ಕಣ್ಣಮುಂದೆ ಹೆಂಡ್ತಿ, ಮೊಮ್ಮಗ ಕೊಚ್ಚಿಕೊಂಡು ಹೋಗ್ತಿದ್ದರೂ ರಕ್ಷಿಸೋಕೆ ಆಗಲಿಲ್ಲ; ವಯನಾಡ್‌ನಲ್ಲಿ ಕನ್ನಡಿಗನ ಅಳಲು

By Sathish Kumar KH  |  First Published Jul 31, 2024, 11:14 AM IST

ವಯನಾಡ್‌ಗೆ ಹೋಗಿ ಮೊಂಡಕೈ ಗ್ರಾಮದಲ್ಲಿ ವಾಸವಿದ್ದ ದೇವರಾಜ್ ಅವರ ಕುಟುಂಬದ ಇಬ್ಬರು ಸದಸ್ಯರು ರಣಭೀಕರ ಪ್ರವಾಹ ಮತ್ತು ಗುಡ್ಡ ಕುಸಿತದ ಆರ್ಭಟಕ್ಕೆ ಬಲಿಯಾಗಿದ್ದಾರೆ.


ಬೆಂಗಳೂರು (ಜು.31): ಮೈಸೂರಿನಿಂದ ವಯನಾಡ್‌ಗೆ ಹೋಗಿ ಮೊಂಡಕೈ ಗ್ರಾಮದಲ್ಲಿ ವಾಸವಿದ್ದ ದೇವರಾಜ್ ಅವರ ಕುಟುಂಬದ ಇಬ್ಬರು ಸದಸ್ಯರು ರಣಭೀಕರ ಪ್ರವಾಹ ಮತ್ತು ಗುಡ್ಡ ಕುಸಿತದ ಆರ್ಭಟಕ್ಕೆ ಬಲಿಯಾಗಿದ್ದಾರೆ.

ವಯನಾಡ್‌ನ ಮಂಡಕೈನಲ್ಲಿ ಸಂಭವಿಸಿದ ಭೂಕುಸಿತ ಹಾಗೂ ಜಲಪ್ರಳದಿಂದ ಮಂಡಕೈನಲ್ಲಿ ವಾಸವಿದ್ದ ಮೈಸೂರಿನ ದೇವರಾಜ್ ಅವರ ಕುಟುಂಬದ ಇಬ್ಬರು ಸದಸ್ಯರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಏಕಾಏಕಿ ಮನೆಯಲ್ಲಿ ಕೆಸರು ತುಂಬಿಕೊಂಡು ನೀರು ಹರಿಯುತ್ತಿದ್ದಂತೆ ದೇವರಾಜ್ ಪತ್ನಿ ಹಾಗೂ ಅವರ ಮೊಮ್ಮಗ ಕಣ್ಣಮುಂದೆಯೇ ಕೆಸರುಯುಕ್ತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಅವರನ್ನು ಕಾಪಾಡಲೂ ಆಗದೇ ನಿಸ್ಸಾಹಕ ಸ್ಥಿತಿಯಲ್ಲಿ ತಾವು ಓಡಿ ಹೋಗಿ ಜೀವ ಉಳಿಸಿಕೊಂಡು ಕಣ್ಣೀರಿಡುತ್ತಿದ್ದಾರೆ. ಈಗ ನಮಗೆ ಮೊಂಡಕೈ ಸಹವಾಸವೇ ಬೇಡ. ಎಲ್ಲವನ್ನು ಕಳೆದುಕೊಂಡು ಬೀದಿಗೆ ಬಂದಿರಿವ ನಾವು ನಮ್ಮೂರು ಮೈಸೂರಿಗೆ ಬರುತ್ತೇವೆ, ಸರ್ಕಾರದಿಂದ ನೆರವು ನೀಡಿ ಎಂದು ದೇವರಾಜ್ ಅವರ ಕುಟುಂಬ ಸದಸ್ಯರು ಮನವಿ ಮಾಡಿದ್ದಾರೆ.

Latest Videos

undefined

ವಯನಾಡು ಬಳಿಕ ಕೇರಳದ ಮತ್ತೊಂದು ಜಿಲ್ಲೆಯಲ್ಲೂ 9 ಬಾರಿ ಭೂಕುಸಿತ, ಓರ್ವ ನಾಪತ್ತೆ, 12 ಮನೆಗಳು ಸರ್ವನಾಶ!

ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದಿಂದ ಮೊಂಡಕೈ ಗ್ರಾಮಕ್ಕೆ ಹೋಗಿ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿದ್ದ ದೇವರಾಜ್‌ ಅವರು ಹೆಂಡತಿ ಲೀಲಾವತಿ, ಇಬ್ಬರು ಮಕ್ಕಳಾದ ಅನಿಲ್ ಹಾಗೂ ಸಂತೋಷ್, ಸೊಸೆ ಝಾನ್ಸಿರಾಣಿ ಹಾಗೂ ಮೊಮ್ಮಗ ನಿಹಾಲ್‌ನೊಂದಿಗೆ ಇಡೀ ಕುಟುಂಬ ಸದಸ್ಯರು ವಾಸವಾಗಿದ್ದರು. ಆದರೆ, ಈ ದುರ್ಘಟನೆಯಲ್ಲಿ ದೇವರಾಜ್ ಅವರ ಪತ್ನಿ ಲೀಲಾವತಿ ಹಾಗೂ ಮೊಮ್ಮಗ ನಿಹಾಲ್‌ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಈವರೆಗೆ ಅವರ ಶವ ಪತ್ತೆಯಾಗಿಲ್ಲ. ಶವವನ್ನಾದರೂ ಹುಡುಕಿಕೊಡಿ ಎಂದು ಸರ್ಕಾರದ ಮುಂದೆ ಕಣ್ಣೀರು ಹಾಕುತ್ತಿದ್ದಾರೆ. 

ನಮಗೆ ಮುಂಡಕೈ ಸಹವಾಸವೇ ಬೇಡ ಎನ್ನುತ್ತಿರುವ ದೇವರಾಜ್, ನನ್ನ ಕಣ್ಣ ಮುಂದೆಯೇ ಹೆಂಡತಿ ಹಾಗೂ ಮೊಮ್ಮಗ ಕೊಚ್ಚಿಕೊಂಡು ಹೋದರು. ದೊಡ್ಡ ದೊಡ್ಡ ಬಂಡೆಗಳು ಉರುಳಿ ಬಂದವು. ಕಣ್ಣಮುಂದೆಯೇ ನನ್ನ ಹೆಂಡ್ತಿ, ಮೊಮ್ಮಗ ಕೊಚ್ಚಿಕೊಂಡು ಹೋಗುತ್ತಿದ್ದರೂ ರಕ್ಷಿಸೋಕೆ ಆಗಲಿಲ್ಲ. ಮಗ ಹಾಗೂ ಸೊಸೆ ಉಳಿದಿದ್ದಾರೆ. ನಮ್ಮ ಬಳಿ ಏನೂ ಉಳಿದಿಲ್ಲ ಸರ್ಕಾರದಿಂದ ನಮಗೆ ಪರಿಹಾರ ಕೊಡಿ. ನಮ್ಮ ಬಳಿ ಏನೂ ಇಲ್ಲ ಸಾರ್ ಎಂದು ದೇವರಾಜ್ ಕಣ್ಣೀರು ಹಾಕಿದರು.

wayanad landslide ಮನ ಕಲುಕಿದ ಶವಗಳ ನಡುವೆ ತಮ್ಮವರಿಗಾಗಿ ಹುಡುಕಾಟ, ಸಿಕ್ಕಿದವರ ಕಣ್ಣಲ್ಲಿ ನೀರು

ಮಗುವನ್ನು ಕಳೆದುಕೊಂಡ ದೇವರಾಜ್ ಸೊಸೆ ಝಾನ್ಸಿರಾಣಿ ಮಾತನಾಡಿ, ನಾನು ಮಗನ ನೆನೆದು ಕಣ್ಣೀರು ಹಾಕಿದ್ದಾರೆ. ನನ್ನ ಮಗನನ್ನ ಹಿಡಿದುಕೊಳ್ಳೋಕೆ ಆಗಲಿಲ್ಲ. ಏಕಾಏಕಿ ಮಣ್ಣು ಕುಸಿತು ಎಲ್ಲರ ಮೇಲೆ ಮಣ್ಣು ತುಂಬಿಕೊಂಡಿತು. ನನ್ನ ಮಗನನ್ನ ಹಿಡಿದುಕೊಳ್ಳೋಕೆ ಪ್ರಯತ್ನ ಮಾಡಿದೆ ಆಗಲಿಲ್ಲ. ನನ್ನ ಮಗನನ್ನ ಹಿಡಿದುಕೊಳ್ಳಲು ಹೋದರೂ ಅಲ್ಲಿದ್ದವರು ನೀನು ಜೀವ ಉಳಿಸಿಕೋ ಎಂದು ಹೇಳಿ ನನ್ನನ್ನು ಎಳೆದುಕೊಂಡು ಹೊರಗೆ ಬಂದು ಜೀವ ಉಳಿಸಿದರು. ನನಗೆ ನನ್ಮ ಮಗನನ್ನು ಹುಡುಕಿಕೊಡಿ. ನನಗೆ ನನ್ನ ಮಗ ಬೇಕು. ನಮ್ಮ ಅತ್ತೆ ಕೂಡ ಕೊಚ್ಚಿಕೊಂಡು ಹೋದರು. ಎಲ್ಲಿ ಸಿಲುಕಿದ್ದಾರೋ, ನನ್ನ ಮಗ ಎಲ್ಲಿದ್ದಾನೋ ಹುಡುಕಿಕೊಡಿ ಎಂದು ಕಣ್ಣೀರು ಹಾಕಿದರು.

click me!