದಿ ನಾಯಿಗಿಂತ ಕಡೆಯಾಗಿದೆ’’ ಎಂದು ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ. 

ಅಲ್ಲದೆ, ಜನಸಂಖ್ಯೆಯ ನಿಯಂತ್ರಣದ ಜೊತೆಗೆ, ಧಾರ್ಮಿಕ ಆಧಾರದ ಮೇಲೆ ಸಮತೋಲನ ಸಹ ಮುಖ್ಯವಾಗಿದ್ದು, ಇದನ್ನು ನಿರ್ಲಕ್ಷಿಸಲು ಸಾದ್ಯವಿಲ್ಲ ಎಂದೂ ಅಸಾದುದ್ದೀನ್ ಓವೈಸಿ ಹೇಳಿದರು. ಇನ್ನು, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ - 5 ಅನ್ನು ಉಲ್ಲೇಖಿಸಿದ ಅಸಾದುದ್ದೀನ್ ಓವೈಸಿ, ಮುಸ್ಲಿಮರ ಒಟ್ಟು ಫಲವತ್ತತೆ ದರ (Total Fertility Rate) (ಟಿಎಫ್ಆರ್) (TFR) ಅತ್ಯಧಿಕ ಕುಸಿತವನ್ನು ಕಂಡಿದೆ ಎಂದು ಹೇಳಿದರು.

ಇದನ್ನೂ ಓದಿ: ಜನಸಂಖ್ಯಾ ನಿಯಂತ್ರಣದ ಸಂದೇಶ ಕೊಟ್ಟಿತಾ RSS?

ಜತೆಗೆ, ಕಾಣೆಯಾದ ಹಿಂದೂ ಹೆಣ್ಣು ಮಕ್ಕಳ ಬಗ್ಗೆ ಮಾತನಾಡಲು ಎಐಎಂಐಎಂ ನಾಯಕ ಓವೈಸಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌ ಅವರಿಗೆ ಸವಾಲು ಹಾಕಿದರು. "ನಾನು ಮೋಹನ್ ಭಾಗವತ್ ಅವರನ್ನು ಕೇಳಲು ಬಯಸುತ್ತೇನೆ. 2000 ರಿಂದ 2019 ರವರೆಗೆ ನಮ್ಮ ಹಿಂದೂ ಸಹೋದರಿಯರ ಲಕ್ಷಾಂತರ ಹೆಣ್ಣು ಮಕ್ಕಳು ಕಾಣೆಯಾಗಿದ್ದಾರೆ. ಇದು ಸರ್ಕಾರದ ಅಂಕಿ ಅಂಶವಾಗಿದೆ. ಆದರೆ ಅವರು ಅದರ ಬಗ್ಗೆ ಮಾತನಾಡುವುದಿಲ್ಲ" ಎಂದು ಅವರು ಹೇಳಿದರು.

click me!